ಮಹಾಪಾದುಕಾ ಪೂಜೆ ; ಯಶಸ್ಸಿನ ಕಾರ್ಯಕರ್ತರ ಸಭೆ

ಉಪಾಸನೆ

ವಿಟ್ಲ ಎ.23 : ಶ್ರೀಸಂಸ್ಥಾನದವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಹಾಪಾದುಕಾ ಪೂಜೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶ್ರೀಸಂಸ್ಥಾನದವರ 26ನೆಯ ಸನ್ಯಾಸಗ್ರಹಣ ದಿನೋತ್ಸವದ ಅಂಗವಾಗಿ ಜೀವನದಾನ ಮತ್ತು ಯೋಗಪಟ್ಟಾಭಿಷೇಕ ವರ್ಧಂತಿಗಳು ಯಶಸ್ವಿಯಾಗಿ ನಡೆಸಿದ್ದರ ಅವಲೋಕನ ಸಭೆ ನಡೆಯಿತು. ಶ್ರೀಮಠದ ಕಾರ್ಯಕರ್ತರು ತನು, ಮನೋ, ಧನಗಳ ಅತ್ಯದ್ಭುತ ಸಹಕಾರದಿಂದ ಕಾರ್ಯಕ್ರಮವು ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಯೋಗಪಟ್ಟಾಭಿಷೇಕ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ಶ್ರೀ ನಾರಾಯಣ ಭಟ್ಟ ಶ್ಲಾಘಿಸಿದರು. ಅವರು ರವಿವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ನಡೆದ ಕಾರ್ಯಕರ್ತರ ಅಭಿನಂದನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಮಿತಿ ಕೋಶಾಧಿಕಾರಿ ಬಂಗಾರಡ್ಕ ಶ್ರೀ ಜನಾರ್ದನ ಭಟ್ಟ ಲೆಕ್ಕಪತ್ರ ಮಂಡಿಸಿದರು ಪ್ರಧಾನ ಕಾರ್ಯದರ್ಶಿ ಸೇರಾಜೆ ಶ್ರೀ ಸುಬ್ರಹ್ಮಣ್ಯ ಭಟ್ಟ ಅವರು ಮಾತನಾಡಿ, ಕಾರ್ಯಕ್ರಮ ಯಶಸ್ಸಿನಲ್ಲಿ ಪ್ರತಿಯೊಂದು ವಿಭಾಗದವರ ಶ್ರಮವಿದೆ. ಶ್ರೀಸಂಸ್ಥಾನ ನುಡಿದಂತೆ ಇದು ಮಠಗಳ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದರು.

 

ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀ ಟಿ.ಶ್ರೀಕೃಷ್ಣ ಭಟ್ಟ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಶ್ರೀ ಅಶೋಕ್ ಕೆದ್ಲ, ಮೆನೇಜರ್ ಶ್ರೀ ಶಿವಪ್ರಸಾದ್ ಉಪಸ್ಥಿತರಿದ್ದರು. ವಿವಿಧ ಕಾರ್ಯಕರ್ತರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಶ್ರೀಮಠದ ಮೆನೇಜರ್ ಶ್ರೀ ಶಿವಪ್ರಸಾದ್ ಮತ್ತು ಶ್ರೀ ಪ್ರಸನ್ನ ಅವರಿಗೆ ವಿಶೇಷ ನಗದು ನೀಡಿ ಪುರಸ್ಕರಿಸಲಾಯಿತು.

 

Author Details


Srimukha

Leave a Reply

Your email address will not be published. Required fields are marked *