ಮಾತು~ಮುತ್ತು : ಒಳಗಿನ ಸೌಂದರ್ಯವೇ ನಿಜವಾದ ಸೌಂದರ್ಯ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಶ್ರೀಸಂಸ್ಥಾನ

 

ಒಮ್ಮೆ ಜನಕ ಮಹಾರಾಜನಿಗೆ ಒಂದು ಯೋಚನೆ ಬಂದಿತು. ಅದೆಂದರೆ ಯಾರಾದರೂ ಕುದುರೆ ಏರುವಷ್ಟು ಅಲ್ಪ ಸಮಯದಲ್ಲಿ ದೇವರ ಸಾಕ್ಷಾತ್ಕಾರವನ್ನು, ಆತ್ಮಜ್ಞಾನವನ್ನೂ ಹೇಳಬಲ್ಲರೇ? ಎಂದು.

 

ಒಂದು ದಿನ ಅವನು ಒಂದು ಸಭೆಯನ್ನು ಕರೆಯುತ್ತಾನೆ. ಅಲ್ಲಿ ಜ್ಞಾನಿಗಳು, ಸಂತರು, ವಿದ್ವಾಂಸರುಗಳು, ಎಲ್ಲರೂ ಸೇರಿರುತ್ತಾರೆ. ವೇದಿಕೆ ಖಾಲಿ ಇರುತ್ತದೆ.  ಜನಕ ಹೇಳುತ್ತಾನೆ- “ಯಾರು ಕುದುರೆ ಏರುವಷ್ಟು ಅಲ್ಪ ಸಮಯದಲ್ಲಿ ಆತ್ಮಜ್ಞಾನವನ್ನು ಹೇಳಬಲ್ಲರಿ; ಅವರು ವೇದಿಕೆ ಮೇಲೆ ಬರಲಿ.”
ಯಾರೂ ಮುಂದೆ ಬರುವುದಿಲ್ಲ. ಅಷ್ಟು ಹೊತ್ತಿಗೆ ಆ ಸಭೆಗೆ ಅಷ್ಟಾವಕ್ರ ಬರುತ್ತಾನೆ. ಅಷ್ಟಾವಕ್ರ ಎಂದರೆ ದೇಹದ ಎಂಟು ಕಡೆಗಳಲ್ಲಿ ವಕ್ರವಾಗಿ ಇರುವವನು ಎಂದರ್ಥ. ಅವನನ್ನು ನೋಡಿ ಸಭೆಯಲ್ಲಿ ಇದ್ದವರೆಲ್ಲ ಅಪಹಾಸ್ಯ ಮಾಡುತ್ತಾ ಗೊಳ್ಳನೆ ನಗುತ್ತಾರೆ. ಅವರ ನಗು ನಿಂತ ಮೇಲೆ ಅಷ್ಟಾವಕ್ರ ಅವರನ್ನು ನೋಡಿ ನಗಲು ಪ್ರಾರಂಭಿಸುತ್ತಾನೆ.

 

ಜನಕ ಕೇಳುತ್ತಾನೆ-
“ಯಾಕೆ ನಗುತ್ತಿದ್ದೀಯಾ? ”

 

ಆಗ ಅಷ್ಟಾವಕ್ರ-
“ಈ ಸಭೆಯಲ್ಲಿ ಜ್ಞಾನಿಗಳು ಇದ್ದಾರೆ ಎಂದುಕೊಂಡಿದ್ದೆ; ಆದರೆ ಇಲ್ಲಿ ಇರುವವರೆಲ್ಲ ಚರ್ಮದ ವ್ಯಾಪಾರಿಗಳು ಮತ್ತು ವೇಶ್ಯಾವಾಟಿಕೆ ನಡೆಸುವವರು” ಎನ್ನುತ್ತಾನೆ.

 

ಆಗ ರಾಜ- “ಅದು ಹೇಗೆ?”
ಎಂದು ಕೇಳಲು, ಅಷ್ಟಾವಕ್ರ-
“ಚರ್ಮದ ವ್ಯಾಪಾರಿಗಳಿಗೆ ಚರ್ಮ ಚೆನ್ನಾಗಿದ್ದರಾಯಿತು; ಅದರ ಒಳಗೇನಿದೆ ಎಂಬುದು ಮುಖ್ಯವಲ್ಲ. ಅದೇ ರೀತಿ ವೇಶ್ಯಾವಾಟಿಕೆ ನಡೆಸುವವರಿಗೆ ರೂಪ ಮಾತ್ರ ಮುಖ್ಯವಾಗುತ್ತದೆ. ಚರ್ಮ ಅಥವಾ ರೂಪಕ್ಕಿಂತ ಅವನೊಳಗಿನ ಅಂತಸ್ಸತ್ತ್ವವೇನು? ಅದೇ ಮುಖ್ಯ” ಎನ್ನುತ್ತಾನೆ.

 

ರಾಜ ಅವನನ್ನು ವೇದಿಕೆಯ ಮೇಲೆ ಕೂರಿಸುತ್ತಾನೆ.

 

ಮನುಷ್ಯನೊಳಗಿನ ರೂಪವೇ ನಿಜವಾದ ರೂಪ.

Leave a Reply

Your email address will not be published. Required fields are marked *