ಗೋಲೋಕ: ಶ್ರೀರಾಮಚಂದ್ರಾಪುರಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್ ಅವರು ಮಹಾನಂದಿ ಗೋಲೋಕಕ್ಕೆ ಆಗಮಿಸಿ, ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇಶೀ ಗೋತಳಿಗಳ ಸಂರಕ್ಷಣೆ ಮಾಡುತ್ತಿರುವ ಗೋಲೋಕ ವೀಕ್ಷಣೆ ಮಾಡಿದರು. ಶ್ರೀಮಠದ ಪ್ರಮುಖರಾದ ಮೋಹನ ಹೆಗಡೆ, ಪಿ. ಡಿ. ಶ್ರೀಧರ ರಾವ್, ಹರಿಪ್ರಸಾದ್ ಪೆರಿಯಪ್ಪು, ಕುಮಾರ ಕೌಲಕೈ, ಪ್ರಸನ್ನ ಉಡುಚೆ, ರಾಮಚಂದ್ರ ಭಟ್ ಮಳಲಿ, ಚಂದ್ರಶೇಖರ ಸಿ. ಎಸ್. ರಾಘವೇಂದ್ರ ಮಧ್ಯಸ್ಥ ಜೊತೆಗಿದ್ದರು.
ಗೋಲೋಕದ ವತಿಯಿಂದ ರಾಮಚಂದ್ರ ಭಟ್ ಪಂಜಾಜೆ, ಅಶೋಕ ಹೆಗಡೆ ಗುಂಡೂಮನೆ, ಸುಬ್ರಹ್ಮಣ್ಯ ಹೆದ್ಲಿ, ಸದಾಶಿವ ಆಚಾರ್, ಕೆ. ಪಿ. ಎಡಪ್ಪಾಡಿ ಬರಮಾಡಿಕೊಂಡು ಮಾಹಿತಿ ನೀಡಿದರು. ವೇ. ಮೂ. ಸತೀಶ್ ಭಟ್ ಶ್ರೀ ಗೋವರ್ಧನಗಿರಿಧಾರಿಗೆ ಅರ್ಚನೆಯನ್ನು ಮಾಡಿ ಗಿರಿಧಾರಿಯ ಪ್ರಸಾದವನ್ನು ನೀಡಿದರು.