ಇದೆಂಥಾ ಉತ್ಕೃಷ್ಟ ಭಾವೋನ್ಮಾದ …..
ರಾಮ ಸ್ಮರಣೆಯ ಸಾಗರದಲಿ ತೇಲಿ…..
ಹೃದಯದಲಿ ಮಗುವಿನ ನರ್ತನ…
ತೋಯುತಿದೆ ಆನಂದದಲಿ ನಯನ….
ನನ್ನೊಳಗಿನ ರಾವಣನ ಸಂಹಾರ
ಇದುವೇ ಭಕ್ತಿಯ ಅನಾವರಣ …….
ಮನದೆಲ್ಲಾ ಕ್ಲೇಷಗಳ ತೊಳೆದು
ರಾಮ ರಸ ಗಂಗೆ ಹರಿಯುತಲಿಹುದು…….
ರಾಮ ಕಥೆಯ ರಸದೌತಣವನುಂಡು
ಮನದಲಿ ಶಾಂತಿ ತುಂಬಿಹುದು…
ಜಗದೆಲ್ಲೆಡೆ ರಾಮ ನಾಮ ನದಿ ಹರಿಯಲಿ…
ಇಳೆಯ ಕೊಳೆಯನು ಪುನಃ ಬರದಂತೆ ತೊಳೆಯಲಿ…
ರಾಗ ದ್ವೇಷಗಳಲಿದು ಪರಿಶುಧ್ಧ ಪ್ರೇಮ ಉಳಿಯಲಿ……
ಎಲ್ಲರ ಹೃದಯದಲಿ ಪರಿಪೂರ್ಣ ರಾಮ ನೆಲೆ ನಿಲ್ಲಲಿ…