ಬಜಕೂಡ್ಲು: ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಪಾಶ್ಚಾತ್ಯ ಸಂಪ್ರದಾಯದಲ್ಲಿ ಆಚರಿಸುವ ಹೆತ್ತವರ ನಡುವೆ ಶ್ರೀಮಠದ ಭಕ್ತರಾದ ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿ ವಿಭಾಗದ ಪ್ರಧಾನರಾದ ಶ್ರೀ ಕೇಶವಪ್ರಸಾದ ಎಡಕ್ಕಾನ ಅವರು ತಮ್ಮ ಸುಪುತ್ರನ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿ ಇತರರಿಗೂ ಮಾದರಿಯಾಗಿದ್ದಾರೆ.
ನವೆಂಬರ್ ೧೫ರಂದು ಶ್ರೀ ಕೇಶವಪ್ರಸಾದ ಎಡಕ್ಕಾನ ಅವರ ಪುತ್ರ ಕು. ರಾಮಶರ್ಮನ ಹುಟ್ಟುಹಬ್ಬವಿತ್ತು. ಅಂದು ಮಗನ ಹೆಸರಿನಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋಪೂಜಾ ಸೇವೆ ಹಾಗೂ ಗೋವಿಗಾಗಿ ಮೇವು ಯೋಜನೆಯಲ್ಲಿ ಒಂದು ದಿನದ ಮೇವು ಸಮರ್ಪಿಸಿ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಿದ್ದಾರೆ.
ಜನ್ಮದಿನಾಚರಣೆಯ ಹೆಸರಿನಲ್ಲಿ ವ್ಯರ್ಥವಾಗಿ ಹಣ ಪೋಲು ಮಾಡುವವರಿಗೆ ಈ ಪೋಷಕರು ಮಾದರಿಯಾಗಿದ್ದಾರೆ. ಎಲ್ಲರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಗೋವುಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ.
ಹರೇ ರಾಮ