ಇತಿಹಾಸದ ಹೊಂಪುಟವಾಗಲಿದೆ ಮಾಣಿಮಠದ ಮಹಾಪಾದುಕಾ ಪೂಜೆ

ಉಪಾಸನೆ

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಮ್ಮ ಕುಲಗುರುಗಳಾದ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ಎ.9ರಂದು ನಡೆಯಲಿರುವ ಜೀವನದಾನ ಮತ್ತು ಎ.11ರಂದು ನಡೆಯಲಿರುವ ಮಹಾಪಾದುಕಾಪೂಜೆಯ ವಿಶೇಷತೆ ಬಗ್ಗೆ ನಮಗೆಲ್ಲ ತಿಳಿದಿದೆ.

 

ಮಹಾಭಾಗ್ಯ :
ಕುಲಗುರುಗಳ ಸನ್ಯಾಸಗ್ರಹಣ ದಿನಾಚರಣೆ ಮತ್ತು ಯೋಗಪಟ್ಟಾಭಿಷೇಕ ದಿನಾಚರಣೆಯನ್ನು ಆಯೋಜಿಸಿ, ಸಂಭ್ರಮವನ್ನಾಚರಿಸುವುದು ಅಹೋಭಾಗ್ಯ. ಕುಲಗುರುಗಳ 26ನೆಯ ಯೋಗಪಟ್ಟಾಭಿಷೇಕ ದಿನೋತ್ಸವ. ಅದರ ಅಂಗವಾಗಿ ಸಹಸ್ರ ಸಹಸ್ರ ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆಯು ಭಕ್ತಿಪ್ರಧಾನವೂ ವಿಶಿಷ್ಟವೂ ವಿಶೇಷವೂ ಆಗಿದೆ. ಈ ವಿಶೇಷ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅದೃಷ್ಟ ಶಿಷ್ಯರ ಪಾಲಿಗೆ ಮಹಾಭಾಗ್ಯವಾಗಿದೆ.

 

4000ಕ್ಕೂ ಅಧಿಕ ಪಾದುಕಾಪೂಜೆ :
ಸಾಮಾನ್ಯವಾಗಿ ಮಾಣಿ ಮಠದಲ್ಲಿ ನಮ್ಮ ಪರಮಪೂಜ್ಯರ ದಿವ್ಯ ಸಾನ್ನಿಧ್ಯವಿದೆಯೆಂದರೆ ಶಿಷ್ಯರೂ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂಬ ಸತ್ಯ ನಮಗೆಲ್ಲ ತಿಳಿದಿರುವ ವಿಚಾರ. ಶಿಷ್ಯಭಕ್ತರು 4000ಕ್ಕೂ ಅಧಿಕ ಪಾದುಕಾಪೂಜೆ ನೊಂದಣಿ ಮಾಡಿರುವುದರಿಂದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿರುವುದು ಸ್ಪಷ್ಟ. ಇದರ ಜತೆಗೆ ಇಡೀ ಗೋಕರ್ಣ ಮಂಡಲದಲ್ಲಿ ಈ ಬಗ್ಗೆ ವಿಶೇಷ ಸಂಭ್ರಮದ ಅಲೆ ಎದ್ದಿದೆ. ಗೋಕರ್ಣ ಮಂಡಲದ ಸರ್ವ ಶಿಷ್ಯ ಭಕ್ತರೂ ಭಾಗವಹಿಸಿ, ಕೃತಾರ್ಥರಾಗಲು ಸಿದ್ಧರಾಗಿದ್ದಾರೆ.

 

ಇಡೀ ದಿನ ಮಾಣಿ ಮಠದಲ್ಲಿ :
ಹೌದು. ಸಾಗರೋಪಾದಿಯಲ್ಲಿ ಶಿಷ್ಯಭಕ್ತರು ಪಾಲ್ಗೊಳ್ಳಲಿರುವುದಂತೂ ನಿಜ. ಪಾಲ್ಗೊಂಡವರೆಲ್ಲರೂ ಇಡೀ ದಿನ ಮಾಣಿ ಮಠದಲ್ಲೇ ಇರಬೇಕು ಅಂದರೆ ಇಡೀ ದಿನ ಬಿಡುವು ಮಾಡಿಕೊಳ್ಳಬೇಕು. ಶ್ರೀಗುರುಗಳ ಸಮ್ಮುಖದಲ್ಲೇ ಇದ್ದು, ಮಹಾಪಾದುಕಾ ಪೂಜೆ ನೆರವೇರಿಸಿ, ಪ್ರಸಾದ, ಮಂತ್ರಾಕ್ಷತೆ, ಅನುಗ್ರಹ ಪಡೆದು, ಆಶೀರ್ವಚನವನ್ನು ಶಿರೋಧಾರಣೆ ಮಾಡಿ, ತೆರಳಬೇಕು.
ಶ್ರೀಗುರುಗಳು ಶಿಷ್ಯಭಕ್ತರಿಗಾಗಿ ಆ ದಿನವನ್ನು ಮೀಸಲಿರಿಸಿದ್ದಾರೆ. ಹಾಗಾದರೆ ಇನ್ನು ನಾವು ನೀವು ?

Leave a Reply

Your email address will not be published. Required fields are marked *