ಗುರುಕುಲ ವಿದ್ಯಾರ್ಥಿಗಳಿಂದ ಯೋಧರಿಗೆ ಶ್ರದ್ಧಾಂಜಲಿ

ಶಿಕ್ಷಣ

ಹೊಸನಗರ: ಹೊಸನಗರದ ರಾಮಚಂದ್ರಾಪುರ ಮಠದ ಶ್ರೀಭಾರತೀ ಗುರುಕುಲಮ್ ನಲ್ಲಿ 16.02.2019ರ ಶನಿವಾರದಂದು ವಿದ್ಯಾರ್ಥಿಗಳು ದೀಪ ಬೆಳಗಿ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.

 

14.02.2019ರಂದು ನಡೆದ ಹಿಂಸೆ ರಾಕ್ಷಸೀ ಕೃತ್ಯವೆಂದು ಶ್ರೀ ಸತೀಶ ಆರ್ಯ
ಬಣ್ಣಿಸಿದರು. ಶ್ರೀ ಸದಾನಂದ ಆರ್ಯ ಆ ಯೋಧರ ಕುಟುಂಬಗಳ ಪರಿಸ್ಥಿತಿಗಳನ್ನು ಮನವರಿಕೆ ಮಾಡಿಕೊಟ್ಟರು.

 

ಪ್ರಧಾನಾಚಾರ್ಯ ಶ್ರೀ ಆ. ವಿ. ಗಜಾನನ ಭಟ್ಟ ಮಾತನಾಡಿ, ಭಾರತವನ್ನು ದೇಹವಾಗಿ ಭಾವಿಸಿದರೆ ಸೇನೆ ಬಾಹುವಿದ್ದಂತೆ. ದೇಹದ ಯಾವ ಅಂಗಕ್ಕೆ ಕ್ಷತಿಯಾದರೂ ಇಡೀ ದೇಹ ಸ್ಪಂದಿಸುತ್ತದೆ. ಅಂತೆಯೇ ಭಾರತೀಯರಾದ ನಾವೆಲ್ಲರೂ ಯೋಧರಿಗೆ ಸ್ಪಂದಿಸಬೇಕಿದೆ. ದೀಪದಂತಿದ್ದ ಒಬ್ಬೊಬ್ಬರೂ ಭಗವಂತನೆಂಬ ಮಹಾ ಬೆಳಕಿನಲ್ಲಿ ಲೀನವಾಗಲೆಂದು ಪ್ರಾರ್ಥಿಸೋಣ ಎಂದರು. ವಿದ್ಯಾರ್ಥಿ ಕು. ಶಿವರಾಮ ಕಾರ್ಯಕ್ರಮವನ್ನು ನಿರೂಪಿಸಿದರು.

 

Author Details


Srimukha

Leave a Reply

Your email address will not be published. Required fields are marked *