ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ

ಉಪಾಸನೆ ಸುದ್ದಿ

ಉಪ್ಪಿನಂಗಡಿ: ಶ್ರೀಸಂಸ್ಥಾನದವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ನಡೆಯುತ್ತಿರುವ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ನ. 12ರಂದು ಆರಂಭಗೊಂಡು ನ. 20ರಂದು ಸಮಾಪನಗೊಂಡಿತು.

 

ನ. 12ರಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ ಭಟ್ ಬೈಪದವು ಅವರ ಮನೆಯಲ್ಲಿ ಪಾರಾಯಣ ಪ್ರಾರಂಭಗೊಂಡಿತು. ನ. 13ರಂದು ವೇ.ಬ್ರ. ಬಡಜ ಶ್ರೀ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಎಮ್.ಎಚ್. ರಮೇಶ ಭಟ್, 15ರಂದು ಶ್ರೀ ಯ. ಶಂಕರ ಜೋಯಿಸ ಅಂಗರಜೆ, 16ರಂದು ಶ್ರೀ ಬಿ. ಶ್ರೀರಂಗ ಭಟ್, 17ರಂದು ವೇ.ಬ್ರ. ಮಿತ್ತೂರು ಶ್ರೀ ಶ್ರೀನಿವಾಸ ಭಟ್ಟ, 18ರಂದು ಸಂಪ್ರತಿಷ್ಠಾನದ ಸಂಚಾಲಕ ಪುರೋಹಿತ ಮಿತ್ತೂರು ಶ್ರೀ ತಿರುಮಲೇಶ್ವರ ಭಟ್ಟ ಅನೂಚಾನ ನಿಲಯ, 19ರಂದು ಶ್ರೀ ಎಂ. ತಿರುಮಲೇಶ್ವರ ಭಟ್ಟ ವಾಲ್ತಜೆ ಹಾಗೂ 20ರಂದು ಸಂಪ್ರತಿಷ್ಠಾನದ ಉಪಾಧ್ಯಕ್ಷ ವಡ್ಯದಗಯ ಶ್ರೀ ನಾರಾಯಣ ಭಟ್ಟರಲ್ಲಿ ಪಾರಾಯಣ ನಡೆಯಿತು.

 

ವೇ.ಬ್ರ. ಪುರೋಹಿತ ಮಿತ್ತೂರು ಶ್ರೀ ನಾರಾಯಣ ಜೋಯಿಸ ಕುಡಿಪ್ಪಾಡಿ ಅವರು ಪಾರಾಯಣದ ನೇತೃತ್ವ ವಹಿಸಿದ್ದರು. ಪಾರಾಯಣ ಕರ್ತೃಗಳಾಗಿ ಶಿರಸಿಯವರಾದ ವೇ.ಬ್ರ. ಶ್ರೀ ಸತ್ಯನಾರಾಯಣ ಭಟ್ಟರು ಹಾಗೂ ವೇ.ಬ್ರ. ಶ್ರೀ ಅರುಣ ಭಟ್ಟರು ಸಹಕರಿಸಿದರು. ಪ್ರತಿದಿನ ಬೆಳಗ್ಗೆ 7 ಗಂಟೆಗೆ ಕುಲದೇವತಾರಾಧನೆ, ಸರಸ್ವತೀಪೂಜೆ ನಡೆದು ಆ ದಿನದ ಪಾರಾಯಣದ ಆರಂಭವಾಗಿದ್ದು ನಿಗದಿಯಾದ ಸರ್ಗಗಳ ಪಾರಾಯಣ ಮುಗಿಸಿ ಭೋಜನ, ತದನಂತರ ಅಪರಾಹ್ಣ ಗಂಟೆ 3ರಿಂದ ಸುಮಾರು ಒಂದು ಗಂಟೆಯ ಕಾಲ ವೇ.ಬ್ರ. ಮಿತ್ತೂರು ಶ್ರೀ ನಾರಾಯಣ ಭಟ್ಟ ಕುಡಿಪ್ಪಾಡಿಯವರಿಂದ ಪ್ರವಚನ ನಡೆಯಿತು.

 

ವಿಶೇಷ ಕಾರ್ಯಕ್ರಮವಾಗಿ, ಅನೂಚಾನ ನಿಲಯದಲ್ಲಿ ಶ್ರೀರಾಮ ಕಲ್ಪೋಕ್ತ ಪೂಜೆ, ದಂಪತಿವಾಯನ ದಾನ, ವಾಲ್ತಜೆಯಲ್ಲಿ ಶ್ರೀರಾಮ ಹವನ, ಹವನಾಂಗ ಕಲಶ, ಹಾಗೂ ವಡ್ಯದಗಯದಲ್ಲಿ ಕೊನೆಯ ದಿನ ಶ್ರೀರಾಮ ಪಟ್ಟಾಭಿಷೇಕದ ಅಂಗವಾಗಿ ಶ್ರೀರಾಮ ಕಲ್ಪೋಕ್ತಪೂಜೆ, ಶ್ರೀರಾಮ ಪ್ರೀತ್ಯರ್ಥಂ ರಾಜೋಪಚಾರಾಂಗ ಅಷ್ಟಾವಧಾನ ಸೇವೆ, ಅನಂತರ ವೈದಿಕರಿಗೆ ಸಂಭಾವನೆ ಸಮರ್ಪಣೆ, ಗೌರವಾರ್ಪಣೆ, ಆಶೀಃಸಂಪ್ರಾರ್ಥನೆ, ವೈದಿಕ ಮಂತ್ರಾಕ್ಷತೆ ನೆರವೇರಿತು.

 

ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಾಪು, ಉಪ್ಪಿನಂಗಡಿ ಮಂಡಲದ ಕಾರ್ಯದರ್ಶಿ ಶ್ರೀ ಶ್ರೀಧರ ಭಟ್ ಕುವೆತ್ತಂಡ ಅವರು ಪಾರಾಯಣ ದಿನಗಳಲ್ಲಿ ಭಾಗವಹಿಸಿದ್ದರು.

 

ಸಮಾರೋಪ ಕಾರ್ಯಕ್ರಮದಲ್ಲಿ, ಡಾ. ಪಾದೆಕಲ್ಲು ವಿಷ್ಣು ಭಟ್ಟ ಹಾಗೂ ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಭಾಗವಹಿಸಿ, ಶ್ರೀ ರಾಮಾಯಣ ಪಾರಾಯಣದ ಸಂಕಲ್ಪ ಹಾಗೂ ಉದ್ದೇಶ ತಿಳಿಸಿದರು.

 

ಸಂಪ್ರತಿಷ್ಠಾನದ ವತಿಯಿಂದ ನಡೆದ ರಾಮಾಯಣ ಪಾರಾಯಣದ ಸಮಾರೋಪದ ದಿನವೇ, ಗಿರಿನಗರದ ಶ್ರೀರಾಮಾಶ್ರಮದಲ್ಲಿ, ಶ್ರೀಸಂಸ್ಥಾನದವರು ಶ್ರೀಕರಾರ್ಚಿತ ಪೂಜೆ ಹಾಗೂ ಮಹಾನೈವೇದ್ಯವನ್ನು ಸಮರ್ಪಿಸಿರುವುದು ಯೋಗಾಯೋಗ ಎಂದು ಶ್ರೀಮತಿ ಈಶ್ವರೀ ಬೇರ್ಕಡವು ತಿಳಿಸಿದರು.

Author Details


Srimukha

Leave a Reply

Your email address will not be published. Required fields are marked *