ಪೀಯೂಸೀ ಪ್ರತಿಭೆ ಕೃಷ್ಣ ಶರ್ಮರಿಗೆ ಪೆರಡಾಲ ವಲಯದ ಪುರಸ್ಕಾರ

ಶಿಕ್ಷಣ

ಪೆರಡಾಲ, 17.04.2019
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀ ಕೃಷ್ಣ ಶರ್ಮ ಇವರನ್ನು ಮಾತಾಪಿತೃ ಕಡಪ್ಪು ಶ್ರೀ ಸುಬ್ರಹ್ಮಣ್ಯ ಭಟ್ಟ ಶಾರದಾ ದಂಪತಿ ಮತ್ತು ಮನೆಯವರ ಉಪಸ್ಥಿತಿಯಲ್ಲಿ ಪೆರಡಾಲ ಹವ್ಯಕ ವಲಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

 

ಕಡಪ್ಪು ನಿವಾಸದಲ್ಲಿ ಜರಗಿದ ಸಭೆಯಲ್ಲಿ ಪೆರಡಾಲ ವಲಯ ಅಧ್ಯಕ್ಷರಾದ ಶ್ರೀಹರಿಪ್ರಸಾದ್ ಪೆರ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ ಅಭಿನಂದನಾ ಮಾತುಗಳನ್ನಾಡಿ ‘ ಶ್ರೀ ಕೃಷ್ಣ ಶರ್ಮಾ ಅವರ ವಿಶೇಷ ಸಾಧನೆ ಮನೆಯವರಿಗೆ ಸತ್ಕೀರ್ತಿಯನ್ನು ತಂದಂತೆ ವಿದ್ಯಾಭ್ಯಾಸಮಾಡಿದ ಶಾಲೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ, ಅಳಿಕೆ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆ, ಪೆರಡಾಲ ವಲಯ, ಮುಳ್ಳೇರಿಯಾ ಹವ್ಯಕ ಮಂಡಲ, ಗೋಕರ್ಣ ಮಹಾಮಂಡಲ ಹಾಗೂ ಸರ್ವ ಸಮಾಜಕ್ಕೇ ಸ್ಮರಣೀಯವಾಗಿ ಹರ್ಷವನ್ನು ತಂದಿದೆ. ಇವರ ಮುಂದಿನ ಸಾಧನೆಯ ಪಥದಲ್ಲಿ ಶ್ರೇಷ್ಠ ಹಂತವನ್ನು ತಲಪಿ ಯಶಸ್ಸು ದೊರೆಯಲಿ ‘ ಎಂಬುದಾಗಿ ಶುಭ ಹಾರೈಸಿದರು.

 

ಮಹಾಮಂಡಲ ಅಧ್ಯಕ್ಷೆ ಶ್ರೀಮಾತಾ ಪ್ರಶಸ್ತಿಭೂಷಿತೆ ಈಶ್ವರಿ ಬೇರ್ಕಡವು ವಿಶೇಷ ಉಪಸ್ತಿತರಿದ್ದು ಶುಭಾಶಂಸನಾ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಶರ್ಮ ಮಾತನಾಡಿ ” ಈ ಸ್ಥಾನ ಗಳಿಸಲು ಮುಖ್ಯ ಕಾರಣ ಶ್ರೀ ಮಠದ ಅನುಗ್ರಹ, ವಿದ್ಯಾಪೀಠದದ ಕಲಿಕೆ, ಪರೀಕ್ಷೆಗೆ ಬರೆಯುವ ಮೊದಲು ಶ್ರೀ ಗುರುಗಳ ಭೇಟಿ ಅನುಗ್ರಹ, ಮಹಾಪಾದುಕಾ ಪೂಜೆ ಮಾಡಿಸುವ ಭಾಗ್ಯ ಆಗಿರುತ್ತದೆ. ಇನ್ನು ಮುಂದೆಯೂ ಶ್ರೀ ಗುರುಗಳ ಅನುಗ್ರಹ ಇರಬೇಕು. ಮುಂದೆ ಮಹತ್ಸಾಧನೆ ಮಾಡಲು ಆತ್ಮವಿಶ್ವಾಸವನ್ನು ತುಂಬಿಸಿದ್ದೀರಿ. ಎಲ್ಲರಿಗೂ ಚಿರ ಋಣಿ ” ಎಂಬುದಾಗಿ ಕೃತಜ್ಞತಾ ನುಡಿಗಳನ್ನಾಡಿದರು.

 

ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿಕಾರಿಗಳಾದ ಮಹೇಶ್ ಸರಳಿ, ಕೇಶವಪ್ರಸಾದ ಎಡಕ್ಕಾನ, ಕುಸುಮಾ ಪೆರ್ಮುಖ, ಪೆರಡಾಲ ವಲಯ ಪದಾಧಿಕಾರಿಗಳಾದ ಶ್ರೀ ಕೃಷ್ಣ ಭಟ್ಟ ಮಡಿಪ್ಪು, ಜಯಶಂಕರ ಕುಳಮರ್ವ, ಗುರಿಕ್ಕಾರರಾದ ಗೋಪಾಲಕೃಷ್ಣ ಭಟ್ಟ ಅಳಂಬಿನಮೂಲೆ, ಶಾಮ ಭಟ್ಟ ಬೇರ್ಕಡವು ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *