ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಲಿ: ರಾಘವೇಶ್ವರ ಶ್ರೀ

  ಗೋಕರ್ಣ: ಸಮಸ್ತ ಸಮಾಜಕ್ಕೆ ಸುಜ್ಞಾನದ ಬೆಳಕನ್ನು ಹರಿಸಿದ ಗುರುಪರಂಪರೆಯ ಪೂಜೆಯೇ ಗುರುಪೂರ್ಣಿಮೆಯ ವಿಶೇಷ. ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಬೇಕು ಎಂಬ ಮಹತ್ಸಂಕಲ್ಪದೊಂದಿಗೆ ಈ ಬಾರಿಯ ಚಾತುರ್ಮಾಸ್ಯವನ್ನು ಗುರುಕುಲ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಗುರುಕುಲ ಚಾತುರ್ಮಾಸ್ಯ ಆರಂಭದ ದಿನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದ ಪೂಜ್ಯರು, “ಗುರುಪೂರ್ಣಿಮೆ ಎನ್ನುವುದು ಜ್ಞಾನಚೈತನ್ಯದ ಪೂಜೆ. ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲ ಉದ್ದೇಶವೂ ಸುಜ್ಞಾನ ಪ್ರಸಾರ. ವಿಶ್ವವಿದ್ಯಾಪೀಠ ಕಟ್ಟಲು ಸಮಸ್ತ […]

Continue Reading

ಚಾತುರ್ಮಾಸ್ಯ: ರಾಘವೇಶ್ವರ ಶ್ರೀ ಪುರಪ್ರವೇಶ

  ಗೋಕರ್ಣ: ಶ್ರೀಮಗ್ಗಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಇಪ್ಪತ್ತೊಂಬತ್ತನೇ ಚಾತುರ್ಮಾಸ್ಯದ ಅಂಗವಾಗಿ ಶ್ರೀಗಳ ಪುರಪ್ರವೇಶ ಅಶೋಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಆಗಮಿಸಿದ ಪರಮಪೂಜ್ಯರನ್ನು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಡಿ.ಡಿ.ಶರ್ಮಾ, ಸತ್ಯನಾರಾಯಣ ಶರ್ಮಾ, ವಿವಿಧ ಸಮಾಜಗಳ ಗಣ್ಯರು ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಇಪ್ಪತ್ತೊಂಬತ್ತನೇ ಚಾತುರ್ಮಾಸ್ಯ ವ್ರತ ಆಷಾಢ ಹುಣ್ಣಿಮೆಯಂದು ಬುಧವಾರ (ಜುಲೈ 13) ಅಶೋಕೆಯಲ್ಲಿ ಆರಂಭವಾಗಲಿದೆ. ಮಧ್ಯಾಹ್ನ 2.30ಕ್ಕೆ ನಡೆಯುವ […]

Continue Reading

ಪುರುಷೋತ್ತಮ’ ಪ್ರಶಸ್ತಿ ಪ್ರಧಾನ

ಸಿದ್ದಾಪುರ: ಜಗತ್ತಿನಲ್ಲಿ ಬಹಳಷ್ಟು ತತ್ವಜ್ಞಾನಿಗಳು ಆಗಿಹೋಗಿದ್ದಾರೆ. ಆದರೆ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನ ಎಂದು ಕರೆಯುವುದು ವಿಶೇಷವಾಗಿದೆ ಎಂದು ಶ್ರೀ ರಾಜಾರಾಮ ಕ್ಷೇತ್ರದ ಸ್ವಾಮೀಜಿಗಳಾದ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಹೇಳಿದರು. ಅವರು ಶುಕ್ರವಾರ ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ನಡೆದ ಶಂಕರ ಪಂಚಮಿಯ ಧರ್ಮಸಭೆ ಮತ್ತು ಪುರುಷೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ, ಮತ ಭೇದವಿಲ್ಲದೆ ಸಾರ್ವಕಾಲಿಕವಾದ, ಸಾರ್ವದೇಶಿಕವಾದ ಉಪದೇಶ ನೀಡಿದಂತಹ ಶಂಕರರನ್ನು ಜಗದ್ಗುರು ಎಂದು ಕರೆಯಲಾಗಿದೆ. ಕರ್ಮ ಮತ್ತು ಚಿತ್ತ ಶುದ್ಧಿಯ ಮೂಲಕ ಮೋಕ್ಷಪ್ರಾಪ್ತಿ […]

Continue Reading

ಸಜ್ಜನರ ಸಿಟ್ಟು ಲೋಕಕ್ಕೆ ಅಪಾಯಕಾರಿ; ರಾಘವೇಶ್ವರ ಶ್ರೀ

ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮಥ್ರ್ಯ, ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, ಸಿಟ್ಟು ನಮ್ಮ ವಿವೇಕವನ್ನು ಹಾಳು ಮಾಡುತ್ತದೆ. ಸಿಟ್ಟು ಶಿವನ ಸೃಷ್ಟಿ. ಅದು ನಮ್ಮ ಕೈಯಲ್ಲಿದ್ದರೆ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಾವಿದ್ದರೆ […]

Continue Reading

ನಮ್ಮ ಹೃದಯವೇ ರಾಮಮಂದಿರ; ರಾಘವೇಶ್ವರ ಶ್ರೀ

ಪ್ರತಿಯೊಬ್ಬರ ಅಂತರಾಳದಲ್ಲಿ ಆತ್ಮರೂಪದ ರಾಮನಿದ್ದಾನೆ. ನಮ್ಮ ಹೃದಯವೇ ರಾಮಮಂದಿರ ಎಂಬ ಸತ್ಯವನ್ನು ಅರಿತುಕೊಳ್ಳುವುದೇ ಬದುಕಿನ ಧರ್ಮ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ನಾಲ್ಕನೇ ದಿನದ ಪ್ರವಚನ ಅನುಗ್ರಹಿಸಿದ ಅವರು, ಲಂಕಾ ಸಾಮ್ರಾಜ್ಯ ತೊರೆದ ಬಳಿಕ ಆತ್ಮದಲ್ಲಿರುವ ರಾಮನಷ್ಟೇ ವಿಭೀಷಣನ ಆಸ್ತಿ. ವಿಭೀಷಣನ ಭವಿಷ್ಯದ ಬದುಕು ಅಮೂರ್ತವಾಗಿತ್ತು. ಅಮೂರ್ತದಿಂದ ರಾಮಮೂರ್ತಿಯನ್ನು ಕಂಡುಕೊಂಡಿದ್ದರಿಂದಲೇ ವಿಭೀಷಣನ ಮುಂದಿನ ಹಾಸಿ ಸ್ಪಷ್ಟವಾಯಿತು. ಈ ಅರಿವೇ ಮುಂದೆ […]

Continue Reading

ಆಸೆಯ ಪಾಶದಿಂದ ಮುಕ್ತಿ ಪಡೆದರಷ್ಟೇ ಮನಃಶಾಂತಿ: ರಾಘವೇಶ್ವರ ಶ್ರೀ

ಆಸೆಯ ಪಾಶದಿಂದ ಮುಕ್ತಿ ಪಡೆದರೆ ಮಾತ್ರ ಮನಃಶಾಂತಿ ಸಾಧಿಸಲು ಸಾಧ್ಯ. ಆಸೆಯ ಪಾಶದಿಂದ ಏನು ಅನಾಹುತವಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೂರನೇ ದಿನದ ಪ್ರವಚನ ಅನುಗ್ರಹಿಸಿದ ಅವರು, “ಆಸೆ ಮನದಾಳದಲ್ಲಿ ಹುಟ್ಟಿಕೊಂಡರೆ ತಾನು ಸುಮ್ಮನಿರುವುದಿಲ್ಲ. ನಮ್ಮನ್ನು ಸಮ್ಮನಿರಲು ಬಿಡುವುದಿಲ್ಲ. ಆಸೆ ಅನಾಹುತಕ್ಕೆ ಕಾರಣ. ಇದು ರಜೋಗುಣ. ಭಯ, ಚಿಂತೆ, ದ್ವೇಷ, ಕ್ರೋಧ ಎಲ್ಲವೂ ಆಸೆಯ […]

Continue Reading

ರಾಮ- ಸೀತೆಯರ ಪ್ರೀತಿ ಅಲೌಕಿಕ, ಧರ್ಮಸಮ್ಮತ: ರಾಘವೇಶ್ವರ ಸ್ವಾಮೀಜಿ

ರಾಮ- ಸೀತೆಯರ ಪ್ರೀತಿಯನ್ನು ಕ್ಷುದ್ರ ದೃಷ್ಟಿಯಿಂದ ನೋಡದೇ ಅದನ್ನು ಮೂಲಪ್ರಕೃತಿ ಮತ್ತು ಪರಮ ಪುರುಷನ ಪ್ರೀತಿಯಾಗಿ ಲೌಕಿಕ ದೃಷ್ಟಿಯಿಂದ ನೋಡಬೇಕು ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಎರಡನೇ ದಿನದ ಪ್ರವಚನ ಅನುಗ್ರಹಿಸಿದ ಅವರು, ರಾಮ ಸೀತೆಯ ಪ್ರೀತಿ ಪರಿಪೂರ್ಣ. ಪರಿಪೂರ್ಣ ಪ್ರೀತಿಯಷ್ಟೇ ವಿಶ್ವದ ಪ್ರೀತಿಯಾಗಿ ಭಗವತ್ ಪ್ರೀತಿಯಾಗಿ ಮಾರ್ಪಡುತ್ತದೆ ಎಂದು ವಿಶ್ಲೇಷಿಸಿದರು. ಪ್ರೀತಿ ಹಾಗೂ ತ್ಯಾಗಕ್ಕೆ ರಾಮ […]

Continue Reading

ರಾಮನ ಸೀತಾಪ್ರೀತಿ ಪ್ರಶ್ನಾತೀತ: ರಾಘವೇಶ್ವರ ಶ್ರೀ

ಅಗ್ನಿಪರೀಕ್ಷೆ ಹಿನ್ನೆಲೆಯಲ್ಲಿ ಸೀತೆಯ ಬಗೆಗಿನ ರಾಮನ ಪ್ರೀತಿಯನ್ನು ಪ್ರಶ್ನಿಸುವವರಿದ್ದಾರೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ರಾಮಸೇತು ಉತ್ತರ ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಬುಧವಾರ ಆರಂಭವಾದ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೊದಲ ದಿನದ ಪ್ರವಚನ ಅನುಗ್ರಹಿಸಿದ ಅವರು, “ಜಗತ್ತಿನ ತಂದೆ ತಾಯಿಗಳನ್ನು ಒಂದಾಗಿಸಿದ್ದು ರಾಮಸೇತು. ತ್ರೇತಾಯುಗ ಯುಗದಲ್ಲಿ ಸೀತೆಗಾಗಿ ವಿಶ್ವಯುದ್ಧವನ್ನೇ ರಾಮ ನಡೆಸಿದ್ದಾನೆ. ಸಮುದ್ರಕ್ಕೆ ಸೇತುವೆ ನಿರ್ಮಿಸಿದ್ದು ಸೀತೆಗಾಗಿ. ಇಂಥ ಪ್ರೀತಿಯನ್ನು […]

Continue Reading

ಉಕ್ರೇನ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಭಾರತ ಸರ್ಕಾರ ಆರಂಭಿಸಿದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಗೆ ಶ್ರೀರಾಮಚಂದ್ರಾಪುರ ಮಠ ಟ್ವಿಟ್ಟರ್‍ನಲ್ಲಿ ಸಹಾಯವಾಣಿ ಆರಂಭಿಸುವ ಮೂಲಕ ನೆರವು ನೀಡಿರುವುದು ಸಂತ್ರಸ್ತ ವಿದ್ಯಾರ್ಥಿಗಳ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಉಕ್ರೇನ್ ಮೇಲೆ ಫೆಬ್ರುವರಿ 24ರಂದು ರಷ್ಯಾ ಅತಿಕ್ರಮಣ ನಡೆಸಿದ ಸುದ್ದಿ ಸ್ಫೋಟವಾಗುತ್ತಿದ್ದಂತೆ, ಉಕ್ರೇನ್‍ನಲ್ಲಿರುವ ಅಪಾರ ಸಂಖ್ಯೆಯ ಶ್ರೀಮಠದ ಶಿಷ್ಯರು, ಕನ್ನಡಿಗ ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಉದ್ದೇಶದಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ […]

Continue Reading

ಸೇವೆಯಿಂದ ದಿವ್ಯತೆ, ಪವಿತ್ರತೆ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಮಂಗಳೂರು: ಮಠಕ್ಕೆ ಭೇಟಿ ನೀಡುವುದೇ ಒಂದು ಪುಣ್ಯಸ್ನಾನ ಇದ್ದಂತೆ. ಸೇವೆ ಸಲ್ಲಿಸುವುದು ಇನ್ನಷ್ಟು ಶ್ರೇಷ್ಠ. ನಮ್ಮ ಜೀವ- ಆತ್ಮವನ್ನು ಶುಚಿಗೊಳಿಸುವಂಥದ್ದು. ದಿವ್ಯತೆ, ಶುದ್ಧತೆ, ಪವಿತ್ರತೆ ನಮಗೆ ಗುರುಸೇವೆಯಿಂದ ಪ್ರಾಪ್ತವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಮಾಣಿಯ ಪೆರಾಜೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ 49ನೇ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಮಠದ ಕೆಲಸ ಕಾರ್ಯ, ಸೇವೆ ನಮ್ಮ ಜೀವನದ ಸಾರ್ಥಕತೆಗಾಗಿ ಇರುವಂಥದ್ದು. ಅತೀವ ಶಾಂತಿ- ಸಮಾಧಾನವನ್ನು […]

Continue Reading

ಸೀಮೋಲ್ಲಂಘನೆ ಮುಕ್ತಿಗೆ ಸೋಪಾನ: ರಾಘವೇಶ್ವರ ಶ್ರೀ

ಬೆಂಗಳೂರು: ಸೀಮೋಲ್ಲಂಘನೆ ಎಂದರೆ ಆತ್ಮದ ವಿಸ್ತರಣೆ ಮತ್ತು ಮುಕ್ತಿಗೆ ಸೋಪಾನ. ಆತ್ಮವಿಸ್ತಾರವಾಗಿ ಮುಕ್ತಿ ಪಡೆಯುವುದೇ ನಿಜ ಅರ್ಥದ ಸೀಮೋಲ್ಲಂಘನೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ಪ್ಲವನಾಮ ಸಂವತ್ಸರದ ವಿಶ್ವವಿದ್ಯಾ ಚಾತುರ್ಮಾಸ್ಯದ ಸೀಮೋಲ್ಲಂಘನೆ ಧರ್ಮಸಭೆಯಲ್ಲಿ ಪಡೀಲು ಮಹಾಬಲೇಶ್ವರ ಭಟ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮತ್ತೊಬ್ಬರ ದುಃಖ ಪರಿಹರಿಸುವುದು ನಿಜ ಅರ್ಥದ ಸೀಮೋಲ್ಲಂಘನೆ. ಅವರವರ ಕರ್ತವ್ಯವನ್ನು ಮಾಡುವ ಜತೆಗೆ ಕ್ಷೇತ್ರ ವಿಸ್ತಾರ, ಬದುಕಿನ ಆಯಾಮ ವಿಸ್ತರಿಸುವ ಪ್ರಯತ್ನ ಮಾಡಬೇಕು. ಇಡೀ ವಿಶ್ವಕ್ಕೇ ವ್ಯಾಪಿಸುವುದೇ […]

Continue Reading

ಸಮಾಜಕ್ಕಾಗಿ ಮಾಡುವ ಸಮರ್ಪಣೆ ಔದಾರ್ಯವಲ್ಲ; ಅದು ಕರ್ತವ್ಯ – ರಾಘವೇಶ್ವರ ಶ್ರೀ

  ಸಮಾಜಕ್ಕಾಗಿ ಮಾಡುವ ಸಮರ್ಪಣೆ ಅಥವಾ ಕೆಲಸವು ಔದಾರ್ಯವಲ್ಲ. ಅದು ಕರ್ತವ್ಯವೇ ಆಗಿದೆ. ಮನುಷ್ಯ ಸಂಘಜೀವಿಯಾಗಿದ್ದು, ಸಮಾಜದಲ್ಲಿ ಪರಸ್ಪರ ಸಹಕಾರವಿಲ್ಲದೇ ಜೀವನನಡೆಸಲು ಸಾಧ್ಯವಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.   ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ “ವಿಶ್ವವಿದ್ಯಾ~ ಚಾತುರ್ಮಾಸ್ಯ” ದ ಸಂದರ್ಭದಲ್ಲಿ *ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ* ಸ್ವೀಕರಿಸಿ ಮಾತನಾಡಿದ ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಂಘಟನೆಗೆ ಹಾಗೂ ಸಮಾಜಕ್ಕೆ ಇರುವೆಯು ಪರಮಾದರ್ಶವಾಗಿದೆ. ಇರುವೆಯ ಶಿಸ್ತು, ವಿಘ್ನಗಳಿಗೆ ಜಗ್ಗದಿರುವುದು, ಅಂತಃಕಲಹ ಇಲ್ಲದಿರುವುದು, […]

Continue Reading

ರಾಮಾಶ್ರಮದಲ್ಲಿ ವೈಭವದ ಶ್ರೀರಾಮ ಪಟ್ಟಾಭಿಷೇಕ ರಾಮನ ಆದರ್ಶ ಪಾಲನೆಗೆ ರಾಘವೇಶ್ವರ ಶ್ರೀ ಸಲಹೆ

ಬೆಂಗಳೂರು: ರಾಮಾಯಣ ಪಾರಾಯಣದಿಂದ ಧಾರ್ಮಿಕ ವಾತಾವರಣ ನಿರ್ಮಾಣ ಸಾಧ್ಯ. ರಾಮಾಯಣದ ಸತ್ವ- ಶಕ್ತಿ ಅಂಥದ್ದು. ಇಂಥ ಅನೇಕ ಸನ್ನಿವೇಶಗಳು ಸ್ವತಃ ಅನುಭವಕ್ಕೆ ಬಂದಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶ್ರೀರಾಮಶ್ರಮದಲ್ಲಿ ‘ಶ್ರೀರಾಮಸಾಮ್ರಾಜ್ಯ ಪಟ್ಟಾಭಿμÉೀಕ’ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಆಡಳಿತ ಎಂದರೆ ರಾಮರಾಜ್ಯದ ನೆನಪಾಗುತ್ತದೆ. ರಾಮನ ನಂತರ ಕೋಟ್ಯಂತರ ರಾಜರು ಆಳಿದ್ದಾರಾದರೂ, ಇಂದಿಗೂ ರಾಮರಾಜ್ಯಕ್ಕೆ ಸಾಟಿಯಿಲ್ಲ. ಹಾಗೆಯೇ ರಾಮಾಯಣ ಆದಿಕಾವ್ಯವಾಗಿದ್ದು, ಅದರ ನಂತರ ಕೋಟ್ಯಂತರ ಕಾವ್ಯ ರಚನೆಯಾಗಿದ್ದರೂ, ರಾಮಾಯಣಕ್ಕೆ ಸಾಟಿಯಿಲ್ಲ. ರಾಮಾಯಣದ ಒಂದೊಂದು […]

Continue Reading

*ಶ್ರೀ ಗುರು ಪೀಠದ ಮೇಲಿನ‌ ಅಚಲ ನಂಬಿಕೆಯು ಭವ್ಯ ಬದುಕಿನ ಸೋಪಾನ* ” : ಅಮ್ಮಂಕಲ್ಲು ರಾಮ ಭಟ್

  ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಭೆಯು ದಿನಾಂಕ ೩೦ – ೦೭ – ೨೦೨೧ ,ಶುಕ್ರವಾರ ಎಡಕ್ಕಾನ ಘಟಕದ ಅಧ್ಯಕ್ಷರಾದ ಸುಬ್ಬಾ ಭಟ್ಟರ ‘ ಸುಖನಿಧಿ ‘ ನಿವಾಸದಲ್ಲಿ ಜರಗಿತು. ಧ್ವಜಾರೋಹಣ , ಶಂಖನಾದ, ಗುರುವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ ಪ್ರಸ್ತುತ ಬೆಂಗಳೂರಿನ […]

Continue Reading

ಧನ-ಜನಕ್ಕಿಂತ ಜ್ಞಾನಶಕ್ತಿ ಶ್ರೇಷ್ಠ: ರಾಘವೇಶ್ವರ ಶ್ರೀ

ಬೆಂಗಳೂರು: ಜನ ಅಥವಾ ಧನ ಶಕ್ತಿಯಿಂದ ದೇಶ ಬದಲಿಸಲಾಗದು; ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೇ ಶಂಕರಾಚಾರ್ಯರು ತಮ್ಮ ಜ್ಞಾನಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದಂತೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ ನಿರ್ಮಾಣಕ್ಕೆ ಹೊರಟಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ 28ನೇ ಚಾತುರ್ಮಾಸ್ಯ ವ್ರತಾರಂಭದಲ್ಲಿ ಧರ್ಮಸಂದೇಶ ನೀಡಿದ ಅವರು, “ಇಡೀ ವಿಶ್ವಕ್ಕೆ ಕೋವಿಡ್-19 ಎಂಬ ಗಾಡಾಂಧಕಾರ ಕವಿದ ಸಂಕಷ್ಟದ ಸನ್ನಿವೇಶದಲ್ಲಿ ಈ ಅದ್ಭುತ ಸಂಸ್ಥೆ ಅನಾವರಣಗೊಳ್ಳುತ್ತಿದೆ. ಇದು ದೈವಪ್ರೇರಣೆ. […]

Continue Reading

ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ – ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ದೇವರ ಮೇಲೆ ನಂಬಿಕೆ, ಗುರು ಭಕ್ತಿ, ಸಂಘಟನೆ ಮೇಲೆ ನಿಷ್ಠೆಯಿದ್ದಾಗ ಯಶಸ್ಸು ಜೊತೆಗಿರುತ್ತದೆ. ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅವರು ಭಾನುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಮಂಡಲ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ ಮನುಷ್ಯನ ಭಾವನೆಗಳಷ್ಟು ದೊಡ್ಡ ವಿಷಯ ಬೇರೊಂದು ಇಲ್ಲ. ಸಂಘಟನೆ […]

Continue Reading

ರಜತ ಮಂಟಪ ಸಮರ್ಪಣೆ

ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಕರಾರ್ಚಿತ ದೇವರಿಗೆ ರಜತ ಮಂಟಪ ಸಮರ್ಪಣೆ ನಡೆದು ಗೋಧೂಳಿ ಮುಹೂರ್ತದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯರಿಂದ ನೂತನ ರಜತ ಮಂಟಪದಲ್ಲಿ ಪೂಜೆ ನಡೆಯಿತು.

Continue Reading

ಮಾಣಿಮಠದಲ್ಲಿ ವಿಷ್ಣುಗುಪ್ತ ವಿವಿ ಶಾಖೆ: ರಾಘವೇಶ್ವರಶ್ರೀ

ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿಮಠದ ಶ್ರೀರಾಮ ವೇದಪಾಠಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಘೋಷಿಸಿದರು. ಮಾಣಿ ಮಠ ಸ್ಥಾಪನೆಯ ಮಂಡಲೋತ್ಸವ ಹಾಗೂ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕೃಷ್ಣ ಯಜುರ್ವೇದದ ಪರಿಪೂರ್ಣ ಬೋಧನೆಯ ಜತೆಗೆ ಆಧುನಿಕ ಶಿಕ್ಷಣ, ಭಾರತೀಯ ವಿದ್ಯೆ, ಕಲೆಗಳು ಮತ್ತು ವೇದಾಭ್ಯಾಸವನ್ನು ಇಲ್ಲಿ ಕಲಿಸಿ ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಸಲಾಗುವುದು. ಮಠದ ಈ ಪ್ರಯತ್ನಕ್ಕೆ ಸಮಾಜದ ಸ್ಪಂದನೆ ವಿಶೇಷವಾಗಿ ಅಗತ್ಯ ಎಂದು ಹೇಳಿದರು. ಹವ್ಯಕ, ಹಾಲಕ್ಕಿ, ಮುಕ್ರಿ […]

Continue Reading

ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ

ಅಂಬಾಗಿರಿಯ  ಶ್ರೀ  ರಾಮಕೃಷ್ಣ  ಕಾಳಿಕಾ  ಭವಾನಿ  ಮಠದಲ್ಲಿ  ಪ್ರತಿವರ್ಷ  ಶರನ್ನವರಾತ್ರಿ  ಪ್ರಯುಕ್ತ  ನಡೆಸುವ  ನವ ಚಂಡಿಕಾ  ಹವನ ವೇದಮೂರ್ತಿ  ಕಟ್ಟೆ  ಶಂಕರಭಟ್ಟರ  ಆಚಾರತ್ವ ದಲ್ಲಿ  ಧರ್ಮಕರ್ಮ  ವಿಭಾಗದ  ಪ್ರಧಾನರಾದ ವೇ. ಮೂ. ಜನಾರ್ಧನ  ಭಟ್ಟರ  ನೇತೃತ್ವ  ಹಾಗೂ  ವಲಯದ  ಅಧ್ಯಕ್ಷರಾದ  ವಿ. ಎಂ. ಹೆಗಡೆ  ದಂಪತಿಗಳ  ಯಜಮಾನತ್ವದಲ್ಲಿ  ಸಂಪನ್ನಗೊಂಡಿತು. ಮಾತೆಯರಿಂದ  ಕುಂಕುಮಾರ್ಚನೆ  ಹಾಗೂ  ಕನಕಧಾರಾ  ಸ್ತೋತ್ರ  ಪಠಣ  ನಡೆಯಿತು. ವಲಯದ ವಿದ್ಯಾ  ವಿಭಾಗದಿಂದ ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ  ಶ್ರೀ ಸಂಸ್ಥಾನದವರ  ಆಶೀರ್ವಾದ  ಪೂರ್ವಕ  ಪ್ರಶಂಸನಾ  ಪತ್ರ ವಿತರಣಾ  ಕಾರ್ಯಕ್ರಮವು  […]

Continue Reading

ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಪುರಸ್ಕಾರ

ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ ಮಂಗಳೂರು ಮಧ್ಯ ವಲಯದ ವಿದ್ಯಾರ್ಥಿಗಳನ್ನು ಗುರುತಿಸಿ, ಅ.25ರಂದು ನಂತೂರಿನ ಶ್ರೀ ಭಾರತೀ ಕಾಲೇಜಿನ ಸಭಾಂಗಣ ಶಂಕರಶ್ರೀಯಲ್ಲಿ ಪುರಸ್ಕರಿಸಲಾಯಿತು. ಶಮಂತ ಕೃಷ್ಣ, ಸಿಂಧೂರ ಬಿ ಭಟ್, ಶ್ರೀದೀಪ್, ಸೀತಾ ಖಂಡಿಗೆ, ನಚಿಕೇತ ಶರ್ಮ ಇವರಿಗೆ ಮಹಾಮಂಡಲದಿಂದ ಕೊಡಮಾಡಿದ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು. ಮಂಗಳೂರು ಮಂಡಲದ ಅದ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ, ಮಂಗಳೂರು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಭಾಸ್ಕರ ಹೊಸಮನೆ, ವಲಯ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಭಟ್ […]

Continue Reading