ರಾಮಚಂದ್ರಾಪುರ ಮಠದಿಂದ ಗೋಮಯ ಕಾಗದ ಲೋಕಾರ್ಪಣೆ
ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವಶ್ವರಭಾರತೀ ಮಹಾಸ್ವಾಮೀಜಿ ಸೋಮವಾರ ನೆರವೇರಿಸಿದರು. ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷóಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ ವತಿಯಿಂದ ಗೋಮಯ ಕಾಗದ ತಯಾರಿಸಿರುವುದು ಅತ್ಯಂತ ಅರ್ಥಪೂರ್ಣ. ಶ್ರೀಮಠದಲ್ಲಿ ಇಂಥ ಪರಿಸರಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು. ಇದು ರಾಸಾಯನಿಕ ಮುಕ್ತವಾಗಿರುವುದರಿಂದ ಪರಿಸರ ಸ್ನೇಹಿಯಾಗಿರುವುದು ಮಾತ್ರವಲ್ಲದೇ, ಗೋವಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಮಹತ್ವದ […]
Continue Reading