ಮುಳ್ಳೇರಿಯ ಮಂಡಲದಿಂದ ಸಂತತಿ ಮಂಗಲ ಕಾರ್ಯಕ್ರಮ

ಇತರೆ

ಮುಳ್ಳೇರಿಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ನಿರ್ದೇಶಾನುಸಾರ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ ಆಶ್ರಯದಲ್ಲಿ ಪಳ್ಳತ್ತಡ್ಕ ವಲಯದ ಮುದ್ದು ಮಂದಿರದಲ್ಲಿ ವಿಶಿಷ್ಟ ಕಲ್ಪನೆಯ ಸಪ್ತ ಮಂಗಲಗಳಲ್ಲಿ ಒಂದಾದ, ನಮ್ಮ ಮುಂದಿನ ಪೀಳಿಗೆಯ ಶೇಯಸ್ಸಿಗಾಗಿ ನಾವು ಕೈಗೊಳ್ಳುವ ಕ್ರಮಗಳ ಕುರಿತು ತಿಳಿದು ಕೊಳ್ಳುವ ಸಂತತಿ ಮಂಗಲ ಕಾರ್ಯಕ್ರಮ ಮುಳ್ಳೆರಿಯ ಮಂಡಲ ಮಾತೃ ಪ್ರಧಾನರ ನೇತೃತ್ವದಲ್ಲಿ ಜರಗಿತು.

ಕಾರ್ಯಕ್ರಮವನ್ನು ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇಕ೯ಡವು ಉದ್ಘಾಟಿಸಿದರು. ಮಂಡಲ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಸರ್ಪಮಲೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯ ಮಂಡಲ ಮಾತೃ ಪ್ರಧಾನವಾದ ಕುಸುಮಾ ಪೆಮು೯ಖ, ಸಂಘಟನ ಕಾರ್ಯದರ್ಶಿ ಶ್ರೀ ಕೇಶವಪ್ರಸಾದ್ ಎಡಕ್ಕಾನ, ಉಪಾಧ್ಯಕ್ಷರಾದ ಡಾಕ್ಟರ್ ಬೇ ಸೀ ಗೋಪಾಲಕೃಷ್ಣ ಭಟ್, ಸಹಾಯ ವಿಭಾಗ ಪ್ರಧಾನರಾದ ಮಹೇಶ ಸರಳಿ, ಬಿoದು ಸಿ೦ಧು ವಿಭಾಗ ಪ್ರಧಾನವಾದ ಉಳುವಾನ ಈಶ್ವರ ಭಟ್, ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ, ಪಳ್ಳತ್ತಡ್ಕ ವಲಯ ಅಧ್ಯಕ್ಷ ಪರಮೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

ಡಾಕ್ಟರ್ ಶೋಭಾ ಕಾಟಿಪಳ್ಳ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಗಳನ್ನು ನೀಡಿ ಪ್ರತ್ಯೇಕವಾಗಿ ತಂದೆ ತಾಯಂದಿರು ಮಕ್ಕಳಿಗೆ ನೀಡಬೇಕಾದ ಪ್ರೀತಿ, ಸಲುಗೆ ಮೊದಲಾದವುಗಳ ಕುರಿತಾಗಿಯೂ ನೀಡುವ ಸ್ವಾತಂತ್ರದ ಕುರಿತಾಗಿಯೂ ಪರಸ್ಪರ ಹೊಂದಾಣಿಕೆ, ಮಕ್ಕಳ ಮೇಲೆ ಪ್ರೀತಿಪೂವ೯ಕ ಹಿಡಿತವನ್ನು ಕಾಯ್ದುಕೊಳ್ಳುವುದು ಇತ್ಯಾದಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿಕೊಟ್ಟರು.

ಗುರುವಂದನೆ ಗೋವoದನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಶ್ರೀ ರಾಮ ತಾರಕ ಮಂತ್ರ ಪಠಣ ಶಾಂತಿಮಂತ್ರ ಧ್ವಜಾವರೋಹಣದೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ 69 ಮಂದಿ ಭಾಗವಹಿಸಿದ್ದರು.

ಕುಸುಮಾ ಪೆಮು೯ಖ ಸ್ವಾಗತಿಸಿ ಮಾತೃತ್ವಮ್ ಮಂಡಲ ಕೋಶಾಧಿಕಾರಿ ಶಿವಕುಮಾರಿ ಕುಂಚಿನಡ್ಕ ವಂದಿಸಿದರು. ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ ನಿರೂಪಿಸಿದರು.

Leave a Reply

Your email address will not be published. Required fields are marked *