ಪೆರಿಯದ ಪೆರಿಯೋಕ್ಕಿ ದ್ರವ್ಯಕಲಶಮಹೋತ್ಸವದಲ್ಲಿ ಶ್ರೀಸಂಸ್ಥಾನದವರು

ಉಪಾಸನೆ

10.04.2019 ರಂದು ಕಾಸರಗೋಡಿನ ಪೆರಿಯದ ಪೆರಿಯೋಕ್ಕಿ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಜರುಗಿದ ಕ್ಷೇತ್ರ ನವೀಕರಣ – ದ್ರವ್ಯಕಲಶ ಮಹೋತ್ಸವದ ಅಂಗವಾಗಿ ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಶ್ರೀ ಕ್ಷೇತ್ರ ಸೇವಾಸಮಿತಿಯ ಪದಾಧಿಕಾರಿಗಳು ಮತ್ತು ಊರ ಭಕ್ತವೃಂದವರಿಂದ ಚೆಂಡೆ ವಾದ್ಯಘೋಷಗಳೊಂದಿಗೆ ವಿಜೃಂಭಣೆಯ ಸ್ವೀಕರಣ ಜರಗಿತು.

 

ಶ್ರೀಗಳು ಶ್ರೀ ಕ್ಷೇತ್ರಕ್ಕೆ ಚಿತ್ತೈಸಿ ದೇವದರ್ಶನ ಮಾಡಿದರು. ಬಳಿಕ ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು. ಕ್ಷೇತ್ರ ಸೇವಾಸಮಿತಿಯ ಕಾರ್ಯದರ್ಶಿಗಳಾದ ಪ್ರಮೋದ್ ಪೆರಿಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣನ್ ಅವರು ಫಲಸಮರ್ಪಣೆಮಾಡಿದರು. ಶ್ರೀ ಸಂಸ್ಥಾನದವರು ಆಶೀರ್ವಚನ ಮಾಡಿ ಬಳಿಕ ಸೇರಿದ ಭಕ್ತವೃಂದದವರಿಗೆ ಅನುಗ್ರಹ ಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು. ಕ್ಷೇತ್ರ ಸೇವಾಸಮಿತಿಯ ಗೌರವಾಧ್ಯಕ್ಷರೂ ಪೆರಿಯ ಗೋಗಂಗಾ ಪಂಚಗವ್ಯಚಿಕಿತ್ಸಾ ಕೇಂದ್ರದ ಸಂಚಾಲಕರೂ ಆಗಿರುವ ವಿಷ್ಣುಪ್ರಸಾದ್ ಪೂಚಕ್ಕಾಡ್ ಇವರು ಸಮಾರಂಭ ಸಂಯೋಜನೆ ಮಾಡಿದರು.

 

ಈ ಸಂದರ್ಭದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ, ಮಹೇಶ್ ಸರಳಿ, ನವನೀತಪ್ರಿಯ ಕೈಪ್ಪಂಗಳ, ಮಹಾಮಂಡಲದ ಗೋವಿಂದಬಳ್ಳಮೂಲೆ, ವಲಯದವರಾದ ವೈ. ವಿ. ರಮೇಶ ಭಟ್ಟ ಈಶ್ವರ ಭಟ್ಟ, ಉಳುವಾನ, ಪಳ್ಳತ್ತಡ್ಕ ವಲಯದ ಸುಬ್ರಹ್ಮಣ್ಯ ಭಟ್ಟ ಕೆರೆಮೂಲೆ, ಪ್ರದೇಶದ ಗಣೇಶ ಕೋಂಗೋಟು, ಕೃಷ್ಣರಾಜ ಪುನೂರು ಮೊದಲಾದವರು ಉಪಸ್ಥಿತರಿದ್ದರು.

 

Author Details


Srimukha

Leave a Reply

Your email address will not be published. Required fields are marked *