ಸಾಗರ: ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ 3 ಸಾಗರ ಬಾಪಟ್ ಸಭಾಭವನದಲ್ಲಿ ಭಾನುವಾರ ನಡೆಯಿತು.
ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿಯಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಾಗರ ರಾಘವೇಶ್ವರ ಭವನ ಸಮಿತಿ ಅಧ್ಯಕ್ಷ ಹರನಾಥ ರಾವ್ ಮತ್ತಿಕೊಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಶ್ರೀಮಠ ಅಂದಿನಿಂದ ಇಂದಿನವರೆಗೆ ವಿಷಯದ ಕುರಿತು ವಿದ್ವಾನ್ ಗಜಾನನ ರೇವಣಕಟ್ಟ ಮಾತಾಡಿದರು. ಶಾಸನತಂತ್ರ ಅಧ್ಯಕ್ಷ ಮೋಹನ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು.
ಶ್ರೀಮಠದ ಆಡಳಿತ ವ್ಯವಸ್ಥೆಯಾದ ಶಾಸನತಂತ್ರದ ಮಾಹಿತಿಯನ್ನು ಸೇವಾಖಂಡ ಮಾರ್ಗದರ್ಶಕರಾದ ಕೃಷ್ಣ ಪ್ರಸಾದ ಎಡಪ್ಪಾಡಿ ನೀಡಿದರು. ಸೇವಾಖಂಡದ ಸ್ವರೂಪದ ಹಾಗು ವ್ಯಾಪ್ತಿಯ ಸಂಪೂರ್ಣ ಮಾಹಿತಿಯನ್ನು ಸಂಯೋಜಕ ಸುರೇಶ್ ಸೂರ್ಡೇಲು ನೀಡಿದರು. ರಸಪ್ರಶ್ನೆ ಕಾರ್ಯಕ್ರಮ ಖಂಡದ ಸಂಯೋಜಕ ಸುಚೇತ ಚಿಪ್ಳಿ ನಡೆಸಿದರು.
ಸಮಾರೋಪ ಸಮಾರಂಭ:
ವಿಶೇಷ ಅಭ್ಯಾಗತರಾದ ಸಮಾಜ ಸೇವಕ ಪ್ರಸನ್ನ ಕೆರೆಕೈ ಭಾಗವಹಿಸಿ ಸೇವಾಬಿಂದುಗಳಿಗೆ ಉಪಸ್ಥಿತಿ ಪತ್ರ ನೀಡಿದರು. 50ಕ್ಕೂ ಅಧಿಕ ಸೇವಾ ಬಿಂದುಗಳು ಭಾಗವಹಿಸಿದ್ದರು. ಸಂಯೋಜಕ ಕಿರಣ್ ಭೀಮನಕೋಣೆ ಕಾರ್ಯಕ್ರಮ ನಿರೂಪಿಸಿದರು.