ದಿವ್ಯತೆ – ಭವ್ಯತೆ ಇದ್ದಲ್ಲಿ ಶುಭವಿದೆ – ಶ್ರೀಸಂಸ್ಥಾನ

ಶಿಕ್ಷಣ ಶ್ರೀಸಂಸ್ಥಾನ

ಗಿರಿನಗರ: ದಿವ್ಯತೆ ಹಾಗೂ ಭವ್ಯತೆ ಇದ್ದಲ್ಲಿ ಶುಭವಿರುತ್ತದೆ. ಭಾರತವೆಂಬ ಭವನದಲ್ಲಿ ವಿದ್ಯೆಗಳು ಹಾಗೂ ಕಲೆಗಳು ಬೆಳಕನ್ನು ನೀಡಿದೆ. ಭಿನ್ನ ಬೇದವಿಲ್ಲದೆ ಎಲ್ಲರಿಗೆ ಹಿತವನ್ನುಂಟು ಮಾಡುವವರು ಶ್ರೇಷ್ಠರು. ಲಕ್ಷಕ್ಕೆ ಮಿಕ್ಕ ಮಕ್ಕಳು ತಮ್ಮೊಳಗೆ ವಿದ್ಯಾ ದೀಪವನ್ನು ಬೆಳಗಿದಾಗ ಭಾರತ ಬೆಳಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೊದಲ ದಿನ ಆಶೀರ್ವಚನ ನೀಡಿದರು.

ಮಾಡುವ ಕಾರ್ಯದಲ್ಲಿ ತೀವ್ರತೆ ಇದ್ದಾಗ ಫಲ ಪ್ರಾಪ್ತಿಯಾಗುತ್ತದೆ. ಮಕ್ಕಳು ತಾಯಿಯ ಸಂತೋಷ ಹೆಚ್ಚಿಸುವ ಕಾರ್ಯವನ್ನು ಸದಾ ಮಾಡಬೇಕು. ಪ್ರಶ್ನೆ ಹಾಗೂ ಜಿಜ್ಞಾಸೆಗಳಿಂದ ಹುಟ್ಟಿರುವುದು ರಾಮಾಯಣ. ವಿಶ್ವ ವಿದ್ಯಾಪೀಠದ ಸೃಷ್ಠಿಯ ಉದ್ದೇಶದಿಂದ ರಾಮಾಯಣದ ಗಂಗೆಯಲ್ಲಿ ಮಿಂದೇಳುವ ಅವಕಾಶ ಎಲ್ಲರಿಗೆ ಲಭಿಸಿದೆ. ವಿಶ್ವವಿದ್ಯಾ ಪೀಠ ಎಂಬುದು ಎಲ್ಲಾ ವಿಚಾರದ ಬೆಳಕು ಎಂದು ತಿಳಿಸಿದರು.

ನಾರದರು ರಾಮಾಯಣವನ್ನು ಸಂಕ್ಷಿಪ್ತವಾಗಿ ವಾಲ್ಮೀಕಿಗಳಿಗೆ ವಿವರಿಸುವ ಕಥೆಯನ್ನು ಪ್ರಸ್ತುತ ಪಡಿಸಲಾಯಿತು. ಪ್ರವಚನ ಪ್ರಾರಂಭದ ಮೊದಲು ಮಕ್ಕಳಿಂದ ೧೦೮ಕ್ಕೂ ಅಧಿಕ ದೀಪಗಳ ಪ್ರಜ್ವಲ ಮಾಡಲಾಯಿತು.

ಧಾರಾರಾಮಾಯಣ ಕ್ರೀಯಾ ಸಮಿತಿ ಅಧ್ಯಕ್ಷೆ ಡಾ. ಶಾರದಾ ಜಯಗೋವಿಂದ ಹಾಗೂ ಜಯಗೋವಿಂದ ದಂಪತಿಗಳು ಫಲ ಸಮರ್ಪಣೆ ಮಾಡಿದರು. ಡಾ. ಗಜಾನನ ಶರ್ಮ ದಂಪತಿಗಳು ವಿಷ್ಣು ಗುಪ್ತ ವಿಶ್ವ ವಿದ್ಯಾಲಯಕ್ಕೆ ದೇಣಿಗೆಯನ್ನು ನೀಡಿದರು. ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

 

Author Details


Srimukha

Leave a Reply

Your email address will not be published. Required fields are marked *