ಆದಿಗುರು ಶಂಕರರ ಚಿತ್ರರಚನೆ ಸಮರ್ಪಿಸಿದ ಚಿತ್ರಕಾರ ರವೀಂದ್ರ ಹೆಗಡೆ

ಕಲೆ ~ ಸಾಹಿತ್ಯ

ಬೆಂಗಳೂರು: ಸಿದ್ದಾಪುರ ಮಂಡಲದ ಮುಗದೂರಿನ ಚಿತ್ರ ಕಲಾವಿದ ಶ್ರೀ ರವೀಂದ್ರ ಹೆಗಡೆಯವರು ಆದಿಗುರು ಶಂಕರಾಚಾರ್ಯ ಅವರ ತ್ವರಿತ ಚಿತ್ರ (ಸ್ಪೀಡ್ ಪೈಂಟ್) ಬಿಡಿಸಿ ಗಿರಿನಗರದ ರಾಮಾಶ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿ ಪ್ರಶಂಸೆ ಹಾಗೂ ಆಶೀರ್ವಾದ ಪಡೆದರು.

 

ಹೊಸನಗರದ ಗುರುಕುಲದಲ್ಲಿ ವಿದ್ಯಾರ್ಥಿಯಾಗಿದ್ದ ರವೀಂದ್ರ ಶ್ರೀ ರಾಮಕೃಷ್ಣ ಹೆಗಡೆಯವರ ಪುತ್ರ. ಸದ್ಯ ಡಿಪ್ಲೊಮಾ ಅಭ್ಯಾಸ ಮಾಡುತ್ತಿದ್ದು, ಸ್ವತಃ ತಾನೇ ಸ್ಪೀಡ್ ಪೈಂಟ್ ಕಲೆಯನ್ನು ಕಲಿತಿದ್ದರು.

 

ಆದಿಗುರು ಶಂಕರಾಚಾರ್ಯರ ಅಂದವಾದ ಚಿತ್ರ ಬಿಡಿಸಿ ಶ್ರೀಸಂಸ್ಥಾನದವರಿಂದ ಮೆಚ್ಚುಗೆ ಪಡೆದರು.

 

ಗೋಸ್ವರ್ಗ ನಿರ್ಮಾಣದ
ಸಮಯದಲ್ಲಿ ಶ್ರೀ ಗೋಪಾಲಕೃಷ್ಣನ ಚಿತ್ರವನ್ನು ಸಮರ್ಪಣೆ ಮಾಡಿದ್ದರು.

 

Author Details


Srimukha

Leave a Reply

Your email address will not be published. Required fields are marked *