ಕನ್ಯಾನ ವಲಯದಲ್ಲಿ ಪ್ರತಿಭಾ ಪುರಸ್ಕಾರ

ಇತರೆ

ಮಂಗಳೂರು ಮಂಡಲದ ಕನ್ಯಾನ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.೨೭ರಂದು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಜರಗಿತು.

ಹತ್ತನೇ ತರಗತಿಯಲ್ಲಿ ಶೇ. ೯೦ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಕ್ಷಿತಾ.ಸಿ.ಎಚ್., ಅಮೃತ ವರ್ಷಿಣಿ ಎಂ., ಅನನ್ಯ ಲಕ್ಷ್ಮಿ. ಬಿ., ಕುಮಾರರಾದ ಸ್ವಸ್ತಿಕ ಕೃಷ್ಣ. ಪಿ. , ರಾಮಕೃಷ್ಣ. ಪಿ.ವಿ., ಶ್ರೀಶ ಶಂಕರ ಶರ್ಮ, ದ್ವಿತೀಯ ಪಿಯುಸಿಯಲ್ಲಿ ಶೇ. ೯೦ ಕ್ಕಿಂತ ಅಧಿಕ ಅಂಕ ಪಡೆದ ಶ್ರೀಶಕೃಷ್ಣ ಒಡಿಯೂರು, ವೈಷ್ಣವಿ ಪದ್ಯಾಣ, ವರಲಕ್ಷ್ಮಿ ಪಂಜಜೆ ಪ್ರತಿಭಾ ಪುರಸ್ಕಾರ ಗಳಿಸಿದರು.

ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶಿಮಠ, ಕಾರ್ಯದರ್ಶಿ ನಾಗರಾಜಭಟ್ಟ, ಮಂಡಲ ಗುಡಿಕಾರ ಖಂಡಿಗೆ ಉದಯ ಭಟ್ಟ, ಮಂಡಲ ವಿದ್ಯಾರ್ಥಿ ಪ್ರಧಾನ ಭಾಸ್ಕರ ಹೊಸಮನೆ, ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಈಶ್ವರ ಪ್ರಸಾದ ಉಪಸ್ಥಿತರಿದ್ದರು. ಕನ್ಯಾನ ವಲಯ ವಿದ್ಯಾರ್ಥಿವಾಹಿನೀ ಪ್ರಧಾನ ಡಾ.ವಿಶ್ವೇಶ್ವರ ವಿ.ಕೆ ಪ್ರಾಸ್ತಾವನೆಗೈದರು.

Author Details


Srimukha

Leave a Reply

Your email address will not be published. Required fields are marked *