ಮುಂಬೈ ಹವ್ಯಕವಲಯದಲ್ಲಿ ರಕ್ತದಾನ ಶಿಬಿರ ಆಯೋಜನೆ

ಸುದ್ದಿ

ಮುಂಬೈ: ಮಹಾನಗರ ಮುಂಬೈ ವಲಯ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ೬೧ ಬಾಟಲ್ ರಕ್ತ ಸಂಗ್ರಹವಾಯಿತು.

 

ನಗರದ ಪೇಜಾವರ ಮಠ ಹಾಗೂ ಸಂತ ಕ್ರೂಜ್ ಪ್ರದೇಶದಲ್ಲಿ 26-11-2018 ರಂದು ಜೆ.ಜೆ. ಪಥಪೆಧಿ, ಥಾಣೆ ರಕ್ತನಿಧಿಯವರ ಸಹಯೋಗದಲ್ಲಿ ಮುಂಬೈ ಹವ್ಯಕವಲಯವು ಆಯೋಜಿಸಿದ್ದ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

 

ಪೆನ್ ಉಡುಗೊರೆ : ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಹಾಗೂ ರಕ್ತನಿಧಿ ಸಿಬ್ಬಂದಿಗೆ ಮುಂಬೈ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಗುಡ್ಡೆಬಾಳ್ ಅವರು ಪ್ರತಿಯೊಬ್ಬರಿಗೆ ಕಾಣಿಕೆಯಾಗಿ ಪೆನ್ ವಿತರಿಸಿ ಕೃತಜ್ಞತೆ ಸಲ್ಲಿಸಿದರು.
ಪೆನ್ ಪ್ರಾಯೋಜಕತ್ವವನ್ನು ಶ್ರೀ ಪ್ರಕಾಶ್ ಭಟ್ ವಹಿಸಿಕೊಂಡಿದ್ದರು.

Author Details


Srimukha

Leave a Reply

Your email address will not be published. Required fields are marked *