ಅವನೊಬ್ಬ ಮೀನುಗಾರ. ಅವನು ಪ್ರತಿದಿನ ಸಮುದ್ರಕ್ಕೆ ಹೋಗಿ ಒಂದಿಷ್ಟು ಮೀನು ಹಿಡಿದು ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ.
ಹೀಗಿರುವಾಗ ಎಂದಿನಂತೆ ಒಂದು ದಿನ ತನ್ನ ಕೆಲಸವನ್ನು ಮುಗಿಸಿ ಒಂದು ಮರದ ಬುಡದಲ್ಲಿ ಕುಳಿತು ಸಂತೋಷದಿಂದ ತನ್ನಷ್ಟಕ್ಕೇ ಹಾಡು ಹೇಳಿಕೊಳ್ಳುತ್ತಿದ್ದ.
ಇದನ್ನು ಅನೇಕ ದಿನಗಳಿಂದ ಗಮನಿಸಿದ ಒಬ್ಬ ಶ್ರೀಮಂತ ವರ್ತಕ ಒಂದು ದಿನ ಮೀನುಗಾರನ ಹತ್ತಿರ ಬಂದು-
“ಯಾಕೆ ಸುಮ್ಮನೇ ಸಮಯ ವ್ಯರ್ಥ ಮಾಡುತ್ತಿರುವೆ?” ಎಂದು ಕೇಳುತ್ತಾನೆ.
ಆಗ ಮೀನುಗಾರ- “ಏನು ಮಾಡಬೇಕು?” ಎಂದು ಕೇಳುತ್ತಾನೆ.
ಆಗ ವರ್ತಕ- “ಇನ್ನಷ್ಟು ಮೀನು ಸಂಗ್ರಹಿಸಿ ಹಣ ಸಂಪಾದಿಸಬಹುದಲ್ಲವೇ?” ಎನ್ನುತ್ತಾನೆ.
ಆಗ ಮೀನುಗಾರ- “ಹಣ ಸಂಪಾದಿಸಿ ಏನು ಮಾಡುವುದು?”
ಅವನು ಹೀಗೆದಾಗ ವರ್ತಕ-
“ಆ ಹಣದಿಂದ ಇನ್ನಷ್ಟು ಬೋಟುಗಳನ್ನು ಖರೀದಿಸಿ ಶ್ರೀಮಂತನೇ ಆಗಿ ನೆಮ್ಮದಿಯಿಂದ ಜೀವನ ಸಾಗಿಸಬಹುದಲ್ಲವೇ?” ಎಂದು ಕೇಳುತ್ತಾನೆ.
ಅದಕ್ಕೆ ಮೀನುಗಾರ-
“ಅಷ್ಟೆಲ್ಲ ಕಷ್ಟಪಟ್ಟು ಅನಂತರ ಸಿಗುವ ನೆಮ್ಮದಿ ನನಗೀಗಲೇ ದೊರಕಿದೆ; ಇದಕ್ಕಿಂತ ಸುಖ ಯಾವುದಿದೆ?” ಎನ್ನುತ್ತಾನೆ.
ಹೌದು, Rupeesನಿಂದ Peace ಸಿಗುವುದಿಲ್ಲ. ನಮಗೆ ದೊರಕಿದವುಗಳಲ್ಲಿಯೇ ತೃಪ್ತಿ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಹಣದ ಶ್ರೀಮಂತಿಕೆಗಿಂತ ನೆಮ್ಮದಿ ಜೀವನ ಬಹಳ ದೊಡ್ಡದು.