ಗೋವಾ ಹವ್ಯಕ ವಲಯದಲ್ಲಿ ದೀಪ ಗಾಣಿಕೆ ಸಮರ್ಪಣೆ

ಉಪಾಸನೆ

ಗೋವಾ: ಗೋವಾ ವಲಯದ, ಮೂರೂ ಘಟಕಗಳ ವಾರ್ಷಿಕ ದೀಪಗಾಣಿಕೆ ಸಮರ್ಪಣಾ ಕಾರ್ಯಕ್ರಮ ಜನವರಿ 20, 2019ರಂದು ನಡೆಯಿತು.

 

ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಮೊದಲು 15 ಜನರು ಸಾಮೂಹಿಕ 123 ಆದಿತ್ಯಹೃದಯ ಪಾರಾಯಣ ನೆರವೇರಿಸಿದರು. ಇದರೊಂದಿಗೆ 184 ವೈಯಕ್ತಿಕ ಪಾರಾಯಣದೊಂದಿಗೆ ವಲಯದ ಒಟ್ಟು ಪಾರಾಯಣ ಸಂಖ್ಯೆ 307. ಅನಂತರ ದೀಪಗಾಣಿಕೆ ಸಮರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ, ಅಧ್ಯಕ್ಷ ಶ್ರೀ ವಿ.ಪಿ. ಹಿರೇಗಂಗೆ ಸ್ವಾಗತಿಸಿದರು.
ಶ್ರೀ ಮಹಾಬಲ ಭಟ್ಟ ಸಭೆಗೆ ಹವ್ಯಕ ಸಮ್ಮೇಳನದ ವರದಿಯನ್ನು, ಶ್ರೀಮಹೇಶ್ ಹೆಗಡೆ ಅಪ್ಸರಕೊಂಡ ಕಾರ್ಯಕ್ರಮದ ವರದಿಯನ್ನು

ಶ್ರೀ ಡಿ. ಕೆ. ಹೆಗಡೆ ಗೋಕರ್ಣದ ಅತಿರುದ್ರ ಕಾರ್ಯಕ್ರಮದ ವರದಿಯನ್ನು ಸಭೆಗೆ ನೀಡಿದರು. ಶ್ರೀ ಗಿರೀಶ್ ಹೆಗಡೆ ಹೊಸಾಡ ಗೋಶಾಲೆಯಲ್ಲಿ ನಡೆಯಲಿರುವ ಗೋಸಂಧ್ಯಾ ಹಾಗೂ ವಾಳಪಯಿ ಗೋಶಾಲೆ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು ಮತ್ತು ಆ ಕಾರ್ಯಕ್ರಮಗಳಿಗೆ ದೇಣಿಗೆ ಸಂಗ್ರಹವೂ ಈ ಸಂದರ್ಭದಲ್ಲಿ ನಡೆಯಿತು.

 

ಇದಲ್ಲದೇ ಈ ಸಭೆಯಲ್ಲಿ, ಫೆಬ್ರವರಿ 24 ರಂದು ಮಡಗಾಂವಿನಲ್ಲಿ ಗೀತ ರಾಮಾಯಣ ಕಾರ್ಯಕ್ರಮ ನಡೆಸುವ ಬಹ್ಗೆ ಚರ್ಚಿಸಿ ನಿರ್ಧರಿಸಲಾಯಿತು. ಕೊನೆಗೆ ಶಾಂತಿ ಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.

 

ಈ ಸಂದರ್ಭದಲ್ಲಿ ಮೂರೂ ಘಟಕಗಳ ಗುರಿಕಾರರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

 

Author Details


Srimukha

Leave a Reply

Your email address will not be published. Required fields are marked *