ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ ; ಮುಳ್ಳೇರಿಯಾ ಮಂಡಲ ಚಿಂತನಸಭೆ

ಸುದ್ದಿ

ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸದೀಕ್ಷೆಯ 26ನೆಯ ವರ್ಷದ ಆಚರಣೆಯ ಅಂಗವಾಗಿ ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ‌ಗಳು ಉಪ್ಪಿನಂಗಡಿ ಮಂಡಲದ ಮಾಣಿಯ ರಾಮಚಂದ್ರಾಪುರಮಠ ಪೆರಾಜೆಯಲ್ಲಿ 9 ಏಪ್ರಿಲ್ 2019 ಮತ್ತು 11 ಏಪ್ರಿಲ್ 2019 ಎರಡು ದಿನಗಳಲ್ಲಿ ಸಂಪನ್ನಗೊಳ್ಳಲಿವೆ.
ಈ ಬಗ್ಗೆ ಮುಳ್ಳೇರಿಯಾ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ 10.03.2019 ರಂದು ಜರಗಿತು.
ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಇವರು ಸಮಾರಂಭದ ವಿಶೇಷತೆ ಮತ್ತು ಮಹತ್ವದ ಬಗ್ಗೆ ವಿವರಣೆಗಳನ್ನಿತ್ತರು.
ಜೀವನದಾನ ಮತ್ತು ಯೋಗ ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಹಾರಕರೆ ನಾರಾಯಣ ಭಟ್ಟ ಇವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಸ್ವರೂಪದ ಸಮಗ್ರ ಮಾಹಿತಿಗಳನ್ನಿತ್ತು ಸಮಾಜದ ಪ್ರತೀ ಮನೆ ಮನೆಗಳಲ್ಲಿ ಶ್ರೀ ಪಾದುಕಾ ಪ್ರಸಾದ ತಲಪುವಂತಾಗಿ ಸಮಾಜ ಸಮೃದ್ಧಿಯಾಗಲು ಶ್ರೀ ಸಂಸ್ಥಾನದವರ ಸಂಕಲ್ಪವನ್ನು ಸಾಕ್ಷಾತ್ಕಾರ ಮಾಡುವಲ್ಲಿ ಪ್ರತಿಯೊಬ್ಬನ ಸಹಕಾರ ಅನಿವಾರ್ಯ ಎಂಬುದಾಗಿ ನುಡಿದರು.

ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ಟ ಮೊಗ್ರ ಇವರು ಸಮಾರಂಭದ ಯಶಸ್ವಿ ಮತ್ತು ಮಹಾಪಾದುಕಾಪೂಜೆಯ ಪಾವಿತ್ರ್ಯ ಮತ್ತು ವಿಶೇಷತೆ ಬಗ್ಗೆ ಮಾತುಗಳನ್ನಾಡಿದರು. ಸಭಾಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್ಟ ಇವರು ಸಭಾಧ್ಯಕ್ಷತೆಯ ಮಾತುಗಳನ್ನಾಡಿದರು.
ಜೀವನದಾನ : ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ದೀಕ್ಷೆಯ 26ನೆಯ ವರ್ಷಾಚರಣೆಯನ್ನು ಪ್ರತಿವರ್ಷದಂತೆ ಸಂಕಷ್ಟಕ್ಕೆ ಒಳಗಾದ ಹವ್ಯಕ ಕುಟುಂಬವನ್ನು ಶ್ರೀ ಮಠದ ಜೀವನದಾನ ಟ್ರಸ್ಟ್ ಮೂಲಕ ದತ್ತು ಸ್ವೀಕೃಸುವ ವಿಧಾನದಲ್ಲಿ ಜೀವನದಾನವಾಗಿ 09.04.2019 ರಂದು ಆಚರಿಸಲಾಗುತ್ತದೆ .
ಇಪ್ಪತ್ತಾರನೆಯ ಯೋಗಪಟ್ಟಾಭಿಷೇಕ ಮಹೋತ್ಸವವನ್ನು ಸಹಸ್ರ-ಸಹಸ್ರ ಶಿಷ್ಯ-ಭಕ್ತರ ಭಕ್ತಿಯ ಸಮರ್ಪಣೆಯಾಗಿ ” ಮಹಾಪಾದುಕಾಪೂಜೆಯನ್ನು 11.04.2019 ರಂದು ಆಚರಿಸಲಾಗುತ್ತದೆ.
ಮಂಡಲ ಪದಾಧಿಕಾರಿಗಳಾದ ಮಹೇಶ ಸರಳಿ , ಸತ್ಯಶಂಕರ ಭಟ್ಟ , ಕೇಶವಪ್ರಸಾದ ಎಡಕ್ಕಾನ, ವೈ ಕೆ ಗೋವಿಂದ ಭಟ್ಟ ಕುಸುಮಾ ಪೆರ್ಮುಖ, ಗೀತಾಲಕ್ಷ್ಮಿ ಮುಳ್ಳೇರಿಯಾ ಮತ್ತು ಜಯಪ್ರಕಾಶ ಪಜಿಲ ಇವರು ಉಪಸ್ಥಿತರಿದ್ದರು.

 

ಸಾಂಘಿಕ ರಾಮಜಪ ಶಾಂತಿ ಮಂತ್ರ ಗೊಸ್ತುತಿ ಶಂಖನಾದ ಧ್ವಜಾವರೋಹಣವಾಗಿ ಸಭೆಯು ಮುಕ್ತಾಯವಾಯಿತು.
ಪ್ರಕಟಣೆ ಮತ್ತು ರಶೀದಿ ಪುಸ್ತಕಗಳನ್ನು ಮಂಡಲ ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಗಬ್ಬಲಡ್ಕ ಇವರು ವಲಯ ಪದಾಧಿಕಾರಿಗಳಿಗೆ ವಿತರಣೆ ಮಾಡಿದರು.

Author Details


Srimukha

Leave a Reply

Your email address will not be published. Required fields are marked *