ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ
ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ. ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ […]
Continue Reading