ನೂತನ ಸಭಾಭವನ ‘ಹವ್ಯಗಂಧ’ದ ನಿರ್ಮಾಣ ಸ್ಥಳಕ್ಕೆ ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳ ಭೇಟಿ
ಕಾಯರಕಟ್ಟೆ: ಬಾಯಾರು ವಲಯದ ಕಾಯರಕಟ್ಟೆಯಲ್ಲಿ ನೂತನ ಸಭಾಭವನ ಹವ್ಯಗಂಧ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳದ ನೆಲವನ್ನು ಸಮತಟ್ಟುಮಾಡಲು ಭೂಖನನ ಕಾರ್ಯ ಪ್ರಾರಂಭಿಸಲಾಗಿದೆ. ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳಾದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಹವ್ಯಗಂಧ ನಿವೇಶನಕ್ಕೆ ಭೇಟಿ ಕೊಟ್ಟು ಕೆಲಸದ ಮಾಹಿತಿಗಳನ್ನು ಸಂಗ್ರಹಿಸಿ, ಸಲಹೆ ಸೂಚನೆಗಳನ್ನಿತ್ತರು. ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.
Continue Reading