ಮುಂಬಯಿ ಪುಣೆ ವಲಯಗಳ ದೀಪಗಾಣಿಕೆ ಸಮರ್ಪಣೆ

ಉಪಾಸನೆ

ಮುಂಬಯಿ: ಪುಣೆ, ಮುಂಬಯಿ ವಲಯಗಳ ವಾರ್ಷಿಕ ದೀಪಗಾಣಿಕೆ ಸಮರ್ಪಣಾ ಕಾರ್ಯಕ್ರಮವು, ಅಖಂಡ ರಾಮತಾರಕದೊಂದಿಗೆ ಜನವರಿ 20, 2019ರಂದು ಸಾಂತಾಕ್ರೂಜ ಪೇಜಾವರ ಮಠದಲ್ಲಿ ನಡೆಯಿತು.

 

ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯಿತು. 55 ಮಂದಿ‌ ಸೇರಿ 84,000 ಸಂಖ್ಯೆಯಲ್ಲಿ ರಾಮತಾರಕ ಜಪ ಮಾಡಿದರು. ಅನಂತರ ಸತ್ಯನಾರಾಯಣ ಕಥೆಯ ಪಾರಾಯಣ ನಡೆಯಿತು. ಕೊನೆಗೆ ದೀಪಗಾಣಿಕೆ ಸಮರ್ಪಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಕಗಳ ಗುರಿಕಾರರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Author Details

Avatar
Srimukha

Leave a Reply

Your email address will not be published. Required fields are marked *