ಬದಿಯಡ್ಕ: ರಾಜ್ಯ ಜನಮೈತ್ರಿ ಪೊಲೀಸ್ ಹಾಗೂ ಕೋಝಿಕ್ಕೋಡು ಸ್ವಾತಂನಂ ಟ್ರಸ್ಟ್ನಾ ನೇತೃತ್ವದಲ್ಲಿ ಮಾದಕ ವ್ಯಸನದ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವೂ ಇತ್ತೀಚಿಗೆ ಬದಿಯಡ್ಕ ಶ್ರೀಭಾರತಿ ವಿದ್ಯಾಪೀಠದಲ್ಲಿ ಅಲ್ಲಿಯ ಮಕ್ಕಳಿಗಾಗಿ ನಡೆಯಿತು. ಮಾದಕ ವ್ಯಸನದ ಬಗ್ಗೆ ಎಚ್ಚರಿಕೆ ಮೂಡಿಸುವ ಅಂಗವಾಗಿ ನಡೆಯ ಈ ಸಂದೇಶ ಯಾತ್ರೆಯಲ್ಲಿ ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯಾತ್ರೆಯ ಸಂಚಾಲಕ ಶ್ರೀ ಮೋಹನ್ ವಿದ್ಯಾರ್ಥಿಗಳು ಶಾಲೆಯ ಕ್ಯಾಂಪಸ್ ಹಾಗೂ ಇತರೆಡೆಗಳಲ್ಲಿ ಮಾದಕ ಪದಾರ್ಥಗಳನ್ನು ರಾಜಾರೋಷವಾಗಿ ಸೇವಿಸುತ್ತಿರುವುದು ಕಂಡುಬರುತ್ತಿದೆ. ಪ್ರಾಥಮಿಕ ಹಂತದಲ್ಲಿ ಪಾನ್ ಪರಾಗ್, ಮಧು, ಕಿಂಗ್ ಮೊದಲಾದ ಹೆಸರುಗಳುಳ್ಳ ವಿಷ ಪದಾರ್ಥಗಳನ್ನು ಸೇವಿಸುತ್ತಾ ಕೊನೆಗೆ ಗಾಂಜಾ, ಅಫೀಮು ದಾಸರಾಗುತ್ತಾರೆ. 24 ಗಂಟೆಗಳಲ್ಲಿ ಪಾನ್ ಪರಾಗ್ ದ್ರವದಲ್ಲಿ ಮುಳುಗಿಸಿಟ್ಟ ಸ್ಟೈನ್ಲೆ ಸ್ ಸ್ಟೀಲ್ನಗ ಬ್ಲೇಡ್ ಕರಗಿ ಹೋಗುವುದನ್ನು ನಾವು ಪ್ರಯೋಗದ ಮೂಲಕ ಮಾಡಿನೋಡಬಹುದು. ಹಾಗಾದರೆ ಇಂತಹ ಪದಾರ್ಥಗಳನ್ನು ಸೇವಿಸಿದರೆ ಏನಾಗಬಹುದೆಂದು ಆಲೋಚಿಸಿ, ತಾತ್ಕಾಲಿಕ ಸಂತೋಷಕ್ಕಾಗಿ ಇಂಥ ವಿಷವರ್ತುಲದೊಳಗೆ ಬಿದ್ದು ಬದುಕು ಕಳೆದುಕೊಂಡವರು ಕಣ್ಣ ಮುಂದೆ ಇದ್ದಾರೆ ಎಂದರು. ಅಲ್ಲದೆ ಕೇರಳ ಯಾತ್ರೆಯ ವೇಳೆ ತಾವು ಕಂಡುಕೊಂಡ ಘೋರ ದೃಶ್ಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಈ ಕಾರ್ಯಕ್ರಮದ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮಾ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. 9 ನೆಯ ತರಗತಿಯ ವಿದ್ಯಾರ್ಥಿ ಮಂಜೇಶ್ ಸ್ವಾಗತಿಸಿದರು. ಶ್ರೀವತ್ಸ ನೂಜಿ ವಂದಿಸಿದರು.