ಮುಳ್ಳೇರ್ಯ ಹವ್ಯಕ ಮಂಡಲದ ಸಭೆ

ಉಪಾಸನೆ

ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠ ಶ್ರಾವಣಕೆರೆ ಸಭಾ೦ಗಣದಲ್ಲಿ ಜರಗಿತು.

 

ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಇವರು ಅಧ್ಯಕ್ಷತೆ ವಹಿಸಿದ್ದರು.

 

ಶ್ರಾವಣಕೆರೆ ಮಠದಲ್ಲಿ ಜನವರಿ 16 ರಿ೦ದ 20 ರ ತನಕ ಶ್ರೀಸಂಸ್ಥಾನದವರ ಪೂರ್ಣಾನುಗ್ರಹ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿರುವ ಬ್ರಹ್ಮಕಲಶೋತ್ಸವ ಸಮಾರ೦ಭದ ಕುರಿತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ರಾಧಾಕೃಷ್ಣ ಹೆಬ್ಬಾರ ಅವರು ಮಾಹಿತಿಗಳನ್ನಿತ್ತರು.

 

ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ಮಂಡಿಸಿದರು.

 

ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು.

 

Author Details


Srimukha

Leave a Reply

Your email address will not be published. Required fields are marked *