ಶಿರಸಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಶ್ವೀಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ, ಅಕ್ಟೋಬರ್ 10 ರಿಂದ 17ರವರೆಗೆ ಶ್ರಿಸಂಸ್ಥಾನದ ಮಾರ್ಗದರ್ಶನದಂತೆ ಶಿರಸಿಯ ಅಂಬಾಗಿರಿ ಕಾಳಿಕಾಮಠದಲ್ಲಿ ಶರನ್ನವರಾತ್ರಿ ಉತ್ಸವ ಜರುಗಿತು.
ಈ ಅಂಗವಾಗಿ ಪ್ರತಿನಿತ್ಯ ಮಾತೆಯರಿಂದ ಕುಂಕುಮಾರ್ಚನೆ, ಪುರುಷರಿಂದ ಗಾಯತ್ರಿಜಪ, ದೇವೀಪಾರಾಯಣ ಮಹಾಪೂಜೆಗಳು, ದಶಮಿಯಂದು ಸಿಮೋಲ್ಲಂಘನ, ಅಷ್ಟಾವಧಾನ ಸೇವೆ ಮಹಾಮಂಗಳಾರತಿಯೊಂದಿಗೆ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಅಲ್ಲದೇ ದಿನಾಂಕ 20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗೋಪ್ರವೇಶದೊಂದಿಗೆ ನೂತನ ಯಾಗಶಾಲೆ ಪ್ರಾರಂಭೋತ್ಸವ ನೆರವೇರಿತು. ಮರುದಿನ ದ್ವಾದಶಿಯಂದು ನವಚಂಡಿ ಹವನ ಶ್ರೀ ಕಟ್ಟೆ ಶಂಕರ ಭಟ್ಟರ ಅಧ್ವರ್ಯದಲ್ಲಿ ಸಾಂಗವಾಗಿ ಜರುಗಿತು.
ಈ ಸಂಧರ್ಭದಲ್ಲಿ ಹವ್ಯಕ ಮಹಾಮಂಡಲದ ವಿದ್ಯಾವಿಭಾಗದ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ ಪಂಡಿತ, ಸಿದ್ದಾಪುರ ಮಂಡಲದ ಶ್ರೀ ಸತೀಶ ಹೆಗಡೆ, ಶ್ರೀ ರಮಾನಂದ ತಲವಾಟ, ಶ್ರೀಮತಿ ವೀಣಾ ಭಟ್ಟ, ಅಂಬಾಗಿರಿ ವಲಯದ ದಿಗ್ದರ್ಶಕರಾದ ಶ್ರೀ ಎಲ್. ಆರ್. ಭಟ್ಟ, ಅಧ್ಯಕ್ಷರಾದ ಶ್ರೀ ವಿ. ಎಮ್. ಹೆಗಡೆ ಆಲ್ಮನೆ, ಶ್ರೀ ಟಿ. ಜಿ. ಹೆಗಡೆ, ಶ್ರೀ ಡಿ. ಎ. ಹೆಗಡೆ, ಶ್ರೀ ಲಕ್ಷ್ಮಣ ಶಾನಭಾಗ, ಮಾತೃಪ್ರಧಾನೆ ಶ್ರೀಮತಿ ಸಾವಿತ್ರಿ ಹೆಗಡೆ, ಶ್ರೀಮತಿ ಇಂದಿರಾ ಶಾನಭಾಗ, ಶ್ರೀಮತಿ ಸರಸ್ವತಿ ಹೆಗಡೆ ಮುಂತಾದ ಪಧಾದಿಕಾರಿಗಳು, ಗುರಿಕ್ಕಾರರು, ಶಿಷ್ಯರು ಸೇರಿದಂತೆ ಪ್ರತಿನಿತ್ಯ ನೂರಾರು ಹೆಚ್ಚು ಸದ್ಭಕ್ತರು ಭಾಗವಹಿಸಿ ಶ್ರೀದೇವಿಯ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.