ಗುಂಪೆ ವಲಯದಲ್ಲಿ ವಸಂತ ವಟುಶಿಕ್ಷಾ ಶಿಬಿರ

ಉಪಾಸನೆ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಹವ್ಯಕ ಮಹಾಮಂಡಲ ಧರ್ಮಕರ್ಮ ವಿಭಾಗದ ನಿರ್ದೇಶನದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಗುಂಪೆ ವಲಯ ಮತ್ತು ಶ್ರೀಯುತ ಸತ್ಯಪ್ರಕಾಶ ದಂಪತಿಗಳ ನೇತೃತ್ವದಲ್ಲಿ ಏಪ್ರಿಲ್ 1ರಿಂದ 25ರ ವರೆಗೆ ವೇದ ಪಾಠ ಶಿಬಿರವು ಜರಗಿತು. ವಟುಗಳ ರಕ್ಷಕರಾದ ಶ್ರೀಯುತ ಜಯರಾಮ ಚೆಕ್ಕೆ, ಶ್ರೀಯುತ ಮಹಾಲಿಂಗ ಭಟ್ಟ ನೇರೋಳು, ಶ್ರೀಯುತ ಶಂಕರನಾರಾಯಣ ಭಟ್ಟ ನೇರೋಳು, ಶ್ರೀಯುತ ಕೃಷ್ಣಪ್ರಕಾಶ ಗುಂಪೆ, ಶ್ರೀಯುತ ರಾಮ ಕೃಷ್ಣ ಪ್ರಸಾದ ಅಮ್ಮಂಕಲ್ಲು, ಕರುವಜೆ ನಡುಮನೆ ಕೃಷ್ಣ ಭಟ್ಟ, ಶ್ರೀ ತಿರುಮಲೇಶ್ವರ ಭಟ್ಟ ನೆಕ್ಕಿಗುಳಿ ಇವರ ಪೂರ್ಣ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಮಕ್ಕಳಿಗೆ ವೇದಮೂರ್ತಿ ಶ್ರೀಯುತ ಮಧುಕರ ಭಟ್ಟ ಇವರು ವೇದಾಧ್ಯಾಪನ ನಡೆಸಿ ಕೊಟ್ಟರು. ಮಧ್ಯಾಹ್ನದ ಭೋಜನ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಲಯ ಅಧ್ಯಕ್ಷರಾದ ಶ್ರೀಯುತ ಅಮ್ಮಂಕಲ್ಲು ರಾಮ ಭಟ್ಟರು ವಹಿಸಿದ್ದರು. ನಮ್ಮ ವಲಯದಲ್ಲಿ ನಡೆದ ಉತ್ತಮ ಕಾರ್ಯಕ್ರಮ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಪಾಠಕಲಿತ್ತಿದ್ದೀರಿ. ಮುಂದಿನ ವರ್ಷವೂ ಇಂತಹ ಶಿಬಿರ ನಡೆಯಲಿ. ವಲಯದ ವತಿಯಿಂದ ಸಂಪೂರ್ಣ ಸಹಾಯ ಸಹಕಾರಗಳನ್ನು ನಾವು ನೀಡಲಿದ್ದೇವೆ ಎಂದರು. ವೇದಮೂರ್ತಿ ಶ್ರೀಯುತ ಗಣಪತಿ ಭಟ್ಟರು ವಿದ್ಯಾರ್ಥಿಗಳಿಗೆ ಆಶೀರ್ವಾದಪೂರ್ವಕ ಹಿತವಚನಗಳನ್ನಿತ್ತರು. ವೇದ ಗುರುಗಳಾದ ಶ್ರೀಯುತ ಮಧುಕರ ಭಟ್ಟ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸುತ್ತಾ. ಇಂತಹ ವಿದ್ಯಾರ್ಥಿಗಳಿಗೆ ವೇದಪಾಠ ಮಾಡುವುದಕ್ಕೆ ಹೆಮ್ಮೆ ಎನಿಸುತ್ತದೆ. ಹೇಳಿಕೊಟ್ಟ ಪಾಠಗಳನ್ನು ಬಹಳ ಬೇಗ ಕಂಠಸ್ಥಮಾಡಿ ಕಲಿತಿದ್ದಾರೆ. ಮುಂದೆಯೂ ಪಾಠ ಮಾಡುವುದಕ್ಕೆ ಖಂಡಿತಾ ಬರುತ್ತೇನೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿರಲಿ – ಎಂದು ಸಂತಸದಿಂದ ನುಡಿದರು.
ಒಂದು ತಿಂಗಳ ಕಾಲ ಸ್ಥಳಾವಕಾಶ ನೀಡಿದುದಲ್ಲದೆ ಉತ್ತಮ ಆದರಾಥಿತ್ಯ ನೀಡಿದ ಶ್ರೀಮತಿ ಕಾವೇರಿಯಮ್ಮ ಇವರನ್ನು ವಟುಗಳ ಪರವಾಗಿ ಶ್ರೀಮತಿ ಗಾಯತ್ರಿ ಎಡಕ್ಕಾನ ಇವರು ಶಾಲು ಹೊದಿಸಿ ಸನ್ಮಾನಿಸಿದರು. ಶ್ರೀಮತಿ ಕಾವೇರಿಯಮ್ಮ ಇವರು ಮಕ್ಕಳಿಗೆ ಈ ಸಂದರ್ಭದಲ್ಲಿ ನೆನಪಿನ ಕಾಣಿಕೆ ಇತ್ತರು. ಮಂಡಲ ವಿದ್ಯಾರ್ಥಿವಾಹಿನೀ ಪ್ರಧಾನರಾದ ಶ್ರೀಯುತ ಕೇಶವ ಪ್ರಸಾದ ಎಡಕ್ಕಾನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಹಾಗೂ ಮೇ ತಿಂಗಳ 8ನೆಯ ತಾರೀಕು ಭಾನ್ಕುಳಿ ಗೋಸ್ವರ್ಗದಲ್ಲಿ ನಡೆಯಲಿರುವ ಮಕ್ಕಳ ಸಮಾವೇಶದ ಕುರಿತು ತಿಳಿಸಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕುಂಕುಮಾರ್ಚನೆ, ಭಜನಾರಾಮಾಯಣ ಪಾರಾಯಣ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಿವಪೂಜೆ ಕಾರ್ಯಕ್ರಮವು ವೇದಮೂರ್ತಿ ಶ್ರೀಯುತ ಗಣಪತಿ ಭಟ್ ಪಂಜರಿಕೆ ಇವರ ನೇತೃತ್ವದಲ್ಲಿ ನಡೆಯಿತು. ಶ್ರೀಯುತ ಸುಬ್ರಹ್ಮಣ್ಯ ಭಟ್ಟ ಬೆಜಪ್ಪೆ ಉಪಸ್ಥಿತರಿದ್ದರು. ಶ್ರೀಯುತ ಸತ್ಯಪ್ರಕಾಶ್ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಯುತ ಮಹಾಲಿಂಗ ಭಟ್ಟ ನೇರೋಳು ಧನ್ಯವಾದವಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Author Details


Srimukha

Leave a Reply

Your email address will not be published. Required fields are marked *