ಸಿದ್ಧಾಪುರ ಮಂಡಲದ ಸಮನ್ವಯ ಸಭಾ ಸರಣಿಯ ಎರಡನೇ ಸಭೆ

ಮಠ

ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಎರಡನೇ ಸಭೆ ಇಂದು ಸಿದ್ಧಾಪುರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗುರುವಂದನೆಯ ನಂತರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ ಸಭಾಪೂಜೆ ನಡೆಸಿದರು.

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಂಡಲ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಗೋಕರ್ಣ ಇವರು ಪಾರಂಪರಿಕ ಶಿಕ್ಷಣದ ಮಹತ್ವ ಹಾಗೂ ವಿಶ್ವವಿದ್ಯಾಪೀಠದಲ್ಲಿ ಆರಂಭಗೊಳ್ಳಲಿರುವ ಪಾರಂಪರಿಕ ಶಿಕ್ಷಣದ ಬಗ್ಗೆ ಮಾತನಾಡಿದರು. ನಂತರ ಮಂಡಲ, ವಲಯ ಪದಾಧಿಕಾರಿಗಳೊಂದಿಗೆ ಸಂವಾದ ನಡೆಯಿತು.

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಫಲಸಮರ್ಪಣೆ ಮಾಡಿದ ನಂತರ ಶ್ರೀಗಳವರು ಪದಾಧಿಕಾರಿಗಳು ನಿರ್ವಹಿಸಬೇಕಾದ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮಂಡಲ, ವಲಯಗಳ ಪದಾಧಿಕಾರಿಗಳು ಪ್ರತಿಯೊಬ್ಬ ಶಿಷ್ಯರ ಮನೆಗೆ ಬೇಟಿ ನೀಡಿ ಸಂಘಟನೆಯಲ್ಲಿ ಹೆಚ್ಚು ತೊಡಗಿಸುವಂತೆ ಮಾಡಿ ಸಂಘಟನೆಯನ್ನು ಬಲಪಡಿಸಿ. ಗುರಿಕ್ಕಾರರ ಕಾರ್ಯದಲ್ಲಿ ವಲಯ ಪದಾಧಿಕಾರಿಗಳು ಜೊತೆಯಲ್ಲಿ ಭಾಗವಹಿಸಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದರು.

ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ವಿಶ್ವವಿದ್ಯಾಪೀಠದಲ್ಲಿರುವ ವಿವಿಧ ವ್ಯವಸ್ಥೆಗಳನ್ನು ಪರಿಚಯಿಸಿದರು. ವಿದ್ಯಾಪರಿಷತ್ ಕಾರ್ಯಾಧ್ಯಕ್ಷ ಡಾ. ಶ್ರೀಧರ ಎಸ್ ಹೆಗಡೆ ನವಯುಗ ಶಿಕ್ಷಣ ಬಗ್ಗೆ ವಿವರಿಸಿದರು. ವ್ಯವಸ್ಥಾ ಪರಿಷತ್ ಪ್ರಧಾನಕಾರ್ಯದರ್ಶಿ ಮಹೇಶ ಚಟ್ನಳ್ಲಿ ವಿವಿವಿ ಪರಿಸರವನ್ನು ಪರಿಚಯಿಸಿದರು.

ಸಭೆಯಲ್ಲಿ ಹವ್ಯಕಮಹಾಮಂಡಲ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ, ಪ್ರಧಾನಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಬಿಂದುಸಿಂಧು ಪ್ರಧಾನ ಅರವಿಂದ ದರ್ಭೆ, ಮುಷ್ಠಿಭಿಕ್ಷಾ ಪ್ರಧಾನ ಶ್ರೀಕೃಷ್ಣ ಮೀನಗದ್ದೆ, ಸಹಾಯ ಪ್ರಧಾನ ವಿಶ್ವನಾಥ ಪಂಡಿತ್ ಬಗ್ಗೋಣ, ವಿದ್ಯಾರ್ಥಿವಾಹಿನಿ ಪ್ರಧಾನೆ ಸಂಧ್ಯಾ ಕಾನತ್ತೂರು, ವಿವಿವಿ ಗೌರವಾಧ್ಯಕ್ಷ ಡಿಡಿ ಶರ್ಮಾ, ಮತ್ತು ಸಿದ್ಧಾಪುರ ಮಂಡಲದ ಹಾಗೂ ವಲಯಗಳ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

Author Details


Srimukha

Leave a Reply

Your email address will not be published. Required fields are marked *