ವಿಶ್ವವಿದ್ಯಾ ಪೀಠ ವಿಶಿಷ್ಟ ಹಾಗೂ ವಿಭಿನ್ನ ಕಲ್ಪನೆಯ ಕೇಂದ್ರ – ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು

ಪೆರಾಜೆ: ಭಾರತೀಯವಾದ ಅನೇಕ ವಿದ್ಯೆಗಳಿಗೆ ಅಮೂಲಾಗ್ರ ಶಿಕ್ಷಣದ ಕೊರತೆ ಇದೆ. ಎಲ್ಲಾ ವಿಧ್ಯೆಗಳು ಒಂದೇ ಸೂರಿನಲ್ಲಿ ಸಿಗಬೇಕೆಂಬ ನಿಟ್ಟಿನಲ್ಲಿ ವಿಶ್ವವಿದ್ಯಾ ಪೀಠದ ಸ್ಥಾಪನೆ ನಡೆಸಲಾಗುತ್ತಿದೆ. ಭಾರತೀಯತೆಯ ಜತೆಗೆ ಸಮಯುಗದ ಅಗತ್ಯಗಳನ್ನು ಕಲಿಸುವ ಕಾರ್ಯ ಮಾಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ನಿಷ್ಠೆ ಹಾಗೂ ಜ್ಞಾನವನ್ನು ತುಂಬುವ ಕಾರ್ಯವಾಗಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಹೇಳಿದರು. ಅವರು ಶುಕ್ರವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ಫೆ.16ರಂದು ಮಂಗಳೂರಿನಲ್ಲಿ ನಡೆಯುವ ವಿವಿ ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾರ್ಗದರ್ಶನ ಮಾಡಿದರು. ಪೂರ್ಣ […]

Continue Reading

ಎಲ್ಲವೂ ನಿನ್ನದು ಎಂಬ ಭಾವ ಇರಲಿ : ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

ಬೆಂಗಳೂರು: ಯಾವಾಗಲೂ ನನ್ನದು ಎಂಬ ಭಾವ ಬರಬಾರದು ಎಲ್ಲವೂ ನಿನ್ನದು ಎಂಬುದು ಬರಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು. ಗಿರಿನಗರ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ ಧಾರಾ-ರಾಮಾಯಣ ಕಾರಣ-ಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ನನ್ನ ನಿನ್ನ(ದೇವರ) ಮಧ್ಯೆ ಭೇದವಿಲ್ಲವಾಗಿಯೂ ಕೂಡ ಪ್ರಭು ನಾನು ನಿನ್ನವನು ಎನ್ನುವಾಗ ತುಂಬ ಸಮರ್ಪಣಾ ಭಾವ ಇದೆ ಹೊರತು ನೀನು ನನ್ನವನು ಎನ್ನುವಾಗ ನೀನು ನನ್ನವನು ಮಾತ್ರ ಎಂಬುದು ಬಂದಾಗ ಎಲ್ಲ ತಂಟೆ, ತಕರಾರುಗಳು ಶುರುವಾಗುತ್ತದೆ. […]

Continue Reading

ಸೂರ್ಯಗ್ರಹಣ ಶಾಂತಿ ಹವನ

ಹೊಸನಗರ: ಪರಮಪೂಜ್ಯ ಶ್ರೀ ಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ಮಾರ್ಗಶೀರ್ಷ ಕೃಷ್ಣ ಅಮಾವಾಸ್ಯೆಯಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವರ ಸನ್ನಿಧಿಯಲ್ಲಿ ಸೂರ್ಯಗ್ರಹಣ ಶಾಂತಿ ಹವನ ಮತ್ತು ಶತಾಧಿಕ ರುದ್ರಮಂತ್ರ ಪಠಣ, ಅಭಿಷೇಕ, ಹಾಗೂ ರುದ್ರ ಹವನ ಸಂಪನ್ನಗೊಂಡಿದೆ. ೧೩೦ ರುದ್ರಾಧ್ಯಾಯಿಗಳ ಕೂಡುವಿಕೆಯಲ್ಲಿ ೧೪೧೫ ರುದ್ರ ಸಮರ್ಪಣೆ ಆಗಿದೆ.

Continue Reading

ರಾಮಾಯಣ ಕಲ್ಪನೆಯಲ್ಲ, ಇತಿಹಾಸ : ರಾಘವೇಶ್ವರ ಭಾರತೀ ಸ್ವಾಮೀಜಿ

ಬೆಂಗಳೂರು: ರಾಮಾಯಣವೊಂದರಲ್ಲೇ ಭಾರತೀಯ ವಿದ್ಯೆಯ ಸಮಗ್ರ ಚಿತ್ರಣವೂ ಸಿಗುತ್ತದೆ. ಪ್ರಯತ್ನದ ಫಲವು ಯಶಸ್ಸಿನ ಮೂಲಕ ಲಭಿಸುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭಾನುವಾರ ನಡೆದ ಧಾರಾ ರಾಮಾಯಣ ಪ್ರವಚನದ ಮಂಗಲದಲ್ಲಿ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ರಾಮಾಯಣ ಎಂಬುದು ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ, ಭಾಗವತ ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಲಯದಲ್ಲಿ ಈ ಮೂರನ್ನು ಮೂಲವಾಗಿಟ್ಟುಕೊಳ್ಳಲಾಗಿದೆ. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಸ್ಥಾಪನೆಯ ಮಹಾತ್ಕಾರ್ಯಕ್ಕಾಗಿ ಮಾಡಿದ ಸಂಕಲ್ಪಕ್ಕೆ […]

Continue Reading

ಭಕ್ತಿ ಭಾವದಿಂದ ನಡೆದ ಕಾರ್ತೀಕ ದೀಪೋತ್ಸವ

ಭಾನ್ಕುಳಿ: ಶ್ರೀರಾಮದೇವ ಭಾನ್ಕುಳಿಮಠದ ಶ್ರೀರಾಮದೇವ ಸನ್ನಿಧಿಯಲ್ಲಿ ಕಾರ್ತೀಕ ದೀಪೋತ್ಸವ ಸೇವೆ ನಡೆಯಿತು. ದೀಪಾವಳಿ ಪ್ರತಿಪದೆಯಿಂದ ಆರಂಭಗೊಂಡ ದೀಪೋತ್ಸವ ಸೇವೆ ಕಾರ್ತೀಕ ಮಾಸದ ಕೊನೆಯ ಸೋಮವಾರವಾದ ಕಾರಣ ವಿಜೃಂಭಣೆಯಿಂದ ನಡೆಯಿತು. ಸಹಸ್ರಾಧಿಕ ದೀಪಗಳಿಂದ ಶ್ರೀರಾಮ ಸನ್ನಿಧಿ ಕಂಗೊಳಿಸಿತು. ಗೋಸ್ವರ್ಗದ ಸನಿಹದಲ್ಲೇ ಇರುವ ಪುರಾತನ ಶಿವ ದೇವಾಲಯದಲ್ಲಿ ದೀಪೋತ್ಸವ ಸೇವೆ ನೆರವೇರಿಸಿ, ಸಪ್ತಸನ್ನಿಧಿಯಲ್ಲಿ ದೀಪ ಬೆಳಗಿಸಿ ನಂತರ ರಾಮಸನ್ನಿಧಿಯಲ್ಲಿ ಸೇವೆ ಸಲ್ಲಿಸಲಾಯಿತು. ಈ ದಿನ ೧೨ ಕರ್ತೃಗಳ ಸೇವೆ ರಾಮಾರ್ಪಣಗೊಂಡಿತು.

Continue Reading

ಶ್ರೀಮಠದ ಸಮಗ್ರ ರೂಪ ಈ ಜಾಲತಾಣ : ಶ್ರೀಸಂಸ್ಥಾನ

ಗಿರಿನಗರ: ದೇವರನ್ನು ತೋರಿಸುವುದು ಮಠ, ಶ್ರೀಮಠದ ಸಮಗ್ರ ರೂಪವನ್ನು ತೋರಿಸುವಲ್ಲಿ srisamsthana.org ಜಾಲತಾಣವು ಸಹಕಾರಿಯಾಗಲಿದೆ. ಮಠವು ಸಮಾಜಕ್ಕೆ ಬೆಳಕನ್ನು ಕೊಡಬೇಕು, ಮಠದ ಮೇಲೆ ಬೆಳಕನ್ನು ಚೆಲ್ಲಬೇಕು ಈ ಜಾಲತಾಣ. ಶ್ರೀಮಠವು ಎಲ್ಲರದ್ದೂ, ಜಗತ್ತಿನಲ್ಲಿರುವ ಎಲ್ಲರಿಗೂ ಮಠವು ಲಭ್ಯವಾಗಬೇಕು. ಮಠವು ನಮ್ಮದು ಹೌದು ಆದರೆ ನಮ್ಮದು ಮಾತ್ರವಲ್ಲ ಎಲ್ಲರದ್ದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ srisamsthana.org ಜಾಲತಾಣ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆದಿಶಂಕರರು ಮಠವೆಂಬ ದೀಪವನ್ನು […]

Continue Reading

ವಿದ್ಯಾರ್ಥಿವಾಹಿನಿಯಿಂದ ವಿಕಸನ ಕಾರ್ಯಾಗಾರ

ಗಿರಿನಗರ: ಶ್ರೀರಾಮಚಂದ್ರಾಪುರಮಠದ ವಿದ್ಯಾರ್ಥಿವಾಹಿನಿಯಿಂದ ಹೊನ್ನಾವರ ಹಾಗೂ ಮುಳ್ಳೇರಿಯಾ ಮಂಡಲಗಳಲ್ಲಿ ವಿಕಸನ ಕಾರ್ಯಾಗಾರಗಳು ಭಾನುವಾರ ನಡೆಯಿತು. ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೭೭ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಾಲತಿ ಪ್ರಕಾಶ, ವೇ. ಮೂ. ನೀಲಕಂಠ ಯಾಜಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಮುಳ್ಳೇರಿಯಾ ಮಂಡಲದಲ್ಲಿ ೫೮ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಂಡೇಮನೆ ವಿಶ್ವೇಶ್ವರ ಭಟ್, ವಿದ್ಯಾ. ಎಸ್. ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೮೦ […]

Continue Reading

ಸಂಪಾದಕರ ಜತೆ ಶ್ರೀಸಂವಾದ

ಗಿರಿನಗರ: ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪೀಠಾರೋಹಣಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀಮಠದ ಕಾಲು ಶತಮಾನದ ಕಾರ್ಯಚಟುವಟಿಕೆಗಳ ಸಿಂಹಾವಲೋಕನ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಿಂತನ-ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರು, ಮಾಧ್ಯಮಸಂಸ್ಥೆಗಳ ಮುಖ್ಯಸ್ಥರ ಜತೆಗೆ ಶ್ರೀಗಳ ಸಂವಾದ ಕಾರ್ಯಕ್ರಮವನ್ನು ಪುನರ್ವಸು ಭವನದಲ್ಲಿ ಗುರುವಾರ (ಅಕ್ಟೋಬರ್ 10) ಹಮ್ಮಿಕೊಳ್ಳಲಾಗಿತ್ತು.   ಇದುವರೆಗೆ ಶ್ರೀಮಠ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಗೋಯಾತ್ರೆಯಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಇನ್ನು ಮುಂದೆ ಸಮಾಜದ ಸರ್ವಾಂಗೀಣ ಪ್ರಗತಿಯ ಉದ್ದೇಶದ ಬೃಹತ್ ಯೋಜನೆಗಳನ್ನು ಕಾಲಮಿತಿಯಲ್ಲಿ […]

Continue Reading