ರಾಮಚಂದ್ರಾಪುರ (ಹೊಸನಗರ) : ಶ್ರೀಮಠವು ಧಾರ್ಮಿಕಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆಆರ್ಥಿಕ ನೆರವು ನೀಡುವುದರಲ್ಲೂ ಯಾವಾಗಲೂ ಮುಂದು ಎಂದು ಮಂಡಲ ಅಧ್ಯಕ್ಷ ರಮೇಶ ಗುಂಡೂಮನೆ ಹೇಳಿದರು.
ಹೊಸನಗರದ ಪ್ರಧಾನ ಮಠದಲ್ಲಿ ೨೫-೧೧-೨೦೧೮ (ಭಾನುವಾರ)ರಂದು ನಡೆದ ವಿದ್ಯಾಸಹಾಯ ನಿಧಿ 2018- 19ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾಸಹಾಯ ನಿಧಿಯು ಹಣಕಾಸಿನ ನೆರವು ಮಾತ್ರವಲ್ಲದೇ ಬದುಕಿಗೆ ಬೆಳಕು ನೀಡುವ ಅನುಗ್ರಹವೂ ಆಗಿದೆ’ ಎಂದರು. ವಿದ್ಯಾರ್ಥಿಗಳು ಸಮಾಜ ಗೌರವಿಸುವ ಸ್ಥಾನವನ್ನು ಸಂಪಾದಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿವಾಹಿನಿ ಪ್ರಧಾನ ಗಣೇಶ ಹುಲಿಮನೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಭಾನುಮತಿ,
ಕಾರ್ಯದರ್ಶಿ ಪ್ರಸನ್ನ ಉಡುಚೆ, ಕೋಶಾಧ್ಯಕ್ಷ ರಮೇಶ ಕಾನುಗೋಡು, ಪ್ರಕಾಶ ಬೇರಾಳ, ಶ್ರೀಕಾಂತ ಬಾಗಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ವಲಯ ಪ್ರತಿನಿಧಿಗಳು ಉಪಸ್ಥಿತರಿದ್ದರು.