ಬೆಂಗಳೂರು: ಬೆಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಅವರ ಮನೆ ‘ಸಾಕ್ಷಾತ್ಕಾರ ಕಲಾನಿಕೇತನದಲ್ಲಿ’ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ನವೆಂಬರ್ 22ರಂದು ಯಶಸ್ವಿಯಾಗಿ ನಡೆಯಿತು.
ಮಂಡಲದ ಅಧ್ಯಕ್ಷರಾದ ಶ್ರೀ ಜಿ. ಜಿ. ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾರ್ತಿಕಮಾಸದ ಶುಭದಿನದಂದು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯಕ್ಕೆ ಅವಕಾಶ ನೀಡಿದಂತಾಗುವುದು ಅಲ್ಲದೇ ನಮ್ಮ ಸಂಘಟನೆ ಬಲಗೊಳ್ಳುವುದು, ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.
ಮಂಡಲದ ಮಾತೃಪ್ರಧಾನೆ ವಿದುಷಿ ವೀಣಾಗೋಪಾಲಕೃಷ್ಣ ಹಾಗೂ ಭುವನಗಿರಿ ವಲಯದ ನಿವಾಸಿ ವಿದುಷಿ ವಿದ್ಯಾ ಭಜನಾ ತರಬೇತಿ ನೀಡಿದರು. ಅನಂತರ ಮಾತೆಯರು, ಮಕ್ಕಳು ಸೇರಿ ದೀಪ ಬೆಳಗಿ ಭಜನೆ ಮಾಡಿದರು. ಸುಮಾರು 60 ಜನ ತಾಯಂದಿರು ಹಾಗೂ ಮಕ್ಕಳು ಭಾಗವಹಿಸಿದರು.