ಮಾಣಿ ಮಠದಲ್ಲಿ ಮೋತ್ಸ ಸಿದ್ಧತಾ ಸಭೆ

ಉಪಾಸನೆ

ಮಾಣಿ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ಎ.9ರಂದು ನಡೆಯಲಿರುವ ಜೀವನದಾನ ಮತ್ತು ಎ.11ರಂದು ನಡೆಯಲಿರುವ ಮಹಾಪಾದುಕಾಪೂಜೆಯ ಅಂಗವಾಗಿ ಸಮಾಲೋಚನೆ ಸಭೆ ನಡೆಯಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯಾಗಿ ಸಭೆ ಪ್ರಾರಂಭವಾಯಿತು. ಆಯೋಜನಾ ಸಮಿತಿಯ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೆಯ ಸನ್ಯಾಸಗ್ರಹಣ ದಿನೋತ್ಸವದ ಅಂಗವಾಗಿ ಆರ್ತಕುಟುಂಬಕ್ಕೆ ಜೀವನದಾನ ಮತ್ತು 26ನೆಯ ಯೋಗಪಟ್ಟಾಭಿಷೇಕ ಸ್ಮರಣೋತ್ಸವದ ಅಂಗವಾಗಿ ಸಹಸ್ರರಾರು ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆ ನೆರವೇರಲಿದೆ. ಎ.11ರಂದು ನಡೆಯುವ ಮಹಾಪಾದುಕಾ ಪೂಜೆಯಲ್ಲಿ ಸುಮಾರು 5000ಕ್ಕೂ ಅಧಿಕ ಶಿಷ್ಯಭಕ್ತರು ಪಾದುಕಾ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ 4 ಸಾವಿರ ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದರು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು ಅವರು ವಿವಿಧ ಉಪಸಮಿತಿಗಳ ಜವಾಬ್ದಾರಿ ಮತ್ತು ಪ್ರಗತಿ ಕಾರ್ಯಗಳ ಕುರಿತಾಗಿ ಮಾಹಿತಿಗಳನ್ನಿತ್ತರು.

 

ಆಯೋಜನ ಸಮಿತಿ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್ಟ, ಉಪಾಧ್ಯಕ್ಷ ಅಶೋಕ್ ಕೆದ್ಲ, ಉಪಾಧ್ಯಕ್ಷ ಉದಯ ಕುಮಾರ್ ಖಂಡಿಗ, ಕೋಶಾಧ್ಯಕ್ಷ ಜನಾರ್ದನ ಭಟ್ಟ, ಧರ್ಮ ಕರ್ಮ ವಿಭಾಗದ ಸಹಕಾರ್ಯದರ್ಶಿ ಕೇಶವಪ್ರಸಾದ ಕೂಟೇಲು, ಸತ್ಯನಾರಾಯಣ ಮೊಗ್ರ, ಮಹೇಶ್ ಚಟ್ನಳ್ಳಿ, ಶ್ರೀನಾಥ್ ಸಾರಂಗ, ಭಾಸ್ಕರ ಹೆಗಡೆ ಕೊಡಗಿಬೈಲು, ಮಂಗಳೂರು ಹೋಬಳಿಯ ಮೂರು ಮಂಡಲಗಳ ಪದಾಧಿಕಾರಿಗಳು, ಕಾರ್ಯಾಲಯ ಕಾರ್ಯದರ್ಶಿ ಶಿವಪ್ರಸಾದ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ರೂಪುರೇಷೆಯ ಕುರಿತು ಎಲ್ಲಾ ವಿಭಾಗವಾರು ಮಾಹಿತಿಗಳನ್ನು ಒದಗಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *