ಗುಂಪೆ: ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಪೊಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಜ.೧೮ ರಂದು ಬಜಕೂಡ್ಳು ಅಮೃತಧಾರಾ ಗೋ ಶಾಲೆಯ ಗೋಮಾತೆಗಳಿಗಾಗಿ ’ಗೋವಿಗಾಗಿ ಮೇವು’ ಸೇವಾ ಅರ್ಘ್ಯ ಕಾರ್ಯಕ್ರಮ ನೆರವೇರಿತು.
ಗುಂಪೆ ವಲಯ ಬಿಂದು-ಸಿಂಧು ಪ್ರಧಾನರಾದ ಶಂಕರನಾರಾಯಣನ್ ಗುಂಪೆ ಧ್ವಜಾರೋಹಣಗೈದರು. ಗುರುವಂದನೆ, ಗೋವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಗುರುಮೂರ್ತಿ ಮೇಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಜಕ್ಕೂಡ್ಲು ಗೋ ಶಾಲೆ ಸಹಕಾರ್ಯದರ್ಶಿ ಗಣರಾಜ ಕಡಪ್ಪು ಉಪಸ್ಥಿತರಿದ್ದರು. ನಂತರ ಬಜಕ್ಕೂಡ್ಲು ಗೋಶಾಲೆಯ ಗೋವುಗಳಿಗಾಗಿ ಪುಟಾಣಿಗಳ ಸಹಿತ ಎಲ್ಲಾ ಗೋ ಸೇವಕರು ಉತ್ಸಾಹದಿಂದ ಮೇವು ಸಂಗ್ರಹಿಸಿದರು. ಬೆತ್ತಕಾಡು ಪರಮೇಶ್ವರಿ ಅಮ್ಮ ಅವರು ಗೋ ಸೇವಕರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಸಂಗ್ರಹಿಸಿದ ಮುಳಿಹುಲ್ಲನ್ನು ಗೋ ಶಾಲಾ ಸಮಿತಿಯವರು ಬಜಕ್ಕೂಡ್ಲು ಗೋ ಶಾಲೆಗೆ ಸಾಗಿಸಿದರು.