ಯಲ್ಲಾಪುರದಲ್ಲಿ ವಿಶ್ವಹವ್ಯಕ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತಾ ಸಭೆ

ಸುದ್ದಿ

ಯಲ್ಲಾಪುರ: ಯಲ್ಲಾಪುರ ಪಟ್ಟಣದ ಟಿಎಂಸಿ ಸಭಾಭವನದಲ್ಲಿ ವಿಶ್ವಹವ್ಯಕ ಸಮ್ಮೇಳನದ‌ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

 

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಶ್ರೀ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜವನ್ನು ಒಗ್ಗೂಡಿಸಲು ಮತ್ತು ಹವ್ಯಕರ ಏಳಿಗೆಗೆ ಚಿಂತನೆ ನಡೆಸಲು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಡಿಸೆಂಬರ್ ೨೮ ರಿಂದ ೩೦ ರವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

 

ಅಲ್ಲದೇ ಎಲ್ಲ ಹವ್ಯಕ ಬಂಧುಗಳು ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ಮನವಿ‌ ಮಾಡಿದರು.

 

ಹವ್ಯಕ ಮಹಾಸಭೆಯ ಕಾರ್ಯದರ್ಶಿ ಶ್ರೀ ಪ್ರಶಾಂತ‌ ಭಟ್ಟ, ನಿರ್ದೇಶಕರಾದ ಶ್ರೀ ಟಿ.ಎನ್.ಭಟ್, ಶ್ರೀ‌ ಪ್ರಶಾಂತ ಹೆಗಡೆ, ಪ್ರಮುಖರಾದ ಶ್ರೀ ಪ್ರಮೋದ ಹೆಗಡೆ, ಶ್ರೀ ಡಿ. ಶಂಕರ್ ಭಟ್, ಶ್ರೀ ಎನ್.ಕೆ‌ ಭಟ್ಟ ಅಗ್ಗಾಶಿಕುಂಬ್ರಿ, ಶ್ರೀ ಎಮ್.ಆರ್ ಹೆಗಡೆ ಕುಂಬ್ರಿಗುಡ್ಡೆ, ಶ್ರೀ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸೇರಿ ಹಲವರು ಪಾಲ್ಗೊಂಡಿದ್ದರು. ಶ್ರೀ ವಿ.ಟಿ. ಹೆಗಡೆ ನಿರ್ವಹಿಸಿದರು.

Author Details


Srimukha

Leave a Reply

Your email address will not be published. Required fields are marked *