ಭತ್ತದ ಭಕ್ತಿ – ರಾಮ ನೈವೇದ್ಯ.

ಮಠ

ಮಠದಲ್ಲಿ ಎಷ್ಟು ಬಗೆಯ ಸೇವೆಗಳಿದ್ದರೂ ಈ ಸೇವೆ ಅತಿವಿಶಿಷ್ಟವಾದುದು , ನೇರವಾಗಿ ಶ್ರೀರಾಮದೇವರಿಗೇ ಅದು ನೈವೇದ್ಯವಾಗಿ ಸಲ್ಲುವುದಲ್ಲವೇ ? – ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು , ಶ್ರೀರಾಮಚಂದ್ರಾಪುರಮಠ

ರಾಮನೈವೇದ್ಯ ಭತ್ತದ ಭಕ್ತಿಯಲ್ಲಿ ಮುಳ್ಳೇರಿಯ ಮಂಡಲ

ಗದ್ದೆ ವ್ಯವಸಾಯವು ವಿರಳವಾಗುತ್ತಿರುವ ಈ ದಿನಗಳಲ್ಲಿ ಹಿರಿಯರು ಮತ್ತು ಅವರ ಮಾರ್ಗದರ್ಶನದಲ್ಲಿ ಮಕ್ಕಳು ರಾಮದೇವರ ನೈವೇದ್ಯಕ್ಕಾಗಿ ಭತ್ತದ ಕೃಷಿ ನಡೆಸಲು ನೇಜಿ ನೆಡುವ ಸುಂದರ ದೃಶ್ಯ ಕಂಡು ಬಂದದ್ದು ಕುಂಬಳೆ ಸೀಮೆ ಪ್ರದೇಶದಲ್ಲಿ.

ಕೊರೋನಾ ಕಾರಣದಿಂದ ಎಲ್ಲೆಡೆ ಲಾಕ್ ಡೌನ್, ಪ್ರಯಾಣ, ಶಾಲೆ ಯಾವುದೂ ಇಲ್ಲದ ಈ ಸನ್ನಿವೇಶದಲ್ಲಿ ಸಂದರ್ಭವನ್ನು ಸೃಜನಾತ್ಮಕವಾಗಿ ಬದಲಾಯಿಸಿಕೊಂಡು ಧನ್ಯತೆಯ ಭಾವವನ್ನು ಅನುಭವಿಸುತ್ತಿದ್ದಾರೆ ಮುಳ್ಳೇರಿಯಾ ಮಂಡಲದ ಶಿಷ್ಯರು.

ಭತ್ತದ ಭಕ್ತಿ – ಬತ್ತದ ಭಕ್ತಿ
ಶ್ರೀರಾಮಚಂದ್ರಾಪುರಮಠದಲ್ಲಿ ನಿತ್ಯ ರಾಮ ನೈವೇದ್ಯಕ್ಕಾಗಿ ಕುಂಬಳೆ ಸೀಮೆಯ ಏತಡ್ಕ, ಬಡಗಮೂಲೆ, ಕಿನ್ನಿಂಗಾರು, ಪೆರ್ಣೆ,‌ಕನ್ನೆಪ್ಪಾಡಿ, ಕಾನತ್ತಿಲ, ಮುಂತಾದ ಪ್ರದೇಶಗಳಲ್ಲಿ ಭಕ್ತರು ಸ್ವಯಂ ಪ್ರೇರಣೆಯಿಂದ ಭತ್ತದ ಕೃಷಿ ಆರಂಭಿಸಿದ್ದಾರೆ. ಗದ್ದೆ ಉಳುವುದು, ಹಲಗೆ ಸಾರಿಸಿ ಬಿತ್ತನೆಗೆ ಸಿದ್ಧ ಗೊಳಿಸುವುದು, ನೇಜಿ ನಾಟಿ ಮಾಡುವುದೇ ಮುಂತಾದ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಶ್ರೀರಾಮನ ಸೇವೆಯನ್ನು ಸಮ್ಮುಖದಲ್ಲಿ ನೆರವೇರಿಸಲು ಅಸಾಧ್ಯವಾದ ಈ ಸಂದರ್ಭದಲ್ಲಿ, ಚಾತುರ್ಮಾಸ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಸನ್ನಿವೇಶದಲ್ಲಿ ಇದೊಂದು ಧನ್ಯತೆಯ ಭಾವವನ್ನು ನೀಡುತ್ತಿದೆ, ಶ್ರೀರಾಮನ ಸೇವೆಯ ಮೂಲಕ ಸಂಘಟನೆಯನ್ನು ಬಲಪಡಿಸುವ ಕಾರ್ಯವಾಗುತ್ತಿದೆ ಎಂದು ಮಂಡಲದ ಶಿಷ್ಯರನೇಕರು ಅಭಿಪ್ರಾಯ ಪಟ್ಟರೆ, ಕೃಷಿ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ. ದೊಡ್ಡ ವಿದ್ಯಾರ್ಥಿಗಳು ಗೊಬ್ಬರ ಸಾಗಿಸುವ ಹಾಗೂ ಇತರ ಜವಾಬ್ದಾರಿಯ ಕೆಲಸ ನಿರ್ವಹಿಸಿದರೆ, ಕಿರಿಯ ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಡುವ ಕೆಲಸವನ್ನು ಮುದದಿಂದ ಮಾಡುತ್ತಿದ್ದಾರೆ.

‘ಭತ್ತದ ಭಕ್ತಿ – ಶ್ರೀರಾಮ ನೈವೇದ್ಯ’ ಎಂಬ ಸಮರ್ಪಣಾ ಭಾವದೊಂದಿಗೆ ಈ ಕಾರ್ಯದಲ್ಲಿ ಸುಮಾರು 80 ಕ್ಕೂ ಹೆಚ್ಚು ಜನರು ತೊಡಗಿಸಿಕೊಂಡಿರುವುದು ವಿಶೇಷ.

ಭಾಗವಹಿಸಿದ ಶ್ರೀ ರಾಮ ಕಿಂಕರರು

ಜಿಷ್ಣು ಸರಳಿ
ಧರಣಿ ಸರಳಿ
ದಶಮಿ‌ ಸರಳಿ
ಅಭಿನವ ಶಾಮ ಕುಳಮರ್ವ
ಶಂಕರ ತೇಜಸ್ವಿ
ವಿಶೇಷ್ ಚೇರ್ಕೋಡ್ಲು
ಶಶಾಂಕ ಶಂಕರ
ಅನಘ ಶರ್ಮ
ಕಿಶನ್ ಭಾರದ್ವಾಜ್
ಸುಧೀರ್ ಕೃಷ್ಣ ಕನಕಪ್ಪಾಡಿ
ರೂಪಾ ಕನಕಪ್ಪಾಡಿ
ಸಮನ್ವಿ ಕೆರೆಮೂಲೆ
ಸಹನಾ ಕುತ್ತಗುಡ್ಡೆ

ಪ್ರಸನ್ನ ದುರ್ಗಾ ಕನಕಪ್ಪಾಡಿ
ಗೋಪಾಲಕೃಷ್ಣ ಶಿಮಲಡ್ಕ
ಕೇಶವಪ್ರಸಾದ ಎಡೆಕ್ಕಾನ
ಡಾ. ವೈ ವಿ ಕೃಷ್ಣಮೂರ್ತಿ
ಅಜಯ ಶಂಕರ ಬಡಗಮೂಲೆ
ಈಶ್ವರ ಭಟ್ ಬಡಗಮೂಲೆ
ಕನಕವಲ್ಲಿ ಬಡಗಮೂಲೆ
ಸುಬ್ರಹ್ಮಣ್ಯ ಕೆರೆಮೂಲೆ
ಈಶ್ವರಿ ಬೇರ್ಕಡವು
ಶ್ಯಾಮ ಭಟ್ ಬೇರ್ಕಡವು
ದಿವ್ಯ ಕೆರೆಮೂಲೆ
ಸ್ಮಿತಾ ಸರಳಿ
ರವೀಂದ್ರನಾಥ ಮಿಂಚಿನಡ್ಕ
ರಾಧಾಕೃಷ್ಣ ಸರಳಿ
ಸತ್ಯನಾರಾಯಣ ಶರ್ಮ ಕುತ್ತಗುಡ್ಡೆ
ಕಿರಣಾ ಮೂರ್ತಿ
ಮಹೇಶ ಕೃಷ್ಣ ತೇಜಸ್ವಿ ಕುಳಮರ್ವ
ಸುನಿತಾ ಕುಳಮರ್ವ.

Author Details


Srimukha

Leave a Reply

Your email address will not be published. Required fields are marked *