ಗೋವಾ ಹವ್ಯಕ ವಲಯದಲ್ಲಿ ಕಾರ್ತಿಕ ದೀಪೋತ್ಸವ; ಕುಂಕುಮಾರ್ಚನೆ, ಅಷ್ಟಾವಧಾನ ಸೇವೆಯ ಜೊತೆಗೆ ಆಹಾರೋತ್ಸವದ ಸಡಗರ

ಉಪಾಸನೆ ಸುದ್ದಿ

ಗೋವಾ: ಗೋವಾ ಹವ್ಯಕವಲಯವು ಕಾರ್ತಿಕ ದೀಪೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಿದೆ. ದಿನಾಂಕ 24.11.2018ರ ಶನಿವಾರ ಮಡಗಾಂವ್ ನ ಗಜಾನನ ಮಹಾರಾಜರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕುಂಕುಮಾರ್ಚನೆ, ಅಷ್ಟಾವಧಾನ ಸೇವೆ, ದೀಪಾರಾಧನೆ ಹಾಗೂ ಆಹಾರೋತ್ಸವಗಳನ್ನು ಏರ್ಪಡಿಸಲಾಗಿತ್ತು.

 

ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಲಯದ ಮಾತೃ ವಿಭಾಗ ಪ್ರಧಾನೆ ಶ್ರೀಮತಿ ಮಮತಾ ಹೆಗಡೆ ಹಾಗೂ ಕಾರ್ಯದರ್ಶಿ ಶ್ರೀಮತಿ ರೇಖಾ ಹೆಗಡೆ ಇವರ ನೇತೃತ್ವದಲ್ಲಿ ಹದಿನೈದು ಮಹಿಳೆಯರು ಕುಂಕುಮಾರ್ಚನೆ ನಡೆಸಿದರು. ವಲಯದ ಸಂಸ್ಕಾರ ಪ್ರಧಾನ ಶ್ರೀ ಮಹಾಬಲ ಭಟ್ ಇವರು ಅಷ್ಟಾವಧಾನ ಸೇವೆಯ ನೇತೃತ್ವ ವಹಿಸಿ ಸಂಕ್ಷಿಪ್ತವಾಗಿ ದೀಪದ ಮಹತ್ತ್ವವನ್ನು ವಿವರಿಸಿದರು.

 

ಭಾವಪೂರ್ಣ ಗೀತೆಗಳನ್ನು ಹಾಡುತ್ತಾ ಎಲ್ಲರೂ ಒಂದೊಂದು ದೀಪವನ್ನು ಹಚ್ಚುವ ಮೂಲಕ ಆತ್ಮಜ್ಯೋತಿಯನ್ನು ಬೆಳಗುವ ಸಂಕಲ್ಪ ಮಾಡಿದರು.

 

ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ರುಚಿ ಶುಚಿಯಾದ ಹವ್ಯಕ ಭಕ್ಷ್ಯಗಳು ಆಹಾರೋತ್ಸವದಲ್ಲಿ ಎಲ್ಲರ ಜಠರಾಗ್ನಿಯನ್ನು ಶಮನಗೊಳಿಸಿತ್ತಲ್ಲದೆ ಮನಸ್ಸಿಗೂ ಮುದ ನೀಡಿತು.

 

ಈ ಕಾರ್ಯಕ್ರಮದಲ್ಲಿ ಹವ್ಯಕ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರಲ್ಲದೆ ಗಜಾನನ ಮಹಾರಾಜ ಮಠದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.

 

ಕೊನೆಯಲ್ಲಿ ಗೋವಾ ಹವ್ಯಕವಲಯದ ಅಧ್ಯಕ್ಷರಾದ ಶ್ರೀ ವೆಂಕಟರಮಣ ಹಿರೇಗಂಗೆ ವಂದನಾರ್ಪಣೆಗೈದರು.

 

Author Details


Srimukha

Leave a Reply

Your email address will not be published. Required fields are marked *