ಕಾಸರಗೋಡು: ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು.
ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದರ್ಶನವನ್ನು ಪಡೆದ ಶ್ರೀರಾಮಚಂದ್ರಾಪುರ ಮಠದ ನಿಯೋಗ.
ಮಠದ ನಿಯೋಗದಲ್ಲಿ ಡಾ. ವೈ ವಿ. ಕೃಷ್ಣ ಮೂರ್ತಿ, ಕೆ. ಎನ್. ಭಟ್, ನವನೀತ ಪ್ರಿಯ, ಬಳ್ಳಮೂಲೆ ಗೋವಿಂದ ಭಟ್, ಶಾಮಪ್ರಸಾದ್ ಮತ್ತಿತರರು ತೆರಳಿದ್ದರು.