ಚಂದ್ರಗಿರಿ ವಲಯದಲ್ಲಿ ಪ್ರದೋಷರುದ್ರ ಪಠಣ

  ಮುಳ್ಳೇರಿಯಾ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿನ ಮುಳ್ಳೇರಿಯಾ “ಅನಘಾ” ನಿವಾಸಿ ಶ್ರೀಮತಿ ಗೀತಾಲಕ್ಷ್ಮೀ ಮತ್ತು ಶ್ರೀ ದಿನೇಶ ಭಟ್ ಅವರಲ್ಲಿ ದಿನಾಂಕ 20-12-2018ರಂದು ಪ್ರದೋಷರುದ್ರ ಪಠಣ ನಡೆಯಿತು.   ವಲಯ ವೈದಿಕ ಪ್ರಧಾನ ಪಯ ಶ್ರೀ ನರಸಿಂಹರಾಜರ ನೇತೃತ್ವದಲ್ಲಿ 22 ಮಂದಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಪ್ರದೋಷರುದ್ರ ಅಭಿಷೇಕ ಪೂಜೆ ಹಾಗೂ ಮಾತೆಯರು ಮಕ್ಕಳು ಜತೆಗೂಡಿ 18 ಮಂದಿ ಭಜನ ರಾಮಾಯಣ ಪಾರಾಯಣವನ್ನು ನೆರವೇರಿಸಿದರು.

Continue Reading

ಮೊಬೈಲ್ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಲಿ – ಶ್ರೀಸಂಸ್ಥಾನ : ಇಂದಿನ ಗುರುಗಳೂ ಆದಿಶಂಕರರು – ವಿದ್ವಾನ್ ಉಮಾಕಾಂತ  ಭಟ್

ಬೆಂಗಳೂರು: ಪೂರ್ವಾಚಾರ್ಯರಾದ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳು ವಿದ್ಯಾಪ್ರೀತರಾಗಿದ್ದರು. ವೇದ, ವೇದಾಂಗಗಳಲ್ಲಿ ಅತಿಶಯವಾದ ಆಸಕ್ತಿಯನ್ನು ಹೊಂದಿದವರಾಗಿದ್ದರು. ಹಾಗಾಗಿ ಪ್ರತಿವರ್ಷ ಅವರ ಆರಾಧನೆಯ ಪುಣ್ಯದಿನದಂದು ನಾಡಿನ ಶ್ರೇಷ್ಠ ವಿದ್ವಾಂಸರೊಬ್ಬರಿಗೆ ಪುರಸ್ಕಾರ ನೀಡಿ ‘ದೊಡ್ಡ ಗುರುಗಳನ್ನು’ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಶ್ರೀಸಂಸ್ಥಾನದವರು ಹೇಳಿದರು.   ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಬ್ರಹ್ಮೈಕ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ದಿವ್ಯಸಾನ್ನಿಧ್ಯವಹಿಸಿ, ಕೆರೆಕೈ ಉಮಾಕಾಂತ ಭಟ್ಟರಿಗೆ ‘ಪಾಂಡಿತ್ಯ ಪುರಸ್ಕಾರ’ವನ್ನು ಅನುಗ್ರಹಿಸಿ ಮಾತನಾಡಿದ ಶ್ರೀಸಂಸ್ಥಾನದವರು, ವಿದ್ವಾನ್ ಉಮಾಕಾಂತ ಭಟ್ಟರು ಮೈಸೂರಿನ ರಾಮಭದ್ರಾಚಾರ್ಯರಲ್ಲಿ ಸಂಪೂರ್ಣ ಅಭ್ಯಾಸವನ್ನು ಮಾಡಿದವರು. ನಾವು ಕೂಡ […]

Continue Reading

ಶ್ರೀರಾಮಾಶ್ರಮ ಬೆಂಗಳೂರಿನಲ್ಲಿ ೧೫೦ ಜನ ರುದ್ರಾಧ್ಯಾಯಿಗಳ ಕೂಡುವಿಕೆಯಲ್ಲಿ ಶ್ರೀಕರಾರ್ಚಿತ ದೇವರಿಗೆ ಮಹಾರುದ್ರ ಪಠಣ ಸಮರ್ಪಣೆ

Continue Reading

ಗೋಸ್ವರ್ಗದಲ್ಲಿ ಗೋಮಾತೆಯನ್ನು ಪೂಜಿಸಿ ಗೋಗ್ರಾಸವಿತ್ತ ಮಾತೆಯರು

ಭಾನ್ಕುಳಿ: ಸಹಸ್ರ ಗೋವುಗಳು ಸ್ವಚ್ಛಂದವಾಗಿ ವಿಹರಿಸುವ ಗೋಸ್ವರ್ಗದಲ್ಲಿ, ಸಿದ್ದಾಪುರ ಮಂಡಲದ ಮಾತೃವಿಭಾಗದ ಮಾತೆಯರು 2.12.2018ರಂದು ಗೋಪೂಜೆ, ಗೋಗ್ರಾಸ ಮತ್ತು ಶ್ರೀರಾಮದೇವರಿಗೆ ದೀಪೋತ್ಸವ ಸೇವೆಗಳನ್ನು ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಭಜನರಾಮಾಯಣ ಪಠಿಸಿದರು.

Continue Reading

ಮಕ್ಕಳಿಂದ ಮಾತಾಪಿತರಿಗೆ ಪೂಜೆ : ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾದರಿ ಕಾರ್ಯಕ್ರಮ

ಮುಜುಂಗಾವು: ಇಲ್ಲಿನ ಶ್ರೀಭಾರತೀ ವಿದ್ಯಾಪೀಠದ ಮಕ್ಕಳಿಂದ ಮಾತಾಪಿತೃ ಪೂಜೆ ನೆರವೇರಿತು. ವಿದ್ಯಾಪೀಠ ಶಾಲೆಯಲ್ಲಿ 26.11.2018ರ ಸೋಮವಾರರಂದು ನಡೆದ ಕಾರ್ಯಕ್ರಮವು ದೀಪಪ್ರಜ್ವಲನ, ಗಣಪತಿ ಸ್ತುತಿ, ಗುರುವಂದನೆಗಳೊಂದಿಗೆ ಆರಂಭವಾಯಿತು. ಬಳಿಕ ಮಕ್ಕಳು ಅವರವರ ಮಾತಾಪಿತೃಗಳಿಗೆ ಆರತಿ ಅಕ್ಷತೆಯೊಂದಿಗೆ ಪೂಜೆ ನೆರವೇರಿಸಿದರು. ಅನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ಮಾತನಾಡಿದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ದರ್ಬೆಮಾರ್ಗ, ‘ಇಳೆಗೆ ಇಳಿಸಿದ ನಮ್ಮ ಮಾತಾಪಿತರು ಜಗತ್ತಿನ ತಂದೆತಾಯಿಯರಾದ ಪಾರ್ವತಿಪರಮೇಶ್ವರರಿಗೆ ಸಮಾನರು. ವೃದ್ಧಾಪ್ಯದಲ್ಲಿ ಅವರ ಬೇಕುಬೇಡಗಳನ್ನು ನಾವು ಪೂರೈಸಿ ಸೇವೆಯನ್ನು ಮಾಡಬೇಕು’ ಎಂದು ಕಿವಿಮಾತು […]

Continue Reading

ಗೋವಾ ಹವ್ಯಕ ವಲಯದಲ್ಲಿ ಕಾರ್ತಿಕ ದೀಪೋತ್ಸವ; ಕುಂಕುಮಾರ್ಚನೆ, ಅಷ್ಟಾವಧಾನ ಸೇವೆಯ ಜೊತೆಗೆ ಆಹಾರೋತ್ಸವದ ಸಡಗರ

ಗೋವಾ: ಗೋವಾ ಹವ್ಯಕವಲಯವು ಕಾರ್ತಿಕ ದೀಪೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಿದೆ. ದಿನಾಂಕ 24.11.2018ರ ಶನಿವಾರ ಮಡಗಾಂವ್ ನ ಗಜಾನನ ಮಹಾರಾಜರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕುಂಕುಮಾರ್ಚನೆ, ಅಷ್ಟಾವಧಾನ ಸೇವೆ, ದೀಪಾರಾಧನೆ ಹಾಗೂ ಆಹಾರೋತ್ಸವಗಳನ್ನು ಏರ್ಪಡಿಸಲಾಗಿತ್ತು.   ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಲಯದ ಮಾತೃ ವಿಭಾಗ ಪ್ರಧಾನೆ ಶ್ರೀಮತಿ ಮಮತಾ ಹೆಗಡೆ ಹಾಗೂ ಕಾರ್ಯದರ್ಶಿ ಶ್ರೀಮತಿ ರೇಖಾ ಹೆಗಡೆ ಇವರ ನೇತೃತ್ವದಲ್ಲಿ ಹದಿನೈದು ಮಹಿಳೆಯರು ಕುಂಕುಮಾರ್ಚನೆ ನಡೆಸಿದರು. ವಲಯದ ಸಂಸ್ಕಾರ ಪ್ರಧಾನ ಶ್ರೀ ಮಹಾಬಲ ಭಟ್ […]

Continue Reading

ತಾಯಿ ಶರಾವತಿಯಲ್ಲಿಯ ದ್ವೀಪ ಹೈಗುಂದದ ಮಾತೆ ದುರ್ಗಾಂಬಾ ಅಮ್ಮನವರಿಗೆ ಅಲ್ಲಿಬೆಳೆಯುವ ಅಪರೂಪದ ಪರಿಮಳ ಸಣ್ಣಕ್ಕಿಯ ಭತ್ತದತೆನೆಯ ಅಲಂಕಾರ

Continue Reading

ಪ್ರಾಯ-ಅಭಿಪ್ರಾಯಗಳಲ್ಲಿ ಆದರ್ಶಪ್ರಾಯರಾದ ಪಕ್ವಜೀವಿಗಳಿಗೆ ಪರಿಪಕ್ವವಾದ ಕಾರ್ಯ ‘ಸಂಧ್ಯಾಮಂಗಲ’ : ಶ್ರೀಸಂಸ್ಥಾನದವರಿಂದ ವಿಶೇಷ ಆಶೀರ್ವಾದ

ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು.   ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ […]

Continue Reading

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ

ಉಪ್ಪಿನಂಗಡಿ: ಶ್ರೀಸಂಸ್ಥಾನದವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ನಡೆಯುತ್ತಿರುವ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ನ. 12ರಂದು ಆರಂಭಗೊಂಡು ನ. 20ರಂದು ಸಮಾಪನಗೊಂಡಿತು.   ನ. 12ರಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ ಭಟ್ ಬೈಪದವು ಅವರ ಮನೆಯಲ್ಲಿ ಪಾರಾಯಣ ಪ್ರಾರಂಭಗೊಂಡಿತು. ನ. 13ರಂದು ವೇ.ಬ್ರ. ಬಡಜ ಶ್ರೀ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಎಮ್.ಎಚ್. ರಮೇಶ ಭಟ್, 15ರಂದು ಶ್ರೀ […]

Continue Reading

ಮಾಲೂರು ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನ ದ್ವಾದಶೀ ಆಚರಣೆ : ತುಳಸೀ ಪೂಜೆ ಸಂಪನ್ನ

ಮಾಲೂರು: ಇಲ್ಲಿನ ಗಂಗಾವತಿಯ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನದ್ವಾದಶಿಯ ಪರ್ವ ದಿನದಂದು ತುಳಸೀ ಪೂಜೆ ಸಂಪನ್ನಗೊಂಡಿತು. ತುಳಸೀ ವಿವಾಹದ ಅಂಗವಾಗಿ ನವೆಂಬರ್ 20, ಮಂಗಳವಾರ ಶ್ರೀ ಲಕ್ಷ್ಮೀಶ ಇವರ ನೇತೃತ್ವದಲ್ಲಿ ತುಳಸೀ ಪೂಜೆಯನ್ನು ನೆರವೇರಿಸಲಾಯಿತು.   ಈ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಗೋಬಂಧು ವಿಭಾಗದ ಸಹಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ್ ಹೆಗಡೆ ಸಹಿತ ಗೋಶಾಲೆಯ ಹಲವಾರು ಕಾರ್ಯಕರ್ತರು ಹಾಗೂ ಗೋ ಪ್ರೇಮಿಗಳು ಉಪಸ್ಥಿತರಿದ್ದರು.

Continue Reading

ಬೆಂಗಳೂರು ಉತ್ತರ ಮಂಡಲದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾಕಾರ್ಯಕ್ರಮ

ಬೆಂಗಳೂರು: ಬೆಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಅವರ ಮನೆ ‘ಸಾಕ್ಷಾತ್ಕಾರ ಕಲಾನಿಕೇತನದಲ್ಲಿ’ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ನವೆಂಬರ್ 22ರಂದು ಯಶಸ್ವಿಯಾಗಿ ನಡೆಯಿತು.   ಮಂಡಲದ ಅಧ್ಯಕ್ಷರಾದ ಶ್ರೀ ಜಿ. ಜಿ. ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾರ್ತಿಕಮಾಸದ ಶುಭದಿನದಂದು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯಕ್ಕೆ ಅವಕಾಶ ನೀಡಿದಂತಾಗುವುದು ಅಲ್ಲದೇ ನಮ್ಮ ಸಂಘಟನೆ ಬಲಗೊಳ್ಳುವುದು, ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು […]

Continue Reading

ಅಂಬಾಗಿರಿಯಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ನೂತನ ಯಾಗಶಾಲೆ ಉದ್ಘಾಟನೆ ಸಂಪನ್ನ

ಶಿರಸಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಶ್ವೀಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ, ಅಕ್ಟೋಬರ್ 10 ರಿಂದ 17ರವರೆಗೆ ಶ್ರಿಸಂಸ್ಥಾನದ ಮಾರ್ಗದರ್ಶನದಂತೆ ಶಿರಸಿಯ ಅಂಬಾಗಿರಿ ಕಾಳಿಕಾಮಠದಲ್ಲಿ ಶರನ್ನವರಾತ್ರಿ ಉತ್ಸವ ಜರುಗಿತು.   ಈ ಅಂಗವಾಗಿ ಪ್ರತಿನಿತ್ಯ ಮಾತೆಯರಿಂದ ಕುಂಕುಮಾರ್ಚನೆ, ಪುರುಷರಿಂದ ಗಾಯತ್ರಿಜಪ, ದೇವೀಪಾರಾಯಣ ಮಹಾಪೂಜೆಗಳು, ದಶಮಿಯಂದು ಸಿಮೋಲ್ಲಂಘನ, ಅಷ್ಟಾವಧಾನ ಸೇವೆ ಮಹಾಮಂಗಳಾರತಿಯೊಂದಿಗೆ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.   ಅಲ್ಲದೇ ದಿನಾಂಕ 20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗೋಪ್ರವೇಶದೊಂದಿಗೆ ನೂತನ ಯಾಗಶಾಲೆ ಪ್ರಾರಂಭೋತ್ಸವ ನೆರವೇರಿತು. ಮರುದಿನ ದ್ವಾದಶಿಯಂದು […]

Continue Reading

ಬೆಳ್ಳೆಚ್ಚಾಲಿನಲ್ಲಿ ಪ್ರದೋಷಕಾಲದ ರುದ್ರಾರಾಧನೆ

ಶ್ರೀಸಂಸ್ಥಾನದವರ ನಿರ್ದೇಶನದಂತೆ ಲೋಕಕಲ್ಯಾಣಾರ್ಥವಾಗಿ ಪ್ರದೋಷಕಾಲದ ರುದ್ರಾರಾಧನೆಯು ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯದ ಬೆಳ್ಳೆಚ್ಚಾಲು ಘಟಕದ ಕುಜತ್ತೋಡಿ ಶ್ರೀ ರಾಜಗೋಪಾಲ ಶರ್ಮಾ ಅವರ ಮನೆಯಲ್ಲಿ ನವೆಂಬರ್ 20ರಂದು ನೆರವೇರಿತು.   ಈ ಕಾರ್ಯಕ್ರಮದಲ್ಲಿ 24 ಮಂದಿ ರುದ್ರಪಾಠಕರು ಭಾಗವಹಿಸಿದರು ಹಾಗೂ 17 ಮಂದಿ ಭಜನ ರಾಮಾಯಣ ಪಾರಾಯಣ ನಡೆಸಿದರು.

Continue Reading

ಉತ್ಥಾನ ದ್ವಾದಶಿಯಂದು ಶ್ರೀಕರಾರ್ಚಿತ ಶ್ರೀರಾಮನಿಗೆ ೧೨೨ ಕೆಜಿ ಗೋಧಿ ಪಾಯಸ ನೈವೇದ್ಯ

ಬೆಂಗಳೂರು: ಉತ್ಥಾನದ್ವಾದಶಿಯ ಪುಣ್ಯಕಾಲದಂದು ಶ್ರೀಸಂಸ್ಥಾನದವರ ಸಂಕಲ್ಪದಂತೆ ಸಪರಿವಾರ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಅಖಂಡ (ಖಂಡವಿಲ್ಲದ ಇಡಿಯ ಗೋಧಿ) ಗೋಧಿ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು.   ಮುಂಜಾನೆ ಶ್ರೀಸಂಸ್ಥಾನದವರು ರಾಮದೇವರ ಪೂಜೆ ಗೈಯ್ಯುವ ವೇಳೆಗೆ ಘಮಘಮಿಸುವ ತುಂಡಿಲ್ಲದ ಗೋಧಿಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಒಟ್ಟು 8 ದ್ರೋಣದ ಪ್ರಮಾಣದಲ್ಲಿ ಅಂದ್ರೆ ಒಂದು ದ್ರೋಣಕ್ಕೆ 16 ಸೇರಿನ ಪ್ರಮಾಣದಲ್ಲಿ ಒಟ್ಟು 122.850 ಕೆಜಿ ಇಡಿ ಗೋಧಿಯ ಪಾಯಸ ಶ್ರೀರಾಮನಿಗೆ ಸಮರ್ಪಿತಗೊಂಡಿತು. ಶ್ರೀಸಂಸ್ಥಾನದ ಕರದಿಂದ ಅರ್ಚಿತಗೊಳ್ಳುವ ಶ್ರೀರಾಮನಿಗೆ ಪಾಯಸ ಸಮಪರ್ಣೆಗೊಂಡ ಬಳಿಕ ಪ್ರಸಾದವಾಗಿ ಈ […]

Continue Reading

ಕಲ್ಲಡ್ಕದ ಶ್ರೀಉಮಾಶಿವ ಕ್ಷೇತ್ರದಲ್ಲಿ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ಸಂಪನ್ನ

ಕಲ್ಲಡ್ಕ: ಕಲ್ಲಡ್ಕದ ಕಲ್ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಶನಿವಾರ ಸಂಜೆ ಸಾಮೂಹಿಕ  ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ನೆರವೇರಿತು.   ಸೇವಾಸಮಿತಿಯ ಅಧ್ಯಕ್ಷರಾದ ರಾಕೋಡಿ ಶ್ರೀ ಈಶ್ವರ ಭಟ್ ಮತ್ತು ಪದಾಧಿಕಾರಿಗಳು, ಮಂಗಳೂರು ಮಂಡಲ ಗುರಿಕಾರರಾದ ಶ್ರೀ ಉದಯ ಕುಮಾರ್ ಖಂಡಿಗ, ಮೂಲಮಠ ಪ್ರತಿನಿಧಿ ಮುಳ್ಳುಂಜ ಶ್ರೀ ವೆಂಕಟೇಶ್ವರ ಭಟ್, ಕಲ್ಲಡ್ಕ ಹವ್ಯಕ ವಲಯಾಧ್ಯಕ್ಷ ಶ್ರೀ ಯು.ಎಸ್. ಚಂದ್ರಶೇಖರ ಭಟ್ ನೆಕ್ಕಿದರವು, ವಿಟ್ಲ ವಲಯ ದಿಗ್ದರ್ಶಕ ಶ್ರೀ ಸತೀಶ ಪಂಜಿಗದ್ದೆ, ಕೇಪು ವಲಯ […]

Continue Reading

ಅಮೃತಧಾರಾ ಗೋಶಾಲೆಯಲ್ಲಿ ಸಂಪನ್ನಗೊಂಡಿತು ಗೋಮಾತಾಸಪರ್ಯಾ~ಗೋಪಾಷ್ಟಮೀ

  ಪೆರ್ಲ: ಗೋಪಾಷ್ಟಮಿಯ ಶುಭ ಸಂದರ್ಭದಲ್ಲಿ ಶುದ್ಧ ದೇಶೀಯ ತಳಿಯ ಗೋಮಯದಿಂದ ತಯಾರಿಸಿದ ಗೋವರ್ಧನಗಿರಿಯಲ್ಲಿ ಗುರುವಾರ ರಾತ್ರಿ ಭಗವಾನ್ ಶ್ರೀಕೃಷ್ಣನಿಗೆ ನಡೆದ ರಂಗಪೂಜೆಯನ್ನು ದೀಪದ ಬೆಳಕಿನಲ್ಲಿ ಭಕ್ತಿಭಾವದೊಂದಿಗೆ ಆಚರಿಸಿ ಅನೇಕ ಭಕ್ತಾದಿಗಳು ಕಣ್ತುಂಬಿಕೊಂಡರು.   ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿ ನಡೆಯುತ್ತಿರುವ ಕಾಸರಗೋಡು -ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಕಳೆದ ಒಂದುವಾರದಿಂದ ನಡೆದು ಬರುತ್ತಿದ್ದ ಗೋಮಾತಾ ಸಪರ್ಯಾ ಹಾಗೂ ೮ನೇ ವರ್ಷದ ಗೋಪಾಷ್ಟಮೀ ಮಹೋತ್ಸವವು ಗುರುವಾರ ರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು. ಬೆಳಗ್ಗೆ ಗಣಪತಿ ಹವನ, ಕಾಮಧೇನು ಹವನ, […]

Continue Reading

ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ.   ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ […]

Continue Reading