ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಹಿಳೋತ್ಸವದ ದಿನಾಚರಣೆಯು ನಡೆಯಿತು. ಅಭ್ಯಾಗತರಾಗಿ ಬಂದ ಶ್ರೀಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ಟ ಅವರು ಕ್ರಾಯಕ್ರಮವನ್ನು ಉದ್ಘಾಟಿಸಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕಿರು ಪರಿಚಯವನ್ನು ನೀಡಿದರು.
ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಈಶ್ವರ ಪ್ರಸಾದ ಆಲಂಗಾರು ಅವರು ಮಾತನಾಡಿ, ಕಾಲೇಜಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಕೊಡಲಾಗಿದೆ ಎಂದು ತಿಳಿಸಿದರು. ಪಿಯುಸಿ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಭಟ್ಟ ಅವರು ಈ ಸಾಂಕೇತಿಕ ಮಹಿಳೋತ್ಸವ ಆಚರಿಸುವುದು ಸ್ವಾಗತಾರ್ಹ ಎಂದು ಹೇಳಿದರು. ಉಪನ್ಯಾಸಕಿ ಕು.ಕಾವ್ಯಶ್ರೀ ಸಾಂದರ್ಭಿಕ ಶುಭಶಯವನ್ನು ಕೋರಿದರು. ಅನಂತರ ಅಂತಿಮ ವರ್ಷದ ವಿದ್ಯಾರ್ಥಿನಿಯರು ನಡೆಸಿದ ಮನೋರಂಜನ ಚಟುವಟಿಕೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಉಪನ್ಯಾಸಕಿ ಕು.ಕುಸುಮಾವತಿ ಸ್ವಾತಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಕು.ಸುಶ್ಮಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಸ್ವಾತಿ ವಂದಿಸಿದರು.