ಬದಿಯಡ್ಕ: ಮುಳ್ಳೇರಿಯಾ ಮಂಡಲದ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೋದಯ ಸಂಸ್ಥೆಗೆ ಶ್ರೀ ಮಠದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕಾರ್ಯದರ್ಶಿ ಕಿರಣಾ ಮೂರ್ತಿ ಏತಡ್ಕ, ಜತೆ ಕಾರ್ಯದರ್ಶಿ ಕುಸುಮಾ ಪೆರ್ಮುಖ, ಲೆಕ್ಕ ಪರಿಶೋಧಕಿ ಗಾಯತ್ರಿ, ಸ್ಮಿತಾ ಸರಳಿ, ಸಿಬ್ಬಂದಿ ಶಾಂತಿ, ಜಯಪ್ರಕಾಶ ಪಜಿಲ ಜೊತೆಗಿದ್ದರು.