ಕಾಂಚಿಪುರಂ: ಶ್ರೀ ಕಾಂಚಿ ಕಾಮಕೋಟಿ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು.
ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಮಠ ಸಂಸ್ಥಾನ ಕಾಂಚಿ ಕಾಮಕೋಟಿ ಪೀಠಾಧೀಶ್ವರರಾದ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಸತ್ಯ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡಿತು.
ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.