ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಸೆ.22ರಿಂದ ಅ.2ರವರೆಗೆ ನವರಾತ್ರ ನಮಸ್ಯಾ ಕಾರ್ಯಕ್ರಮ ನಡೆಯಿತು. ಪ್ರತಿದಿನ ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಲಲಿತೋಪಾಖ್ಯಾನ ಪ್ರವಚನ, ದೀಪಾಲಂಕಾರ, ದುರ್ಗಾದೀಪ ಪೂಜೆ, ಕುಂಕುಮಾರ್ಚನೆ, ಏಕಾದಶಿ ದಿನ ವಿಶೇಷ ಶ್ರೀಚಕ್ರ ಆರಾಧನೆ ಸಂಪನ್ನಗೊಂಡಿತು.
———

ನವರಾತ್ರಿ ಮಹೋತ್ಸವದ ಅಂಗವಾಗಿ ಬೆಂಗಳೂರು ಶ್ರೀ ಭಾರತೀ ವಿದ್ಯಾಲಯದಲ್ಲಿ 26 ಸೆಪ್ಟೆಂಬರ್ 2025ರಂದು ಭಕ್ತಿಯಿಂದ ಹಾಗೂ ಸಂಭ್ರಮದಿಂದ ಸರಸ್ವತಿ ಪೂಜೆ ಆಚರಿಸಲಾಯಿತು. ವಿದ್ಯೆ ಮತ್ತು ಜ್ಞಾನದ ದೇವಿ ಸರಸ್ವತಿಯನ್ನು ಆರಾಧಿಸಿ, ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು.
———

ಭಟ್ಕಳದ ಕಿತ್ರೆ ಶ್ರೀಕ್ಷೇತ್ರ ದೇವಿಮನೆಯಲ್ಲಿ 22-9-2025ರಿಂದ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಶ್ರೀದೇವಿಗೆ ನವರಾತ್ರಿ ಪೂಜೆ, ಚಂಡಿಕಾ ಹೋಮ, ಚೌತಿ ದಿನ 108 ಕಾಯಿಯ ಗಣ ಹೋಮ, ಮಹಾನವಮಿ ಯಂದು ರಂಗಪೂಜೆ, ತಾಂತ್ರಿಕರಿಂದ ಬಲಿ ಉತ್ಸವ ನಡೆಯಿತು.
———

ಚೊಕ್ಕಾಡಿ ಶ್ರೀ ರಾಮದೇವಾಲಯದಲ್ಲಿ ಸಪ್ಟೆಂಬರ್ 22 ರಿಂದ ಅಕ್ಟೋಬರ್ 1 ರ ವರೆಗೆ ಪ್ರತಿದಿನ ಬೆಳಿಗ್ಗೆ ಗಂಟೆ 10 ರಿಂದ ಕುಂಕುಮಾರ್ಚನೆ, ಸ್ತೋತ್ರ ಪಠಣ, ಸಂಜೆ ಗಂಟೆ ಆರರಿಂದ ಭಜನೆ, ಚಂಡಿಕಾ ದುರ್ಗಾಹವನ, ದುರ್ಗಾ ಪೂಜೆ, ಶ್ರೀ ರಾಮದೇವರಿಗೆ ವಿಶೇಷ ಪೂಜೆಗಳೊಂದಿಗೆ ಶರನ್ನವರಾತ್ರಿ ಉತ್ಸವವು ವಿಜ್ರಂಭಣೆಯಿಂದ ಜರುಗಿತು.
———

ಬೆಂಗಳೂರು ಶ್ರೀ ಭಾರತೀ ವಿದ್ಯಾಲಯದಲ್ಲಿ ಆಯುಧ ಪೂಜೆಯ ಅಂಗವಾಗಿ ಗುರುವಂದನೆ ಮತ್ತು ಶಾಲಾ ವಾಹನಗಳ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ವರ್ಷ, ಮುಖ್ಯೋಪಾಧ್ಯಾಯ ಎಸ್.ಐ. ಭಟ್, ಅಡ್ಮಿನ್ ಮ್ಯಾನೇಜರ್ ಶ್ರೀರಾಮ್, ಶಿಕ್ಷಕಿ ಜಯಶ್ರೀ, ಎಲ್ಲಾ ವಾಹನ ಚಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
———

ಕೆಕ್ಕಾರು ಶ್ರೀ ರಾಮಚಂದ್ರಾಪುರ ಮಠದ ಶಾಖಾಮಠ – ಶ್ರೀ ರಘೂತ್ತಮ ಮಠದಲ್ಲಿ 22-9-25 ರಿಂದ 2-10-25 ರ ವರೆಗೆ ಶರನ್ನವರಾತ್ರಿ ಕಾರ್ಯಕ್ರಮ ಮಠ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ನೆರವೇರಿತು. ಕೆಕ್ಕಾರು, ಧಾರೇಶ್ವರ, ವಾಲಗಳ್ಳಿ, ಕುಮಟಾ, ಹೆಗಡೆ, ಗುಡೇಅಂಗಡಿ, ಮೂರೂರು – ಕಲ್ಲಬ್ಬೆ ,ಉಪ್ಪಿನಪಟ್ಟಣ, ಅಚವೆ, ಕಾರವಾರ – ಅಂಕೋಲಾ, ಗೋವಾ, ಕಡ್ಲೆ, ಕರ್ಕಿ, ಹೊಸಾಕುಳಿ, ಹೊನ್ನಾವರ, ಮುಗ್ವಾ ವಲಯಗಳಿಂದ ಶಿಷ್ಯ ಭಕ್ತರು ಮತ್ತು ಮಹಾಮಂಡಲ ಮಂಡಲ ಹಾಗು ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಶೇಷವಾಗಿ ವಿದ್ಯಾದಶಮಿಯ ದಿನ ಶಿಕ್ಷಕರುಗಳಿಂದ ಮಹಾಸೇವೆ ನೆರವೇರಿತು.
———

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 02/10/2025 ರಂದು ಶಾರದಾ ಪೂಜೆ ನೆರವೇರಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ರಿಗೆ ಬಹುಮಾನ ವಿತರಣೆ ಜರಗಿತು. ಪೂಜಿಸಿದ ಪುಸ್ತಕಗಳನ್ನು ಓದಿ ಪ್ರಸಾದ ವಿತರಿಸಲಾಯಿತು. ಸಮಿತಿಯ ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
———

ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶಾರದಾಪೂಜೆ ವೇ.ಮೂ. ಕೋಣಮ್ಮೆ ಮಹಾದೇವ ಭಟ್ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರಂಭ ಕಾರ್ಯಕ್ರಮ ಮತ್ತು ವಿದ್ಯಾಲಯದ ವಾಹನಗಳಿಗೆ ವಾಹನ ಪೂಜೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸೇವಾಸಮಿತಿ ಪದಾಧಿಕಾರಿಗಳು, ರಕ್ಷಕವೃಂದ, ಮತ್ತು ಅಧ್ಯಾಪಕರು ಉಪಸ್ಥಿತರಿದ್ದು ಸಹಕರಿಸಿದರು.
———

ಗೋಸ್ವರ್ಗ ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ 22-09-2025 ರಿಂದ 02-10-2025 ತನಕ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರತಿ ನಿತ್ಯದ ವಿಶೇಷ ದೇವೀ ಪೂಜೆಯ ಜೊತೆ, ಸಪ್ತಶತಿ ಪಾರಾಯಣ, ದೇವೀ ಭಾಗವತ ಪಾರಾಯಣ, ಕುಂಕುಮಾರ್ಚನೆ, ಉಡಿಸೇವೆ, ಗೋಪೂಜೆ ಮುಂತಾದ ಹಲವು ಸೇವೆಗಳು ಸಂಪನ್ನಗೊಂಡವು. ಲಲಿತಾ ಪಂಚಮಿಯ ದಿನ ಮಧ್ಯಾಹ್ನ ಮಾತೃ ವಿಭಾಗದಿಂದ ಕುಂಕುಮಾರ್ಚನೆ ಮತ್ತು ಶ್ರೀ ಗುರುಪಾದುಕಾ ಸ್ತೋತ್ರ ಪಠಣ ಹಾಗೂ ಸಂಜೆ ಹವ್ಯಕ ಮಹಾಮಂಡಲದಿಂದ ದೇವೀ ಪೂಜಾ ಸೇವೆ ನಡೆಯಿತು. ಮಹಾ ನವಮಿಯಂದು ರಾತ್ರಿ ಮಹಾಪೂಜೆಯ ನಂತರ ಶ್ರೀ ಭುವನೇಶ್ವರಿ ತಾಳಮದ್ದಳಾ ಕೂಟ, ಭುವನಗಿರಿ ಇವರಿಂದ ತಾಳಮದ್ದಳಾ ಸೇವೆ ನೆರವೇರಿತು.
———

ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಭೂಮಿ ಹುಣ್ಣಿಮೆ ಪ್ರಯುಕ್ತ ಭೂ ತಾಯಿಗೆ ಪೂಜೆ ಸಲ್ಲಿಸಲಾಯಿತು.
———

ಭಾನ್ಕುಳಿ ಶಾಖೆ – ಶ್ರೀ ರಾಮದೇವ ಮಠದಲ್ಲಿ ಭೂಮಿ ಹುಣ್ಣಿಮೆ ಪ್ರಯುಕ್ತ ಭೂದೇವಿಗೆ ಪೂಜೆ ಸಲ್ಲಿಸಲಾಯಿತು.
———

ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಗಿರಿನಗರ, ಶ್ರೀರಾಮಾಶ್ರಮದಲ್ಲಿ ೨೨ ಸೆಪ್ಟೆಂಬರ್ ೨೦೨೫ ರಿಂದ ೨ ಅಕ್ಟೋಬರ್ ೨೦೨೫ವರೆಗೆ ನವರಾತ್ರಿಮಹೋತ್ಸವ ನಡೆಯಿತು.ಪ್ರತಿದಿನ ದೇವಿಯ ಶಪ್ತಶತಿ ಪಾರಾಯಣ ನಡೆಯಿತು. ಒಟ್ಟು 183 ಶಪ್ತಶತಿ ಪಾರಾಯಣ ನೆರವೇರಿತು. ಮಾತೆಯರಿಂದ ಕುಂಕುಮಾರ್ಚನೆ ಪ್ರತಿದಿನವೂ ನಡೆಯಿತು. ಅಷ್ಟಮಿಯಂದು ದುರ್ಗ ದೀಪ ನಮಸ್ಕಾರ ನೆರವೇರಿತು. ದಶಮಿಯಂದು ನವಚಂಡಿ ಹವನ ನೆರವೇರಿಸಲಾಯಿತು.
———