ಶುಭೋದಯ ಬೆಂಗಳೂರು!
ಬೆಂಗಳೂರಿಗರೇ,
ಬೆಳಗ್ಗೆ-ಬೆಳಗ್ಗೆಯೇ ವಾಹನ ಶಬ್ದ ಕೇಳಿ ಕೇಳಿ ಸಾಕಾಗಿದೆಯೇ?
ಕಛೇರಿಯ ಒತ್ತಡಗಳಿಂದ ಮನಸ್ಸು ಬೇಸತ್ತು ಹೋಗಿದೆಯೇ?
ನೆಮ್ಮದಿ, ಸಮಾಧಾನ ಬೇಕು ಅನ್ನಿಸುತ್ತಿದೆಯೇ?
ನಿಮಗೊಂದು ಶುಭ ಸುದ್ದಿ. ಪರಮಪೂಜ್ಯ ಶ್ರೀಸಂಸ್ಥಾನದವರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ವಸತಿಯ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಶ್ರೀಪೂಜೆಯನ್ನು ಕೈಗೊಳಲಿದ್ದಾರೆ.
ನೀವು,
ರಾಮದೇವಸ್ಥಾನದ ಆವರಣದಲ್ಲಿ, ಗೋವುಗಳ ‘ಅಂಬಾ’ ಆಲಾಪದ ಮಧ್ಯೆ ಕೂತಿದ್ದೀರಿ,
ಕಣ್ಣಲ್ಲಿ ಗುರುಗಳನ್ನು ಹಾಗೂ ರಾಮದೇವರನ್ನು ತುಂಬಿಕೊಂಡಿದ್ದೀರಿ,
ಕಿವಿಗಳಿಂದ ವೇದಮಂತ್ರ, ಘಂಟೆ, ಶಂಖ, ನಗಾರಿ ಶುಭವಾದ್ಯಗಳ ಘೋಷ ಕೇಳುತ್ತಿದ್ದೀರಿ,
ಮನಸ್ಸಿನಲ್ಲಿ ಮಂಗಲತೆಯನ್ನು ತಂದುಕೊಂಡಿದ್ದೀರಿ,
ಇನ್ನೇನು ಬೇಕು ನಿಮ್ಮ ದಿನದ ಆರಂಭ ಚೆನ್ನಾಗಿ ಆಗಲು?!
ಹಾಗೆಯೇ ಸಂಜೆಯ ಶ್ರೀಪೂಜೆಯೂ ೬ ಗಂಟೆಗೆ ನೆರವೇರಲಿದೆ. ಕರ್ತವ್ಯಗಳನ್ನು ಮುಗಿಸಿಕೊಂಡು ಸಂಜೆ ಪೂಜೆಯನ್ನು ನೋಡಿ ಸಮಾಧಾನ ಹೊಂದಿದ ಮೇಲೆ
ಇನ್ನೇನು ಬೇಕು ‘ಈ ದಿನ ಸುದಿನ’ ಎಂದು ಹೇಳಲು?!
ಈ ಸದವಕಾಶವನ್ನು ಬಳಸಿಕೊಳ್ಳಿ. ಬದುಕಿನಲ್ಲಿ ಅಧ್ಯಾತ್ಮ, ಆನಂದಗಳನ್ನು ತುಂಬಿಕೊಳ್ಳಿ.