ಕಲ್ಲಡ್ಕ: ಕಲ್ಲಡ್ಕದ ಕಲ್ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಶನಿವಾರ ಸಂಜೆ ಸಾಮೂಹಿಕ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ನೆರವೇರಿತು.
ಸೇವಾಸಮಿತಿಯ ಅಧ್ಯಕ್ಷರಾದ ರಾಕೋಡಿ ಶ್ರೀ ಈಶ್ವರ ಭಟ್ ಮತ್ತು ಪದಾಧಿಕಾರಿಗಳು, ಮಂಗಳೂರು ಮಂಡಲ ಗುರಿಕಾರರಾದ ಶ್ರೀ ಉದಯ ಕುಮಾರ್ ಖಂಡಿಗ, ಮೂಲಮಠ ಪ್ರತಿನಿಧಿ ಮುಳ್ಳುಂಜ ಶ್ರೀ ವೆಂಕಟೇಶ್ವರ ಭಟ್, ಕಲ್ಲಡ್ಕ ಹವ್ಯಕ ವಲಯಾಧ್ಯಕ್ಷ ಶ್ರೀ ಯು.ಎಸ್. ಚಂದ್ರಶೇಖರ ಭಟ್ ನೆಕ್ಕಿದರವು, ವಿಟ್ಲ ವಲಯ ದಿಗ್ದರ್ಶಕ ಶ್ರೀ ಸತೀಶ ಪಂಜಿಗದ್ದೆ, ಕೇಪು ವಲಯ ದಿಗ್ದರ್ಶಕ ಕಟ್ಟೆ ಶ್ರೀ ಕೃಷ್ಣಮೂರ್ತಿ ಮತ್ತು ಪದಾಧಿಕಾರಿಗಳು ಹಾಗೂ ಶ್ರೀ ಮರಿ ಭಟ್ ಕುಪ್ಳುಚಾರು, ಶ್ರೀ ಯತಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವೇ. ಮೂ. ಶ್ರೀ ಅನಂತನಾರಾಯಣ ಭಟ್ಟ ಪರಕ್ಕಜೆಯವರು ಶನೈಶ್ಚರ ಪೂಜೆಯ ಕಥಾಸಾರ ಪ್ರವಚನವನ್ನು ನಡೆಸಿದರು.
ಶಾಸ್ತ್ರೋಕ್ತ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.