ಗೋವಿನ ಮೇವಿಗಾಗಿ ಗೋಪ್ರೇಮಿಗಳು ಮಾಡಿದ್ದೇನು?

ಸುದ್ದಿ

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲ ಕತ್ತರಿಸಿ ಕೊಡುವ ಮಹಾ ಕಾರ್ಯ ಅ.13ರ ಭಾನುವಾರ ವಿದ್ಯಾನಗರ ಕುರುಡರಶಾಲೆಯ ಮುಂಭಾಗದ ಮಹಾತ್ಮಗಾಂಧಿ ಕಾಲೊನಿಯಲ್ಲಿ ನಡೆಯಿತು.

 

ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾಮದುಘಾ ವಿಭಾಗದ ಡಾ. ವೈ.ವಿ.ಕೃಷ್ಣಮೂರ್ತಿ ಮತ್ತು ಕಿರಣಮೂರ್ತಿ ದಂಪತಿಗಳ ಪುತ್ರ ಅಶ್ವಿನಿರಮಣ ಅವರು ಸಾಗಾಟದ ಖರ್ಚು ನೀಡುವ ಮೂಲಕ ಜನ್ಮದಿನವನ್ನು ಆಚರಿಸಿದರು. ಕಾಸರಗೋಡು ಸೇವಾ ಪಧಾನ ಮುರಳಿ ಮೊಗ್ರಲ್ ಹುಲ್ಲು ಕಟಾವು ಮಾಡಿ ಸಹಕರಿಸಿದರು.

 

ಮಾತೃತ್ವಮ್ ಪಧಾನರಾದ ಈಶ್ವರಿ ಶ್ಯಾಮ್ ಭಟ್, ಶಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಿಂಧು-ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಕಾಸರಗೋಡು ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್, ಉಪಾಧ್ಯಕ್ಷ ಬಿ.ಮಹಾಬಲ ಭಟ್, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಕೋಶಾಧಿಕಾರಿ ರಮೇಶ ಭಟ್, ಗುರಿಕ್ಕಾರಾದ ತೆಕ್ಕೇಕರೆ ಶಂಕರನಾರಾಯಣ ಭಟ್, ಮಾತೃಪ್ರಧಾನೆ ಪ್ರೇಮಲತಾ ಸಿ ಭಟ್, ಸವಿತಾ ಯಸ್.ಯನ್.ಭಟ್, ಸವಿತಾ ಆರ್ ಭಟ್, ವೈ.ಕೆ.ಗೋವಿಂದ ಭಟ್, ಈಶ್ವರಚಂದ್ರ ಟಿ, ಪ್ರೇಮ್ ಪ್ರಕಾಶ, ಯಸ್. ಯನ್. ಪ್ರಸಾದ, ಗೋಶಾಲೆ ಕಾರ್ಯದರ್ಶಿ ಶ್ರೀಧರ ಭಟ್, ಕಿರಣಶಂಕರ ಭಟ್ ಉಪಸ್ಥಿತರಿದ್ದರು.

 

ಮಾದರಿ ಕಾರ್ಯ:
೨೦೧೮ರಲ್ಲಿ ಕಾಸರಗೋಡು ವಲಯದಿಂದ ಪ್ರಾರಂಭವಾದ ಗೋವಿಗಾಗಿ ಮೇವು – ಮೇವಿಗಾಗಿ ನಾವು ಕಾರ್ಯಕ್ರಮ ಪಸರಿಸುವಂತೆ ಕಾಮದುಘಾ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿಯವರು ಮಾಡಿದ್ದು, ಎಲ್ಲಾ ವಲಯ ಮಂಡಲಗಳಿಗೆ ಈ ಕಾರ್ಯ ಮಾದರಿಯಾಗಿದೆ.

ಗೋವಿನ ಸೇವೆಗಾಗಿ ಆಗಮನ!
ಬೆಂಗಳೂರು ನಿವಾಸಿ ಆಡಳಿತ ಖಂಡದ ಅಂತರ್ಜಾಲ ವಿಭಾಗದ ಸಹಕಾರ್ಯದರ್ಶಿಯಾದ ಅಂಬಿಕಾ ವೆಂಕಟೇಶ ದಂಪತಿಗಳು ಬಂದದ್ದು ವಿಶೇಷವಾಗಿತ್ತು. ಗೋವಿಗಾಗಿ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಆಗಮಿಸಿದ ಇವರು ಹುಲ್ಲು ಕಟ್ಟ ಮಾಡಲು ಕಾರ್ಯಕರ್ತರ ಜತೆಗೆ ಸೇರಿಕೊಂಡರು. ಹುಲ್ಲುಸಾಗಾಟದ ವೆಚ್ಚವಾಗಿ ೨ಸಾವಿರ ಸಮರ್ಪಣೆ ಮಾಡಿದರು. ಹವ್ಯಕಸೇವಾ ಭಾರತೀ ಟ್ರಸ್ಟ್ ನ ಡಾ.ವೆಂಕಟಗಿರಿ ಅವರು ಹುಲ್ಲುಕತ್ತರಿಸುವಲ್ಲಿಗೆ ಬಂದು ಕಾರ್ಯಕರ್ತರ ಶ್ರಮಕ್ಕೆಮೆಚ್ಚುಗೆ ಸೂಚಿಸಿದರು.

Author Details


Srimukha

1 thought on “ಗೋವಿನ ಮೇವಿಗಾಗಿ ಗೋಪ್ರೇಮಿಗಳು ಮಾಡಿದ್ದೇನು?

Leave a Reply

Your email address will not be published. Required fields are marked *