ಗೋನಿರ್ಭರತೆಯಿಂದ ಆತ್ಮನಿರಭರತೆ ಸಾಧ್ಯ – ಶ್ರೀಸಂಸ್ಥಾನ

ಮಠ

ರಾಸಾಯನಿಕ ಕೃಷಿ ಒಂದಲ್ಲಒಂದು ದಿನ ರೈತನಕುತ್ತಿಗೆಗೆ ಉರುಳಾಗುತ್ತದೆ. ದೇಶೀ ಗೋವನ್ನು ಸಾಕಿಕೊಂಡುಇದ್ದವರುಯಾರೂಆತ್ಮಹತ್ಯೆ ಮಾಡಿಕೊಂಡಿಲ್ಲ. ಸ್ವಾವಲಂಬಿ ಎಂಬುದಕ್ಕೆ ಗೋವು ಬಲುದೊಡ್ಡ ನಿದರ್ಶನ. ಗೋನಿರ್ಭರತೆಯಿಂದಆತ್ಮನಿರಭರತೆ ಸಾಧ್ಯವಾಗುತ್ತದೆ.ದೇಶದ ಗಮನ ಗೋವಿನ ಕಡೆಗೆ ಹರಿಯುವಂತೆ ಮಾಡಬೇಕು.ಗೋವು ದೇಶಕ್ಕೆ ಬೆಳಕಿನ ಕಿರಣವಾಗಿದ್ದು, ತಂತ್ರಜ್ಞಾನಗಳು ಗೋಜ್ಞಾನದಕಡೆಗೆಕೊಂಡೊಯ್ಯುವಂತಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.

ಶ್ರೀರಾಮಾಂದ್ರಾಪುರ ಮಠದ ವತಿಯಿಂದ ಎ೧ ಲಾಜಿಕ್ಸ್ ಮಂಗಳೂರು ಸಹಕಾರದಲ್ಲಿ ದೇಸೀ ಗೋವು ಆಧಾರಿತಕೃಷಿಯಕುರಿತು ದೇಸೀ ಗೋವು – ಸ್ವಾವಲಂಬಿ ಸಾವಯವ ಕೃಷಿ ವೆಬಿನಾರ್ ಸರಣಿಕಾರ್ಯಕ್ರಮದಲ್ಲಿ ಪರಮಪೂಜ್ಯರು ವಿಶೇಷ ಆಶೀರ್ವಚನ ನೀಡಿದರು.

ಹಸಿರು ಕ್ರಾಂತಿ ಹಾಗೂ ಶ್ವೇತಕ್ರಾಂತಿಎರಡುದೇಶಕ್ಕೆ ಶಾಪವಾಗಿ ಪರಿಣಮಿಸಿತು. ದೇಶ ಹಸಿರಾಗಲೂ ಇಲ್ಲ, ಬಿಳಿ ಆಗಲೂ ಇಲ್ಲ. ಹೊರತಾಗಿ ದೇಶವೆಲ್ಲ ಕೆಂಪಾಯಿತು. ಕೀಟವನ್ನು ಕೊಲ್ಲುವ ಉದ್ದೇಶದಿಂದ ಬಳಕೆಯಾದ ಎಂಡೋಸಲ್ಪಾನ್, ಇಡೀ ಪ್ರಕೃತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶೀಗೋವಾಧಾರಿತ ಕೃಷಿಯಲ್ಲಿರುವ ಫಲವತ್ತತೆ ಬೇರೆಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ರಾಸಾಯನಿಕ ಬಳಕೆಗಿಂತ ಹೆಚ್ಚು ಜೀವಾಮೃತದ ಬಳಕೆಯಿಂದ ತೋಟ ಫಲವತ್ತತೆಯಾಗಿರುತ್ತದೆ. ಗೋವಿನ ಸಗಣಿ ಮೂತ್ರದ ಮೂಲಕ ಪರಿಸರದ ಹಾಗೂ ಮನುಷ್ಯನಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯಎಂದು ವಿಶ್ಲೇಷಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾಕೇಂದ್ರದ ಸಹಾಯಕ ಸಂಶೋಧನಾ ನಿರ್ದೇಶಕಡಾ.ಎಚ್. ಬಿ. ಬಬಲಾದ್ ಮಾತನಾಡಿ, ಪಾರಂಪರಿಕ ಸ್ವಾವಲಂಬಿ ಕೃಷಿ ಇದ್ದಾಗ ಭೂಮಿ ಫಲವತ್ತತೆಯಿಂದಕೂಡಿತ್ತು. ವಿದೇಶೀ ಕೃಷಿ ತಂತ್ರಜ್ಞಾನದಕಡೆಗೆ ಗಮನ ಹೋಗುತ್ತಿದ್ದ ಹಾಗೇ ಸ್ವಾವಲಂಬನೆ ಹಿಂದೆ ಬೀಳಲು ಆರಂಭವಾಯಿತು.ಆಹಾರದಲ್ಲೂ ಪೌಷ್ಠಿಕಾಂಶದಕೊರತೆ ಕಾಣಿಸಿಕೊಳ್ಳಲು ಆರಂಭವಾಯಿತು.ಸಾವಯವಕೃಷಿಯ ಮೂಲಕ ಮಣ್ಣನ್ನು ಜೀವಂತಗೊಳಿಸುವ ಜತೆಗೆಆರ್ಥಿಕ ಲಾಭದಾಯಕವಾಗಿಸಬಹುದು. ಗುಣಮಟ್ಟದಆಹಾರದಜತೆಗೆ ಪರಿಸರ ಸಂರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಿದೆಎಂದರು.

ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಎಸ್.ಎ.ಪಾಟೀಲ್‌ತಮ್ಮಅಧ್ಯಕ್ಷೀಯ ಭಾಷಣದಲ್ಲಿ, ಸಾವಯವ ಕೃಷಿ ಮಾಡುವರೈತರ ಸೈನ್ಯ ಸಿದ್ಧವಾಗಬೇಕಿದೆ. ದೇಸೀ ಗೋವಿನ ಮಹತ್ವವನ್ನು ಮನವರಿಕೆ ಮಾಡುವಕಾರ್ಯನಡೆಯಬೇಕಾಗಿದೆ. ಮಹಿಳೆಯರನ್ನು ಗೋಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅನಿವಾರ್ಯತೆಇದೆ.ಗೋವಿಗೆ ಮಹತ್ವ ನೀಡಿತಮ್ಮದೇಆದ ಪ್ರಯೋಗಗಳನ್ನು ಮಾಡಿದ್ದಾರೆ.ಮನಸ್ಸುಕೊಟ್ಟು ಮಾಡಿದಾಗಕೃಷಿಯಲ್ಲಿ ಲಾಭದಾಯವಾಗಬಹುದುಎಂದು ತಿಳಿಸಿದರು.

ಮಂಡ್ಯ ಕೃಷಿ ಮಹಾವಿದ್ಯಾಲಯ ವಿಸಿ ಫಾರ್ಮ್ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಾಕ ಮತ್ತು ಮುಖ್ಯಸ್ಥಡಾ.ಎಸ್. ಎಸ್. ಪ್ರಕಾಶ್ ವೆಬಿನಾರ್ ನಿರ್ವಹಿಸಿದರು.ಸಂಶೋಧನಾಖಂಡದ ಶ್ರೀಸಂಯೋಜಕ ಗುರುರಾಜ ಪಡೀಲ್ ಪ್ರಸ್ತಾವನೆಗೈದರು.ಕೃಷಿ ವಿಜ್ಞಾನ ವಿಭಾಗದ ಶ್ರೀಸಂಯೋಜಕ ವಿಘ್ನೇಶ್‌ಎನ್‌ಎಸ್ ವಂದಿಸಿದರು.ಅನುಸಂಯೋಜಕಿಆತ್ಮಿಕಾ ಹಾಗೂ ರಾಧಾಕೃಷ್ಣ ಬಂದಗದ್ದೆಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *