ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರದ ವತಿಯಿಂದ ೧ಲೋಡ್ ಮೇವು ಚಿಕ್ಕಬಳ್ಳಾಪುರ ಭಾಗದಿಂದ ಸಂಗ್ರಹಿಸಿ ಹೊಸನಗರ, ನಗರ ಪ್ರದೇಶದ ನೆರೆ ಸಂತ್ರಸ್ತರಿಗೆ ವಿತರಣೆ ಮಾಡಲಾಯಿತು.
ಮೇವಿನ ಪ್ರಾಯೋಜಕತ್ವವನ್ನು ಭಾರತೀಯ ಗೋ ಪರಿವಾರ ಚಿಕ್ಕಬಳ್ಳಾಪುರ ಸಂಚಾಲಕ ನಾರಾಯಣಪ್ಪ ಮತ್ತು ತಂಡ ಮಾಡಿದರು. ಶ್ರೀರಾಮಚಂದ್ರಾಪುರ ಮಠ ಸಾಗಾಣಿಕೆಯ ಜಾವಾಬ್ದಾರಿ ವಹಿಸಿದ್ದು, ಭಾರತೀಯ ಗೋಪರಿವಾರದ ಶ್ರೀಸಂಯೋಜಕ ಆರ್ ಕೆ ಭಟ್ ಸಂಯೋಜನೆ ಮಾಡಿದ್ದಾರೆ.
ಭಾರತೀಯ ಗೋಪರಿವಾರ ಮಾರ್ಗದರ್ಶಕ ವಿ ಡಿ ಭಟ್ ಮತ್ತು ತಂಡದ ಸಂಯೋಜನೆಯಲ್ಲಿ ಅಂಕೋಲ, ಗುಂಡಬಾಳ, ಹಿಲ್ಲೂರು ಭಾಗದ ನೆರೆಸಂತ್ರಸ್ತ ಪ್ರದೇಶದ ರೈತರ ರಾಸುಗಳಿಗೆ ಕಲಘಟಗಿಯಿಂದ ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಪ್ರಾಯೋಜಕತ್ವದಲ್ಲಿ ೪ ಪಿಕಪ್ ಮೇವು ವಿತರಣೆ ಮಾಡಲಾಗಿದೆ.
1 thought on “ಭಾರತೀಯ ಗೋ ಪರಿವಾರದಿಂದ ಮುಂದುವರಿದ ನೆರವು ವಿತರಣೆ”