ಮುಳ್ಳೇರಿಯ: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವ ಹವ್ಯಕ ಮಹಾಮಂಡಲದ ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿಯ ಸಹಕಾರದೊಂದಿಗೆ 15.02.2019, ಶುಕ್ರವಾರದಂದು ಪರೀಕ್ಷೆ-ನಿರೀಕ್ಷೆ ಕಾರ್ಯಗಾರ ನಡೆಯಿತು. ಜಾಲ್ಸೂರಿನ
ಈಶ್ವರಮಂಗಲ ವಲಯದ ವಿನೋಬನಗರ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ’ ಎಂಬ ವಿಷಯದ ಕುರಿತು ತರಬೇತಿ ನೀಡಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಶ್ರೀ ಯು. ಎಸ್. ವಿಶ್ವೇಶ್ವರ ಭಟ್ , ಸಕಾರಾತ್ಮಕ ಚಿಂತನೆ, ಸಕಾರಾತ್ಮಕ ಪ್ರಶ್ನೆಪತ್ರಿಕೆಯ ಅಧ್ಯಯನ, ಸಕಾರಾತ್ಮಕ ಉತ್ತರ ಬರೆಯುವಿಕೆಗಳಿಂದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಯಶಸ್ಸು ಪಡೆಯಬಹುದು ಎಂಬುದಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನಿ ಈಶ್ವರಮಂಗಲ ವಲಯವು ಇಲ್ಲಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷೆ-ನಿರೀಕ್ಷೆ ಸರಣಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶ್ರೀ ಎನ್. ಗೋಪಾಲ ರಾವ್ ಸ್ವಾಗತಿಸಿ ವಂದಿಸಿದರು. ಈಶ್ವರಮಂಗಲ ವಲಯದ ಕಾರ್ಯದರ್ಶಿ ಶ್ರೀ ಗೋವಿಂದ ರಾಜ್ ದೇಲಂಪಾಡಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಗುರಿಕ್ಕಾರ ಶ್ರೀ ನಾರಾಯಣ ಭಟ್ ಗಬ್ಬಲಡ್ಕ ವಿದ್ಯಾರ್ಥಿವಾಹಿನಿ ಆಯೋಜಿಸಿದ ತರಬೇತಿಯನ್ನು ಸಂಯೋಜಿಸಿದ್ದರು.