ನಂದಿನಿ ವಲಯದ ಪ್ರತಿಭಾ ಪುರಸ್ಕಾರ ಸಮಾರಂಭ ವಲಯದ ಉಪಾಧ್ಯಕ್ಷರಾದ ಶ್ರೀ ಜಿ . ಎಮ್. ಭಟ್ಟರ ಮನೆಯಲ್ಲಿ ,ಅವರದೇ ಸ್ವಾಗತದೊಂದಿಗೆ ನಡೆಯಿತು. ಎಸ್.ಎಸ್ .ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ 9 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಸೇರಿದ್ದ ಸಭೆಯಲ್ಲಿ ಮಹಾಮಂಡಳದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಸಂಧ್ಯಾ ಕಾನತ್ತೂರು, ಮಹಾಮಂಡಲದ ಕೋಶಾಧ್ಯಕ್ಷರಾದ ಜಿ.ಜಿ ಹೆಗಡೆಯವರು, ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಕೇಶವ ಮುರಳಿಯವರು ,ವಲಯದ ಅಧ್ಯಕ್ಷರಾದ ಸತೀಶ ಹೆಗಡೆಯವರು,ವಲಯ ಉಪಾಧ್ಯಕ್ಷರಾದ ಜಿ.ಎಮ್ ಭಟ್ಟರು, ವಲಯ ಕಾರ್ಯದರ್ಶಿ ಸುರೇಶ ಸಭಾಹಿತ, ವಲಯ ವಿದ್ಯಾರ್ಥಿವಾಹಿನೀ ಪ್ರಧಾನ ಕುಮಾರ, ವಲಯ ಪದಾಧಿಕಾರಿಗಳು, ಗುರಿಕಾರರು ಹಾಗೂ ಹಿತೈಷಿಗಳು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿ ಅಭಿನಂದನೆ ಸಲ್ಲಿಸಿದರು.
ಘಟಕದ ಗುರಿಕಾರರು ಎಲ್ಲ ವಿದ್ಯಾರ್ಥಿಗಳಿಗೆ ಶ್ರೀಗುರುಗಳ ಪೋಟೋ, ಅಭಿನಂದನಾ ಪತ್ರ, ಮಠದ ಪುಸ್ತಕ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಡಾ ಜಯರಾಂ ಹಾಗೂ ಶ್ರೀ ಜಿ.ಎಮ್ ಭಟ್ಟರಿಗೆ ವಿದ್ಯಾ ಬಂಧುವಾಗಿ ಗುರುತಿಸಿ ಶ್ರೀ ಗುರುಗಳ ಫೋಟೋ ನೀಡಿ,ಶಾಲು ಹೊದಿಸಿ, ಗೌರವಿಸಲಾಯಿತು. ಹಾಗೆಯೇ ಸಂಧ್ಯಾ ಕಾನತ್ತೂರು, ಜಿ.ಜಿ ಹೆಗಡೆ, ಕೇಶವ ಮುರಳಿಯವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು.ವಲಯ ವರದಿಯನ್ನು ವಲಯದ ಕಾರ್ಯದರ್ಶಿ ಸುರೇಶ ಸಭಾಹಿತ ತಿಳಿಸಿದರು.
ಸತೀಶ ಹೆಗಡೆಯವರು ಅಧ್ಯಕ್ಷೀಯ ಭಾಷಣ ಮಾಡಿದರು. ವಲಯ ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಕುಮಾರ ಕಾರ್ಯಕ್ರಮ ನಿರೂಪಿಸಿದರು. ಶಂಖನಾದ, ಗುರುವಂದನೆಯೊಂದಿಗೆ ಶುರುವಾದ ಸಭೆ , ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.